Election Result ಕಾಮಿಡಿಯನ್‌ಗೆ ಸಿಎಂ ಪಟ್ಟ, ಕಾಮಿಡಿ ಶೋ ಜಡ್ಜ್‌ಗೆ ಸೋಲಿನ ಆಘಾತ!
- ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್‌ಗೆ ಸೋಲು
- ಆಪ್ ಮಹಿಳಾ ಅಭ್ಯರ್ಥಿ ಮುಂದೆ ಶರಣಾದ ಸಿಧು
- ಆಪ್ ಪಕ್ಷದ ಕಾರ್ಯಕರ್ತೆಯಾಗಿದ್ದ ಜೀವನ್ ಜ್ಯೋತ್ ಕೌರ್
ಚಂಡಿಗಢ(ಮಾ.10): ಪಂಚ ರಾಜ್ಯಗಳ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಪಂಜಾಬ್. ಆಡಳಿತರೂಢ ಕಾಂಗ್ರೆಸ್ ನೆಲಕ್ಕಪ್ಪಳಿಸಿದರೆ, ಆಮ್ ಆದ್ಮಿ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರದ ಗದ್ದು ಏರುತ್ತಿದೆ. ಪಂಜಾಬ್ ಕಾಂಗ್ರೆಸ್ ಧೂಳೀಪಟದ ಹಿಂದೆ ಅಧ್ಯಕ್ಷ ನವಜೋತ್ ಸಿಂಗ್ ಪಾಲು ಅತೀ ದೊಡ್ಡದು. ಪಕ್ಷವನ್ನು ಅಧಿಕಾರಿದಲ್ಲಿ ಉಳಿಸಿಕೊಳ್ಳಲಾಗಲಿಲ್ಲ, ಕೊನೆ ಪಕ್ಷ ತಾನು ಸ್ಪರ್ಧಿಸಿದ ಕ್ಷೇತ್ರದಲ್ಲಿ ಗೆಲುವು ಸಿಗಲಿಲ್ಲ. ಇದು ನವಜೋತ್ ಸಿಂಗ್ ಸದ್ಯದ ಸ್ಥಿತಿ. ಕಪಿಲ್ ಶರ್ಮಾ ಕಾಮಿಡಿ ಶೋನಿಂದ ಸಿಧುರನ್ನು ಕಪಿಲ್ ಶರ್ಮಾ ಕಾಮಡಿ ಶೋನಿಂದ ಹೊರದಬ್ಬಿದ ಬಳಿಕ ಇದೀಗ ಜನತೆ ಪಂಜಾಬ್‌ನಿಂದಲೇ ಹೊರದಬ್ಬಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಕಾಮಿಡಿಯನ್ ಆಗಿದ್ದ ಆಮ್ ಆದ್ಮಿ ಪಕ್ಷದ ಭಗವಂತ್ ಸಿಂಗ್ ಮಾನ್ ಮುಂದಿನ ಪಂಜಾಬ್ ಮುಖ್ಯಮಂತ್ರಿ. ಆದರೆ ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಜಡ್ಜ್ ಆಗಿದ್ದ ನವಜೋತ್ ಸಿಂಗ್ ಸಿಧುಗೆ ಪಕ್ಷದ ಜೊತೆ ತಾನು ಕೂಡ ಸೋತ ಆಘಾತ. ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿಗೆ ಪಂಜಾಬ್ ಬೀದಿ ಬೀದಿಗಳಲ್ಲಿ ಸಂಬ್ರಮಾಚರಣೆ ಜೋರಾಗಿದೆ.
Election Result 2022 ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!
ನವಜೋತ್ ಸಿಂಗ್ ಸಿಧು ಪೂರ್ವ ಅಮೃತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಇದೇ ಕ್ಷೇತ್ರದಿಂದ ಶಿರೋಮಣಿ ಅಕಾಲಿ ದಳ ಪಕ್ಷದ ಅಭ್ಯರ್ಥಿ ಬಿಕ್ರಮ್ ಸಿಂಗ್ ಮಜಿತಿಯಾ ಕೂಡ ಸ್ಪರ್ಧಿಸಿದ್ದರು. ಈ ಇಬ್ಬರು ಘಟಾನುಘಟಿಗಳ ಮುಂದೆ ಆಮ್ ಆದ್ಮಿ ಪಾರ್ಟಿಯ ಸ್ವಯಂಸೇವಕಿಯಾಗಿ, ಸಾಮಾನ್ಯೆ ಕಾರ್ಯಕರ್ತೆಯಾಗಿದ್ದ ಜೀವನ್ ಜ್ಯೋತ್ ಕೌರ್ ಸ್ಪರ್ಧಿಸಿತ್ತು. ಫಲಿತಾಂಶ ಬಂದಾಗ ಜೀವನ್ ಜ್ಯೋತ್ ಕೌರ್ ಭರ್ಜರಿ ಗೆಲುವು ಕಂಡಿದ್ದಾರೆ.
ಸಿಧು ಪರ್ಫಾಮೆನ್ಸ್ ಅತ್ಯಂತ ಕಳೆಪೆಯಾಗಿದೆ. ಕಾರಣ ಸಿಧು 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜೀವನ್ ಜ್ಯೋತ್ ಕೌರ್ ಗೆಲುವು ಸಾಧಿಸಿದರೆ, ಬಿಕ್ರಮ್ ಸಿಂಗ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನು ಸಿಧು 3ನೇ ಸ್ಥಾನಕ್ಕೆ ತೃಪ್ಚಿಪಡಬೇಕಾಗಿದೆ.2017ರ ಪಂಜಾಬ್ ವಿಧಾನ ಸಭಾ ಚುನಾವಣೆಯಲ್ಲಿ ಸಿಧು 42,800 ಮತಗಳ ಅಂತರಿಂದ ಬಿಜೆಪಿಯ ರಾಜೇಶ್ ಕುಮಾರ್ ಹೊನಿ ವಿರುದ್ಧ ಗೆಲುವು ಸಾಧಿಸಿದ್ದರು.
Uttarakhand Elections: ಬಿಜೆಪಿ ಗೆದ್ದರೂ ಸಿಎಂಗೆ ಸೋಲು: 6,900 ಮತಗಳ ಅಂತರದಿಂದ ಮುಗ್ಗರಿಸಿದ ಧಾಮಿ!
ಸೋಲಿನ ಬಳಿಕ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ನವಜೋತ್ ಸಿಂಗ್ ಸಿಧು, ಜನತೆ ತೀರ್ಪನ್ನು ಗೌರವಿಸುವುದಾಗಿ ಹೇಳಿದ್ದಾರೆ. ಜನರ ಧ್ವನಿ ದೇವರ ಧ್ವನಿಗೆ ಸಮಾನ. ಪಂಜಾಬ್ ಜನರ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಪಂಜಾಬ್‌ನಲ್ಲಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಾರ್ಟಿಗೆ ಅಭಿನಂದನೆಗಳು ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶ
ಆಮ್ ಆದ್ಮಿ ಪಾರ್ಟಿ 92 ಸ್ಥಾನಗಲ್ಲಿ ಮುನ್ನಡೆ
ಕಾಂಗ್ರೆಸ್ 18 ಸ್ಥಾನಗಳಲ್ಲಿ ಮುನ್ನಡೆ
ಬಿಜೆಪಿ 2 ಸ್ಥಾನದಲ್ಲಿ ಮುನ್ನಡೆ
ಶಿರೋಮಣಿ ಅಕಾಲಿ ದಳ 3 ಸ್ಥಾನದಲ್ಲಿ ಮುನ್ನಡೆ
ಚುನಾವಣೋತ್ತರ ಸಮೀಕ್ಷೆಗಳು ಪಂಜಾಬ್‌ನಲ್ಲಿ ಆಪ್ ಆಧಿಕಾರಕ್ಕೇರಲಿದೆ ಎಂದಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ದಾಖಲೆಯ 2ನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ಸ್ಪಷ್ಟಭವಿಷ್ಯ ನುಡಿದಿವೆ. ಇದೇ ವೇಳೆ, ಪಂಜಾಬ್‌ನಲ್ಲಿ ಇದೇ ಮೊದಲ ಬಾರಿ ಕಾಂಗ್ರೆಸ್ ಹಾಗೂ ಅಕಾಲಿದಳದ ಹೊರತಾದ ಪಕ್ಷವೊಂದು ಉದಯಿಸಲಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯ ಸಾಧಿಸಿ ಅಧಿಕಾರಕ್ಕೇರಲಿದೆ, ದಿಲ್ಲಿ ಹೊರಗೆ ಮೊದಲ ಬಾರಿ ಅಧಿಕಾರಕ್ಕೆ ಬಂದು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ ಎಂದು ಹೇಳಿತ್ತು