ಬೆಂಗಳೂರು, (ಮೇ.04): ಕಾರ್ಮಿಕರಿಗೆ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಬೇಕೆಂದು ಒತ್ತಾಯಿಸಿದ್ದಲ್ಲದೇ, ರಾಜ್ಯ ಕಾಂಗ್ರೆಸ್ 1 ಕೋಟಿ ರೂ. ಚೆಕ್ ಸಹ ನೀಡಿ ಗಮನಸೆಳೆದಿದೆ ಆದ್ರೆ, ಹಾಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಲೆಟರ್, ಚೆಕ್‌ ಮೇಲೆ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ‌ ಸಹಿ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ವಲಸಿಗ ಕಾರ್ಮಿಕರಿಗೆ ತಮ್ಮ ಗೂಡಿಗೆ ತೆರಳಲು ಅನುಮತಿ ನೀಡಿ, ರಾಜ್ಯದಲ್ಲಿ ನಿಗದಿತ ಪ್ರಮಾಣದಲ್ಲಿ ಬಸ್‌ ಸಂಚಾರ ಆರಂಭವಾಗಿದೆ. 

ಲಾಕ್‌ಡೌನ್: ಗ್ರಾಮ ಪಂಚಾಯತ್​ ಎಲೆಕ್ಷನ್ ಡೌಟ್, ಬೇರೆ ತೀರ್ಮಾನ ಕೈಗೊಂಡ ಸರ್ಕಾರ

ಇದಕ್ಕೂ ಮೊದಲು ರಾಜ್ಯ ಸರ್ಕಾರ ದುಪ್ಪಟ್ಟು ದರ ನಿಗದಿ ಮಾಡಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್, ಮೆಜೆಸ್ಟಿಕ್‌ಗೆ ಲಗ್ಗೆ ಇಟ್ಟು ಕಾರ್ಮಿಕರನ್ನು ಸಂತೈಹಿಸುವ ಕೆಲಸ ಮಾಡಿತು. ಅಲ್ಲದೇ ಕಾರ್ಮಿಕರಿಗೆ ಉಚಿತವಾಗಿ ಹೋಗಲು ಒಂದು ಕೋಟಿ ರೂ. ಚೆಕ್ ಸಹ ನೀಡಿ ಗಮನಸೆಳೆದಿತ್ತು.

ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ  ಉಚಿತ ಸೇವೆ ಆರಂಭಿಸಿದೆ. ಈ ಘೋಷಣೆ ಆಗಿದ್ದೇ ತಡ ರಾಜ್ಯ ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಸೇರಿದಂತೆ ಘಟಾನುಟಿ ನಾಯಕರು ಮೆಜೆಸ್ಟಿಕ್‌ಗೆ ಬಂದು ಕಾರ್ಮಿಕರ ಕಷ್ಟ, ಸಮಸ್ಯೆಗಳನ್ನು ಹಾಲಿಸಿ ಬಳಿಕ ಅವರಿಗೆ ಆಹಾರದ ಪೊಟ್ಟಣ ನೀಡಿ ಕಳುಹಿಸಿದರು.

ಕಾರ್ಮಿಕರ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್‌ನಿಂದ 1 ಕೋಟಿ ರೂ.!

ಇದಕ್ಕೆ ಟಾಂಗ್ ಕೊಡಲು ಆಡಳಿತ ಪಕ್ಷದ ಸಚಿವರುಗಳಾದ ಸುರೇಶ್ ಕುಮಾರ್, ಲಕ್ಷ್ಮಣ ಸವದಿ ಸೇರಿದಂತೆ ಬಿಜೆಪಿ ನಾಯಕರು ಸಹ ಇಂದು (ಸೋಮವಾರ) ಮೆಜೆಸ್ಟಿಕ್‌ಗೆ ದಾಪುಗಾಲಿಟ್ಟು ಕಾರ್ಮಿರಿಗೆ ಮಾಸ್ಕ್, ಆಹಾರ ನೀಡಿದರು.

1 ಕೋಟಿ ರೂ. ಚೆಕ್ ನಕಲಿ ಎಂದ ಅಶೋಕ್
ಹೌದು....ಕಾರ್ಮಿಕರಿಗೆ ಉಚಿತವಾಗಿ ಅವರವರ ಊರಿಗೆ ಕಳುಹಿಸಲು ಕೆಎಸ್‌ಆರ್‌ಟಿಸಿಗೆ ಕಾಂಗ್ರೆಸ್ ವತಿಯಿಂದ ಒಂದು ಕೋಟಿ ರೂ. ಚೆಕ್ ನೀಡಿದರು. ಆದ್ರೆ, ಈ ಚೆಕ್ ನಕಲಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸಚಿವರು ಸಾಮಾಜಿಕ ಅಂತರ ಕಾದುಕೊಂಡಿಲ್ಲ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡ್ತಾರೆ. ನಮ್ಮ ಸಚಿವರು ಹೋಮ್ ಕ್ವಾರಂಟೈನ್ ಆಗಿದ್ದಾರೆ. ಆದ್ರೆ ಇವರು ಭಾನುವಾರ ಮಾಡಿದ್ದು ಏನು ಎಂದು ಪ್ರಶ್ನಿಸಿದರು. 

ವಿರೋಧ ಪಕ್ಷ 'ಕೈ'ಗೆ ತಾನಾಗಿಯೇ ಪ್ರಬಲ ಅಸ್ತ್ರವನ್ನು ನೀಡಿದ ಸರ್ಕಾರ

ಕಾಂಗ್ರೆಸ್ ಅಧ್ಯಕ್ಷರ ನೀಡಿದ ಚೆಕ್ ಮೇಲೆ ದಿನೇಶ್ ಗುಂಡೂರಾವ್  ಸಹಿ ಇದೆ. ಆದರೆ ಅಧ್ಯಕ್ಷ ಡಿಕೆ ಶಿವಕುಮಾರ್  ಅವರ ಲೆಟರ್ ಹೆಡ್ ಇದೆ. ಇವರ ಒಳ ಜಗಳ ಏನಿದೆಯೋ ಗೊತ್ತಿಲ್ಲ.

ಚೆಕ್ ಮೇಲೆ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಕೂಡ ನಕಲಿ ಎಂದು ಹೇಳಿದ ಅಶೋಕ್, ಇವರಿಗೆ ಅಕೌಂಟ್ ಚೆಂಜ್ ಮಾಡುವ ಜ್ಞಾನ ಇಲ್ಲ. ಬಸ್ ಬಿಡುವ ಬಗ್ಗೆ ನಮಗೆ ಸಲಹೆ ನೀಡುತ್ತಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದರು.