Asianet Suvarna News

'ಡಿಕೆಶಿಯವರೇ ಸ್ಮಾರ್ಟ್​​ ಆಗಿ, ಓವರ್​ ಸ್ಮಾರ್ಟ್​ ಬೇಡ, ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ'

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ನಡುವಿನ ರಾಜಕೀಯ ಹಗ್ಗಾಜಗ್ಗಾಟ ಮುಂದುವರಿದಿದೆ.

R Ashok hits back at and said rules cant be changed because DKS has KPCC President
Author
Bengaluru, First Published May 6, 2020, 4:32 PM IST
  • Facebook
  • Twitter
  • Whatsapp

ಬೆಂಗಳೂರು(ಮೇ.06): ನೀವು ಸ್ಮಾರ್ಟ್​ ಆಗಿ, ಓವರ್​​ ಸ್ಮಾರ್ಟ್​ ಆಗಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ವಿರುದ್ಧ ಕಂದಾಯ ಇಲಾಖೆ ಸಚಿವ ಆರ್​​. ಅಶೋಕ್​​ ಹರಿಹಾಯ್ದಿದ್ದಾರೆ.

"

ಬೆಂಗಳೂರಿನಲ್ಲಿ ಇಂದು (ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ನೀವು ಹೊಸದಾಗಿ ಕೆಪಿಸಿಸಿ ಅಧ್ಯಕ್ಷ ಆಗಿದ್ದೀರಿ ಎನ್ನುವುದು ಗೊತ್ತಿದೆ. ಹೊಸದಾಗಿ ಮದುವೆ ಆದಾಗ ಎಲ್ಲೆಲ್ಲೂ ಹೋಗಬೇಕು ಅನಿಸತ್ತೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ 1 ಕೋಟಿ ರೂ. ಚೆಕ್ ನಕಲಿಯೋ? ಅಸಲಿಯೋ? ಉತ್ತರಿಸಿದ ಡಿಕೆಶಿ

ಡಿ.ಕೆ ಶಿವಕುಮಾರ್‌ ಅವರಿಂದ ನಮ್ಮ ಸರ್ಕಾರ ನಡೆಯುತ್ತಿಲ್ಲ. ಕಾಂಗ್ರೆಸ್ ಪಕ್ಷದವರೇ ಡಿಕೆಶಿ ಮಾತು ಕೇಳಲ್ಲ. ಇನ್ನು ನಾವು ಡಿ.ಕೆ ಶಿವಕುಮಾರ್ ಮಾತು ಕೇಳ್ಬೆಕಾ..? ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇದ್ದಾರೆ. ಅವರ ಸಲಹೆ ಕೊಡಲಿ ಕೇಳ್ತೀವಿ. ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎನ್ನುವರಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎನ್ನುವ ಮೂಲಕ ಡಿಕೆಶಿ ವಿರುದ್ಧ ಕಿಡಿಕಾರಿದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅಂತಾರೇ ಚೆಕ್​ ಮೇಲೆ ಗುಂಡೂರಾವ್​​​​ ಸಹಿ ಇದೆ. ನಿಮ್ಮ ಸಲಹೆ ನಮಗೆ ಬೇಕಿಲ್ಲ. ನಾನು ಸರ್ಕಾರ ಕೇಳಿದರೆ ಹಣ ನೀಡುತ್ತೇನೆ ಎಂದ್ದಿದೀರಿ. ನಮಗೆ ನಿಮ್ಮ ಹಣ ಬೇಕಿಲ್ಲ. ನಿಮ್ಮ ಬಳಿ ಅಷ್ಟು ಹಣ ಇದ್ದರೆ ರಾಜ್ಯದ ಪ್ರತಿ ಮನೆಗೆ 20 ಸಾವಿರ ರೂ. ಕೊಡಿ ಎಂದು ತಿರುಗೇಟು ನೀಡಿದರು.

'ಕೆಎಸ್‌ಆರ್‌ಟಿಸಿಗೆ ಕಾಂಗ್ರೆಸ್ ಕೊಟ್ಟ 1 ಕೋಟಿ ರೂ. ಚೆಕ್ ನಕಲಿ'

ಇನ್ನು ಇದೇ ವೇಳೆ ಹೊರ ರಾಜ್ಯದ ಕರ್ಮಿಕರ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್,  ಇದುವರೆಗೆ ರಾಜ್ಯದಿಂದ ಹೊರ ರಾಜ್ಯಕ್ಕೆ 9600 ಜನ ಕಾರ್ಮಿಕರು ಹೋಗಿದ್ದಾರೆ. ಒಡಿಶಾ, ರಾಜಸ್ಥಾನ, ಬಿಹಾರ, ಜಾರ್ಖಂಡ್ ರಾಜ್ಯಗಳ ಕಾರ್ಮಿಕರು ವಾಪಸ್ ಆಗಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಕಾರ್ಮಿಕರು ಹೋಗಲು ಇನ್ನೂ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿ ಕೊಟ್ಟಿಲ್ಲ. 2 ಲಕ್ಷ ಜನ ಹೋಗಲು ನೊಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios