Asianet Suvarna News Asianet Suvarna News

Election Result 2022 ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!

  • ಎರಡು ಕ್ಷೇತ್ರದಲ್ಲಿ ಸೋಲು ಕಂಡ ಹಾಲಿ ಸಿಎಂ ಚರಣ್‌ಜಿತ್ ಸಿಂಗ್
  • ಆಪ್ ಅಭ್ಯರ್ಥಿ ಲಭಾ ಸಿಂಗ್ ವಿರುದ್ಧ ಮುಗ್ಗರಿಸಿದ ಚರಣ್‌ಜಿತ್
  • ಚಮ್ಕೌರ್ ಸಾಹೀಬ್ ಹಾಗೂ ಬದೌರ್ ಕ್ಷೇತ್ರದಲ್ಲಿ ಸಿಎಂಗೆ ಸೋಲು
Punjab Election Result 2022 CM Charanjit Singh Channi lost Bhadaur seat against Mobile Repair aap candidate Labh Singh ckm
Author
Bengaluru, First Published Mar 10, 2022, 4:45 PM IST

ಚಂಡಿಗಢ(ಮಾ.10): ಪಂಜಾಬ್‌ನಲ್ಲಿ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದೆ. ಎಷ್ಟು ಹದಗೆಟ್ಟಿದೆ ಎಂದರೆ ಕಾಂಗ್ರೆಸ್‌ನ ಸಿಎಂ, ಪಕ್ಷದ ಅಧ್ಯಕ್ಷ ಸೇರಿ ಅದೆಂತಾ ಘಟಾನುಘಟಿ ನಾಯಕನಾದರೂ ಸರಿ, ಸಾಮಾನ್ಯರ ಮುಂದೆ ಸೋಲಿಗೆ ಎದೆಯೊಡ್ಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಂಗ್ರೆಸ್ ನಾಯಕ, ಹಾಲಿ ಸಿಎಂ ಚರಣಜಿತ್ ಸಿಂಗ್ ಪರಿಸ್ಥಿತಿ ಇದೆ ಆಗಿದೆ. ಬದೌರ್ ಹಾಗೂ ಚಮ್ಕೌರ್ ಸಾಹೀಬ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚರಣ್‌ಜಿತ್ ಸಿಂಗ್ ಚನಿ ಎರಡೂ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಅದರಲ್ಲೂ ಬದೌರ್ ಕ್ಷೇತ್ರದಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿರುವ ಆಪ್ ಆಭ್ಯರ್ಥಿ ಲಭಾ ಸಿಂಗ್ ವಿರುದ್ಧದ ಸೋಲು ಇದೀಗ ಭಾರಿ ಚರ್ಚೆಯಾಗುತ್ತಿದೆ.

ಆಮ್ ಆದ್ಮಿ ಪಾರ್ಟಿ ಪಂಜಾಬ್‌ ಪೂರ್ತಿ ಗುಡಿಸಿ ಬಿಟ್ಟಿದೆ. ಪಂಜಾಬ್ ಅಧಿಕಾರಕದಲ್ಲಿತ್ತು, ಸುಭದ್ರವಾಗಿತ್ತು ಅನ್ನೋ ಸಣ್ಣ ಕುರುಹು ಕೂಡ ಕಾಣದಂತೆ ಗುಡಿಸಿದೆ. ಆಪ್ ಅಬ್ಬರಕ್ಕೆ ಕಾಂಗ್ರೆಸ್ ತರಗೆಲೆಯಂತೆ ಉದುರಿದೆ. ಹೀಗೆ ವಿಕೆಟ್ ಪತನದಲ್ಲಿ ಚರಣ್‌ಜಿತ್ ಸಿಂಗ್ ಚನಿ ಮೊದಲ ಸ್ಥಾನದಲ್ಲಿದ್ದಾರೆ. ಬದೌರ್ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಲಬಾ ಸಿಂಗ್  57,000 ಮತಗಳನ್ನು ಪಡೆದಿದ್ದಾರೆ. ಇನ್ನು ಚರಣಜಿತ್ ಸಿಂಗ್ 23,000 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿದೆ.

Uttarakhand Elections: ಬಿಜೆಪಿ ಗೆದ್ದರೂ ಸಿಎಂಗೆ ಸೋಲು: 6,900 ಮತಗಳ ಅಂತರದಿಂದ ಮುಗ್ಗರಿಸಿದ ಧಾಮಿ

ಇನ್ನು ಚಮ್ಕೌರ್ ಸಾಹೀಬ್ ಕ್ಷೇತ್ರದಲ್ಲಿ ಚರಣಜಿತ್ ಸಿಂಗ್ ಚನಿ ಪರ ಜನರ ಒಲವಿತ್ತು. ಇದನ್ನು ಅರಿತ ಆಮ್ ಆದ್ಮಿ ಪಾರ್ಟಿ ಚರಣ್‌ಜಿತ್ ಸಿಂಗ್ ಹೆಸರಿನ ಅಭ್ಯರ್ಥಿಯನ್ನೇ ಇಲ್ಲಿ ಕಣಕ್ಕಿಳಿಸಿತ್ತು. ಹೆಸರಿನ ಗೊಂದಲಲ್ಲಿ ಅದೆಷ್ಟು ಮಂದಿ ಮತದಾನದ ಮಾಡಿದ್ದಾರೆ ಅನ್ನೋದು ಸ್ಪಷ್ಟವಿಲ್ಲ. ಆದರೆ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ 50,000 ಮತಗಳನ್ನು ಪಡೆದರೆ, ಚನಿ ವಿರುದ್ಧ ಗೆದ್ದ ಆಪ್ ಅಭ್ಯರ್ಥಿ ಚರಣ್‌ಜಿತ್ ಸಿಂಗ್ 54,000 ಮತಗಳನ್ನು ಪಡೆದು ಗೆದ್ದಿದ್ದಾರೆ.

ಫಲಿತಾಂಶದ ಬಳಿಕ  ಚರಣ್ ಜಿತ್ ಸಿಂಗ್ ಟ್ವೀಟ್ ಮೂಲಕ ಜರನ ತೀರ್ಪನ್ನು ಗೌರವಿಸುತ್ತೇನೆ ಎಂದಿದ್ದಾರೆ. ಪಂಜಾಬ್ ಜನತೆ ನೀಡಿದ ತೀರ್ಪನ್ನು ಸ್ವೀಕರಿಸುತ್ತೇನೆ. ಇದೇ ವೇಳೆ ಪಂಜಾಬ್‌ನಲ್ಲಿ ಚುನಾಯಿತ ಆಮ್ ಆದ್ಮಿ ಪಕ್ಷವನ್ನು ಹಾಗೂ ನೂತನ ಮುಖ್ಯಮಂತ್ರಿಯಾಗಲಿರುವ ಭಗವಂತ್ ಸಿಂಗ್ ಮಾನ್ ಅವರನ್ನು ಅಭಿನಂದಿಸುತ್ತೇನೆ. ಹೊಸ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಮುಖಭಂಗ, ಅಧ್ಯಕ್ಷ ಸ್ಥಾನ ಬಿಡಲು ಸಿಧು ನಿರ್ಧಾರ

1952ರ ಇತಿಹಾಸ ಮರುಸೃಷ್ಟಿಸಿದ ಲಭಾ ಸಿಂಗ್
ಪಂಜಾಬ್ ಚುನವಣಾ ಇತಿಹಾಸದಲ್ಲಿ 1952 ಪ್ರಮುಖ ಘಟ್ಟ. ಈ ಚನಾವಣೆಯಲ್ಲಿ ಆಗರ್ಭ ಶ್ರೀಮಂತ ನಿರ್ಪಾಲ್ ಭರ್ಜರಿ ಪ್ರಚಾರ ನಡೆಸಿದ್ದರು. 1952ರ ಕಾಲದಲ್ಲಿ 1 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಪ್ರಚಾರಕ್ಕೆ ಬಳಸಿದ್ದರು. ರಾಜ ಮನೆತನದ ನಿರ್ಪಾಲ್ ಸಿಂಗ್, ಒಂದು ಅರಮನೆ, ಹಲವು ಮನೆ, ಸಾವಿರಾರು ಏಕರೆ ಜಮೀನು, ಕಾರು ಸೇರಿದಂತೆ ಎಲ್ಲಾ ಐಶ್ವರ್ಯ ಹೊಂದಿದ್ದರು. ನಿರ್ಪಾಲ್ ಗೆಲುವ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ನಿರ್ಪಾಲ್ ವಿರುದ್ಧ ಸ್ಪರ್ಧಿಸಿದ್ದ ಕಮ್ಯೂನಿಸ್ಟ್ ಪಕ್ಷದ ಬಾಬಾ ಅರ್ಜುನ್ ಸಿಂಗ್ ಜಮೀನು ರಹಿತ ರೈತನಾಗಿದ್ದರು. ಎತ್ತಿನ ಗಾಡಿಯಲ್ಲಿ ತೆರಳು ಬದೌರ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಬದೌರ್ ಜನ ನಿರ್ಪಾಲ್ ಸಿಂಗ್ ತಿರಸ್ಕರಿಸಿ ಅರ್ಜುನ್ ಸಿಂಗ್‌ಗೆ ಮತ ನೀಡಿದ್ದರು. ಪರಿಣಾಮ 1952ರ ಚುನಾವಣೆಯಲ್ಲಿ ಅರ್ಜುನ್ ಸಿಂಗ್ ಇತಿಹಾಸ ಬರೆದಿದ್ದರು. ಈ ಘಟನೆಯನ್ನು ಸ್ವತಃ ಲಭಾ ಸಿಂಗ್ ಇತ್ತೀಚಗೆ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರು. ಇದೇ ಇತಿಹಾಸ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. 

ಚುನಾವಣಾ ನಾಮಪತ್ರಿ ಸಲ್ಲಿಸುವ ವೇಳೆ ನೀಡಿದ್ದ ಅಫಿದವಿತ್‌ನಲ್ಲಿ ತನ್ನ ಆಸ್ತಿಯ್ನು ಉಲ್ಲೇಖಿಸಿದ ಲಭಾ ಸಿಂಗ್, 2014ರ ಹೀರೋ ಹೋಂಡಾ ಬೈಕ್ ಇದೆ. ಅದೇ ತನ್ನ ಆಸ್ತಿ ಎಂದು ಉಲ್ಲೇಖಿಸಿದ್ದಾರೆ. ನಾನು ಹೆಚ್ಚಾಗಿ ಬಸ್‌ನಲ್ಲಿ ಓಡಾತ್ತೇನೆ. ಬೈಕ್ ಹೊರತು ಪಡಿಸಿದರೆ ನನ್ನಲ್ಲಿ ಏನೂ ಇಲ್ಲ. ಮೊಬೈಲ್ ರಿಪೇರಿ ಶಾಪ್ ಇದೆ. ಶಾಪ್ ಮಾಲೀಕರಿಗೆ ಬಾಡಿಗೆ ನೀಡುತ್ತೇನೆ. ಜನರು ನನಗೆ ಮತ ಹಾಕುವ ವಿಶ್ವಾಸವಿದೆ ಎಂದು ಲಭಾ ಸಿಂಗ್ ಹೇಳಿದ್ದರು. ಇದೀಗ ಈ ಮಾತುಗಳು ನಿಜವಾಗಿದೆ.

Follow Us:
Download App:
  • android
  • ios