ಬಿಜೆಪಿ ಆಪರೇಶನ್ ಕಮಲಕ್ಕೆ ಕೈಹಾಕಲ್ಲ, ಸರ್ಕಾರ 6 ತಿಂಗಳಲ್ಲಿಯೇ ಕುಲಗೆಟ್ಟು ಹೋಗಿದೆ. ಸೋರುತಿಹುದು ಕಾಂಗ್ರೆಸ್‌ನ ಮನೆಯ ಮಾಳಿಗೆ ಎಂಬಂತಾಗಿದ್ದು, ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದ ಅಂಗಡಿ ತೆರೆದಿದೆ.

ಬೀದರ್‌ (ನ.24): ಬಿಜೆಪಿ ಆಪರೇಶನ್ ಕಮಲಕ್ಕೆ ಕೈಹಾಕಲ್ಲ, ಸರ್ಕಾರ 6 ತಿಂಗಳಲ್ಲಿಯೇ ಕುಲಗೆಟ್ಟು ಹೋಗಿದೆ. ಸೋರುತಿಹುದು ಕಾಂಗ್ರೆಸ್‌ನ ಮನೆಯ ಮಾಳಿಗೆ ಎಂಬಂತಾಗಿದ್ದು, ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದ ಅಂಗಡಿ ತೆರೆದಿದೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಅಧಿಕಾರದಲ್ಲಿರುವುದು ಅನುಮಾನ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅನುಮಾನ ವ್ಯಕ್ತಪಡಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಸಂಸತ್‌ ಚುನಾವಣೆ ನಂತರ ಸರ್ಕಾರ ಉಳಿಯುವುದು ಅನುಮಾನ ಇದೆ ಎಂಬುವುದನ್ನು ಡಿಸಿಎಂ ಶಿವಕುಮಾರ್‌ ಅವರೆ ಖಚಿತಪಡಿಸುತ್ತಿದ್ದಾರೆ. 

ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ಬಣಗಳಾಗಿದ್ದು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆಯುವುದು ನಿಶ್ಚಿತ ಎಂದರು. ಯಾವುದೇ ದಾಖಲೆಗಳಿಲ್ಲದೇ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ ಎಂದು ಆರೋಪಿಸಿದ್ದ ಕಾಂಗ್ರೆಸ್ಸಿನದ್ದೇ ಈಗ 60 ಪರ್ಸೆಂಟ್‌ ಕಮಿಷನ್‌ ಸರ್ಕಾರ ಆಗಿದೆ. ಬಿಬಿಎಂಪಿ ಗುತ್ತಿಗೆದಾರರ 750 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿದ ನಾಲ್ಕು ದಿನದಲ್ಲೇ ಕಾಂಗ್ರೆಸ್‌ ನಾಯಕನ ಮನೆಯಲ್ಲಿ ಕೋಟ್ಯಂತರ ರುಪಾಯಿ ನಗದು ದೊರೆಯುತ್ತದೆ. ಇದು ಕಮಿಷನ್ ಸರ್ಕಾರಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಸೋಲಿನ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರನ್ನು ಪನೌತಿ (ಅಪಶಕುನ) ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ಬುದ್ಧಿ ಭ್ರಮಣೆಯಾಗಿದೆ. ಕ್ರೀಡೆ ಎನ್ನುವುದು ಒಂದು ಸೌಹಾರ್ದತೆಯ ಆಟ. ದೇಶದ ಪ್ರಧಾನಿ ಸ್ಥಾನಕ್ಕೆ ಅಗೌರವ ತೋರಿದ ರಾಹುಲ್‌ ವಿರುದ್ಧ ರಾಷ್ಟ್ರದ ಎಲ್ಲ ಕ್ರೀಡಾಪಟುಗಳು ಪ್ರತಿಭಟಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಮೈ ಚಳಿ ಬಿಡಿಸುತ್ತೇವೆ: ವಿರೋಧ ಪಕ್ಷದ ನಾಯಕರಾಗುತ್ತಿದ್ದಂತೆಯೇ ಆರ್‌. ಅಶೋಕ ರಾಜ್ಯವನ್ನು ಕಾಡುತ್ತಿರುವ ಬರಗಾಲ ಅಧ್ಯಯನವನ್ನು ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಿಂದಲೇ ಶುರು ಮಾಡುವ ಮೂಲಕ ಆಳುವ ಪಕ್ಷದ ಕಿವಿ ಹಿಂಡೋದಾಗಿ ಗುಡುಗಿದ್ದಾರೆ. ಬೆಳೆ ಹಾನಿ ಸಮೀಕ್ಷೆ ಸರಿಯಾಗಿ ಆಗಿಲ್ಲ, ಅದರಲ್ಲಿ ನಿಖರತೆ ಇಲ್ಲ, ಈ ವಿಚಾರದಲ್ಲಿ ಅಧಿಕಾರಿಗಳ ನಾಟಕ ನಡೆದಿದೆ, ಪಂಚ ಗ್ಯಾರಂಟಿಯಲ್ಲಿನ ಉಚಿತಗಳಿಗಿಂತ ಬೆಳೆಹಾನಿ ಪರಿಹಾರ ಕೊಡಿರೆಂದು ರೈತರು ಕೇಳುತ್ತಿದ್ದಾರೆ, ಸರಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು, ನಾವು (ಬಿಜೆಪಿ ಸರಕಾರದಲ್ಲಿ) ನೀಡಿದಂತೆ ಡಬ್ಬಲ್‌ ಬೆಳೆಹಾನಿ ಪರಿಹಾರ ಘೋಷಣೆ ಮಾಡಬೇಕು.

ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಡಲ್ಲ: ಮಾಜಿ ಸಚಿವ ರಾಮದಾಸ್ ಸ್ಪಷ್ಟನೆ

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಇದೇ ವಿಷಯ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ಮಾಡುತ್ತೆವೆ, ಸರ್ಕಾರದ ಕಿವಿ ಹಿಂಡುತ್ತೇವೆಂದು ಅಶೋಕ ಹೇಳಿದ್ದಾರೆ. ಬರಗಾಲ ಅಧ್ಯಯನ ಪ್ರವಾಸದಲ್ಲಿರುವ ಅವರು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಬೆಳಗಾವಿ ಅಧಿವೇಶನದಲ್ಲಿ ಬರ ಪರಿಸ್ಥಿತಿ, ರೈತರ ಸಂಕಷ್ಟ, ಬಿಡಿಗಾಸೂ ರೈತರಿಗೆ ಕೈ ಸೇರದೆ ಇರೋ ವಿಚಾರಗಳನ್ನೇ ಪ್ರದಾನವಾಗಿ ಪ್ರಸ್ತಾಪಿಸುತ್ತೇವೆ, ಜೊತೆಗೇ ಹಲ್ಲೋ ಅಪ್ಪಾ ಅನ್ನೋ ಯತೀಂದ್ರ ಆಡಿಯೋ, ಜಮೀರ್ ಹಿಂದು ವಿರೋಧಿ ಹೇಳಿಕೆ, ಕೆಇಎ ಪರೀಕ್ಷಾ ಹಗರಣ, ಸದನದಲ್ಲಿನ ವೀರ ಸಾವರ್ಕರ್‌ ಫೋಟೋ ವಿಚಾರ ಸೇರಿದಂತೆ ಇನ್ನೂ ಹಲವು ಅಸ್ತ್ರಗಳನ್ನು ಕಾಂಗ್ರೆಸ್ಸಿಗರೇ ಬಿಜೆಪಿ ಕೈಗಿತ್ತಿದ್ದು ಅವನ್ನೆಲ್ಲ ಒಂದೊಂದಾಗಿ ಝಳುಪಿಸುತ್ತೇವೆಂದರು.