AAP Karnataka: ಇಂದು ಹುಬ್ಬಳ್ಳಿಗೆ ಪಂಜಾಬ್ ಸಿಎಂ ಭಗವಂತ ಮಾನ್: ಭರ್ಜರಿ ಪ್ರಚಾರ ಆರಂಭಿಸಿ ಆಪ್!
ಏ. 18ರಂದು ಸಂಜೆ 5 ಗಂಟೆಗೆ ಗೋಕುಲ್ ರಸ್ತೆಯಿಂದ ಆಮ್ ಆದ್ಮಿ ಪಕ್ಷದಿಂದ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಅಂದು ನಡೆಯುವ ರಾರಯಲಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪಾಲ್ಗೊಳ್ಳುವರು ಎಂದು ಆಮ್ ಆದ್ಮಿ ಪಕ್ಷದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿ ವಿಕಾಸ ಸೊಪ್ಪಿನ ಹೇಳಿದರು.
ಹುಬ್ಬಳ್ಳಿ (ಏ.17) : ಏ. 18ರಂದು ಸಂಜೆ 5 ಗಂಟೆಗೆ ಗೋಕುಲ್ ರಸ್ತೆಯಿಂದ ಆಮ್ ಆದ್ಮಿ ಪಕ್ಷದಿಂದ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಅಂದು ನಡೆಯುವ ರಾರಯಲಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪಾಲ್ಗೊಳ್ಳುವರು ಎಂದು ಆಮ್ ಆದ್ಮಿ ಪಕ್ಷದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ(Hubli-Dharwad Central Assembly Constituency)ದ ಅಭ್ಯರ್ಥಿ ವಿಕಾಸ ಸೊಪ್ಪಿನ (Vikas soppin)ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, Rally ಗೋಕುಲ್ ರಸ್ತೆಯ ಅಕ್ಷಯ ಪಾರ್ಕ್ನಿಂದ ಸಿದ್ಧಾರೂಡ ಮಠ(Siddarudha mutt), ಇಂಡಿ ಪಂಪ್, ಪತೇಶಾವಲಿ ದರ್ಗಾ ಮೂಲಕ ಹಳೇ ಹುಬ್ಬಳ್ಳಿ ವೃತ್ತಕ್ಕೆ ಆಗಮಿಸಲಿದೆ. ನಂತರ ಅಲ್ಲಿ ನಡೆಯುವ ಸಭೆಯಲ್ಲಿ ಭಗವಂತ ಮಾನ್ ಮಾತನಾಡುವರು. ಈ ರಾರಯಲಿಯಲ್ಲಿ 3 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳುವರು.
ಕೇಜ್ರಿವಾಲ್ ಪರ ವಕಾಲತ್ತು ವಹಿಸಬೇಡಿ; ವಕೀಲರಲ್ಲಿ ಕಾಂಗ್ರೆಸ್ ನಾಯಕ ಮಾಕೇನ್ ಮನವಿ!
ನಾಳೆ ನಾಮಪತ್ರ ಸಲ್ಲಿಕೆ:
ಆಮ್ ಆದ್ಮಿ ಪಕ್ಷ(Aam Aadmi Party)ದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಏ. 19ರಂದು ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಸಾಂಪ್ರದಾಯಿಕ ವಾದ್ಯ ವೃಂದದೊಂದಿಗೆ, ಎಲ್ಲ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಪಾಲಿಕೆ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಈ ವೇಳೆ ಪಕ್ಷದ ರಾಜ್ಯಮಟ್ಟದ ಮುಖಂಡರು ಭಾಗವಹಿಸುವರು ಎಂದರು.
ಕಿಶೋರ ಶೆಟ್ಟಿ, ಶ್ರೀರಂಗ ಮುತಾಲಿಕ ದೇಸಾಯಿ, ಪ್ರತಿಭಾ ದಿವಾಕರ, ನಾಮದೇವ ಬೀಳಗಿ, ಹಸನ ಇನಾಮದಾರ, ಪ್ರೊ. ವಿಜಯಕುಮಾರ ಸೇರಿ ಹಲವರಿದ್ದರು.
ಬಿಜೆಪಿಗೆ ಕೇವಲ ಲಿಂಗಾಯತ ಕೈಗೊಂಬೆಗಳು ಬೇಕಿವೆ:
ಬಿಜೆಪಿಗೆ ಕೇವಲ ಲಿಂಗಾಯತ ಗೊಂಬೆಗಳು ಬೇಕಾಗಿವೆ ಎಂದು ವಿಕಾಸ ಸೊಪ್ಪಿನ ಆರೋಪಿಸಿದರು.
ಬಿಜೆಪಿ(Karnataka BJP)ಗೆ ಮಾತನಾಡದ, ಹೇಳಿದ ಮಾತು ಕೇಳುವಂತಹ ಗೊಂಬೆ ಇರಬೇಕು. ಅಂಥವರು ಮಾತ್ರ ಪಕ್ಷದಲ್ಲಿರುತ್ತಾರೆ. ಈಗಾಗಲೇ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಎಸ್.ಐ. ಚಿಕ್ಕನಗೌಡರ ಸೇರಿದಂತೆ ಹಲವು ನಾಯಕರು ಬಿಜೆಪಿ ತೊರೆದಿದ್ದಾರೆ. ಶಾಸಕ ಬೆಲ್ಲದ ಅವರೂ ಗೊಂಬೆಯ ತರಹ ಬಿಜೆಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇಂದಿಗೂ ಪಕ್ಷದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಚುನಾವಣೆ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಆಪ್, ರಾಷ್ಟ್ರೀಯ ಪಕ್ಷಕ್ಕಾಗಿ ಪಟ್ಟು!
ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಮತದಾರರು ಹಾಗೂ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಯಾರ ಪರವಾಗಿ ಮತ ಚಲಾಯಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಅನ್ಯ ಪಕ್ಷಗಳಂತೆ ನಾವು ಯಾವುದೇ ಜಾತಿ, ಧರ್ಮದ ಮೇಲೆ ಚುನಾವಣೆ ಎದುರಿಸುತ್ತಿಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಇಚ್ಛೆಯೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.