ಪಂಜಾಬ್ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆ ಅಕಾಲಿದಳದ ಮಾಜಿ ನಾಯಕರು ಬಿಜೆಪಿ ತೆಕ್ಕೆಗೆ

ಪಂಜಾಬ್(ಜೂ.04): ಕಳೆದ ಕೆಲ ದಿನಗಳಿಂದ ಪಂಜಾಬ್ ಭಾರಿ ಸುದ್ದಿಯಲ್ಲಿದೆ.ಆಪ್ ಸರ್ಕಾರದ ನಡೆ, ಗಾಯಕ ಸಿಧು ಮೂಸೆ ವಾಲಾ ಹತ್ಯೆ, ಪ್ರತಿಭಟನೆ, ರಾಜಕೀಯ ಹೋರಾಟಗಳಿಂದ ಪಂಜಾಬ್ ದೇಶದಲ್ಲಿ ಸುದ್ದಿಯಾಗಿದೆ. ಇದೀಗ ಪಂಜಾಬ್‌ನಲ್ಲಿ ರಾಜಕೀಯ ಬೆಳವಣಿಗೆಗಳು ಅಷ್ಟೇ ಜೋರಾಗಿ ನಡೆಯುತ್ತಿದೆ. ಈ ಬೆಳವಣಿಗೆಯಲ್ಲಿ ಪಂಜಾಬ್ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್ ಕಾಂಗ್ರೆಸ್‌ನ ಐವರು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಾತಾಳಕ್ಕೆ ಕುಸಿದ ಕಾಂಗ್ರೆಸ್ ಇದೀಗ ಹಲವು ನಾಯಕರನ್ನು ಕಳೆದುಕೊಳ್ಳುತ್ತಲೆ. ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನಿಲ್ ಜಕಾರ್ ಬಿಜೆಪಿ ಸೇರಿಕೊಂಡ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪ್ರಮುಖ ನಾಯಕರಾದ ಬಲ್ಬೀರ್ ಸಿಂಗ್ ಸಿಧು, ರಾಜ್ ಕುಮಾರ್ ವೆರ್ಕಾ, ಸುಂದರ್ ಶ್ಯಾಮ್ ಆರೋರಾ ಹಾಗೂ ಗುರುಪ್ರೀತ್ ಸಿಂಗ್ ಕಂಗರ್ ಬಿಜೆಪಿ ಸೇರಿಕೊಂಡಿದ್ದಾರೆ. 

 ಪಂಜಾಬ್ ರಾಜಕೀಯದಲ್ಲಿ ಮತ್ತೊಂದು ಸಂಚಲನ, ಕಾಂಗ್ರೆಸ್ ತೊರೆದಿದ್ದ ಮಾಜಿ ಅಧ್ಯಕ್ಷ ಬಿಜೆಪಿ ಸೇರ್ಪಡೆ!

ಕಾಂಗ್ರೆಸ್ ಮಾತ್ರವಲ್ಲ, ಶಿರೋಮಣಿ ಅಕಾಲಿದಳ(SAD) ಪಕ್ಷದ ಹಿರಿಯ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. SAD ಮಾಜಿ ನಾಯಕ ಸರುಪ್ ಚಾಂದ್ ಸಿಂಗ್ಲಾ ಹಾಗೂ ಮೊಹಿಂದರ್ ಕೌರ್ ಜೋಶ್ ಬಿಜೆಪಿ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಕಾಂಗ್ರೆಸ್ ಮಾಜಿ ಶಾಸಕ ಕೇವಲ್ ದಿಲ್ಹೋನ್ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ.ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಸೋಮ್ ಪ್ರಕಾಶ್ ಸಮ್ಮುಖದಲ್ಲಿ ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. 

50 ವರ್ಷ ಕಾಂಗ್ರೆಸ್ಸಲ್ಲಿದ್ದ ಪಂಜಾಬ್‌ ಮಾಜಿ ಅಧ್ಯಕ್ಷ ಸುನಿಲ್‌ ಜಾಖಡ್‌ ಬಿಜೆಪಿಗೆ
ಕಳೆದ 50 ವರ್ಷ ಕಾಂಗ್ರೆಸ್‌ ಪಕ್ಷದಲ್ಲಿದ್ದ ಸುನೀಲ್‌ ಜಾಖಡ್‌ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಪಂಜಾಬ್‌ ಕಾಂಗ್ರೆಸ್ಸಿನ ಅಧ್ಯಕ್ಷರಾದ ಇವರು ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಜಾಖಡ್‌ ಈ ಮೊದಲು 3 ಬಾರಿ ಶಾಸಕ ಹಾಗೂ ಗುರುದಾಸ್‌ಪುರದಿಂದ ಮಾಜಿ ಲೋಕಸಭಾ ಸದಸ್ಯರೂ ಆಗಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿಯಲ್ಲಿ ಕಾಂಗ್ರೆಸ್‌ ಶಿಸ್ತು ಸಮಿತಿಯು ಜಾಖಡ್‌ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಜಾಖಡ್‌ ಕಾಂಗ್ರೆಸ್‌ ಪಕ್ಷದ ಸದಸ್ಯತ್ವಕ್ಕೆ ಕಳೆದ ವಾರ ರಾಜೀನಾಮೆ ನೀಡಿದ್ದರು.

ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!

ಕಪಿಲ್‌ ಸಿಬಲ್‌ ಗುಡ್‌ಬೈ
ಇತ್ತೀಚೆಗೆ ಜೈಪುರದಲ್ಲಿ ನಡೆದ ಚೈತನ್ಯ ಚಿಂತನ ಶಿಬಿರದ ಬಳಿಕ 2024ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಪಕ್ಷದ ಹಿರಿಯ ಮತ್ತು ಬಂಡಾಯ ನಾಯಕರ ಪೈಕಿ ಒಬ್ಬರಾದ ಕಪಿಲ್‌ ಸಿಬಲ್‌ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಮೇ 16ರಂದೇ ಕಪಿಲ್‌ ಸಿಬಲ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಬುಧವಾರ ಈ ವಿಷಯ ಬೆಳಕಿಗೆ ಬಂದಿದೆ.

ಅದರ ಬೆನ್ನಲ್ಲೇ ಸಿಬಲ್‌ ಅವರು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ, ಪಕ್ಷೇತರ ಅಭ್ಯರ್ಥಿಯಾಗಿ ಉತ್ತರಪ್ರದೇಶದಿಂದ ಬುಧವಾರ ನಾಮಪತ್ರವನ್ನು ಕೂಡಾ ಸಲ್ಲಿಸಿದ್ದಾರೆ. ಬುಧವಾರ ನಾಮಪತ್ರ ಸಲ್ಲಿಕೆ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಗೋಪಾಲ್‌ ಯಾದವ್‌ ಮತ್ತಿತರ ಹಿರಿಯ ನಾಯಕರು ಉಪಸ್ಥಿತರಿದ್ದರು.