ಬೆಂಗಳೂರು: ಆಪರೇಷನ್ ಕಮಲ ಪ್ರಯತ್ನಗಳ ಬೆನ್ನಲ್ಲಿ, ಮೈತ್ರಿ ಸರ್ಕಾರವನ್ನು ಉಳಿಸುವುದಕ್ಕೆ ಕಾಂಗ್ರೆಸ್ ಯಾವುದೇ ಮಟ್ಟದ ತ್ಯಾಗಕ್ಕೂ ಸಿದ್ದವಿದೆ ಎಂಬ ಸಂದೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದಾರೆ.  ನಾಲ್ವರು ಹಾಲಿ ಸಚಿವರ ಪದತ್ಯಾಗಕ್ಕೆ ರಾಹುಲ್ ಗಾಂಧಿ ಇದೀಗ ಸೂಚನೆ ನೀಡಿದ್ದು,  ಪಕ್ಷೇತರ ಶಾಸಕ ನಾಗೇಶ್‌ಗೆ ಮಂತ್ರಿ ಸ್ಥಾನ ನೀಡಲು ರಾಹುಲ್ ಗಾಂಧಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಸಚಿವಸ್ಥಾನ ಕಳೆದುಕೊಳ್ಳಲಿರುವ ಹಿರಿಯ ಸಚಿವರು ಯಾರು? ಇಲ್ಲಿದೆ ಡಿಟೇಲ್ಸ್

ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಂಡಾಯ ಶಮನಕ್ಕೆ ಯತ್ನಿಸಿರುವ ಕಾಂಗ್ರೆಸ್, ಅತೃಪ್ತರ ಲಿಸ್ಟ್ ನಲ್ಲಿರುವ ಭೀಮಾ ನಾಯ್ಕ್, ನಾಗೇಂದ್ರ, ಪ್ರತಾಪ್ ಗೌಡ ಪಾಟೀಲ್ಗೂ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.

ಇದನ್ನೂ ಓದಿ:  #OperationKamalaಕ್ಕೆ ಬ್ರೇಕ್: ಮರಳಿ ‘ಕೈ’ ಗೂಡಿಗೆ ಬಂಡಾಯ ಶಾಸಕರು!

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಹಿರಿಯರೇ ಪದತ್ಯಾಗ ಮಾಡಬೇಕು, ಯಾವ ನಾಲ್ವರು ಸಚಿವರು ಪದತ್ಯಾಗ ಮಾಡಬೇಕೆಂಬುದನ್ನು ನೀವೇ ನಿರ್ಧರಿಸಿ ಎಂದು ಕಾಂಗ್ರೆಸ್ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ ನೀಡಿದ್ದಾರೆ.