Asianet Suvarna News Asianet Suvarna News

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಪ್ರಧಾನಿ ಮೋದಿ!

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವ ಒಂದು ದಿನ ಮುನ್ನ ಬಿಜೆಪಿ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯಲ್ಲಿ ಭೇಟಿಯಾದರು.

Prime Minister Narendra Modi on Thursday met NDA Presidential candidate Droupadi Murmu san
Author
Bengaluru, First Published Jun 23, 2022, 7:29 PM IST

ನವದೆಹಲಿ (ಜೂನ್ 23): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಗುರುವಾರ ಬಿಜೆಪಿ (BJP) ಮೈತ್ರಿಕೂಟವಾದ ಎನ್‌ಡಿಎಯ (NDA) ರಾಷ್ಟ್ರಪತಿ ಅಭ್ಯರ್ಥಿ ಒಡಿಶಾ ಮೂಲದ ದ್ರೌಪದಿ ಮುರ್ಮು (Presidential candidate Droupadi Murmu)  ಅವರನ್ನು ದೆಹಲಿಯಲ್ಲಿ ಭೇಟಿಯಾದರು. ಜುಲೈ 18 ರಂದು ನಡೆಯಲಿರುವ ಚುನಾವಣೆಗಾಗಿ ಶುಕ್ರವಾರ ದ್ರೌಪದಿ ಮುರ್ಮು ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ದ್ರೌಪದಿ ಮುರ್ಮು ಅವರ ರಾಷ್ಟ್ರಪತಿ ನಾಮನಿರ್ದೇಶನವು ಸಮಾಜದ ಎಲ್ಲಾ ವರ್ಗಗಳಿಂದ ಭಾರತದಾದ್ಯಂತ ಮೆಚ್ಚುಗೆ ಪಡೆದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. "ಅವರ ತಳಮಟ್ಟದ ಸಮಸ್ಯೆಗಳ ತಿಳುವಳಿಕೆ ಮತ್ತು ಭಾರತದ ಅಭಿವೃದ್ಧಿಯ ದೃಷ್ಟಿಕೋನವು ಅತ್ಯುತ್ತಮವಾಗಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.

ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ದ್ರೌಪದಿ ಮುರ್ಮು ಅವರನ್ನು "ಸಮಾಜ ಸೇವೆಗಾಗಿ ಮತ್ತು ಬಡವರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ" ಎಂದು ಶ್ಲಾಘಿಸಿದರು. ಅವರು ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮಂಗಳವಾರ ಸಂಜೆ ತನ್ನ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಘೋಷಿಸಿದರೆ, ವಿರೋಧ ಪಕ್ಷಗಳು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ (former Finance Minister Yashwant Sinha) ಅವರ ಹೆಸರನ್ನು ದೇಶದ ಉನ್ನತ ಹುದ್ದೆಗೆ ತಮ್ಮ ಆಯ್ಕೆ ಎಂದು ಘೋಷಿಸಿದವು.

ಯಾರೀಕೆ ದ್ರೌಪದಿ ಮುರ್ಮು, ಅವರ ಆಯ್ಕೆಯ ಮಹತ್ವವೇನು?: 1958 ರಲ್ಲಿ ಜನಿಸಿದ ದ್ರೌಪದಿ ಮುರ್ಮು ಭಾರತದ ಬುಡಕಟ್ಟು ಸಮುದಾಯದ ರಾಜಕಾರಣಿ. ಹಾಗೇನಾದರೂ ಆಯ್ಕೆಯಾದಲ್ಲಿ, 64 ವರ್ಷದ ಮುರ್ಮು ಒಡಿಶಾದ ಬುಡಕಟ್ಟು ಸಮುದಾಯದಿಂದ ಭಾರತದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ. ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎನಿಸಿದ್ದರು. ನವೀನ್ ಪಟ್ನಾಯಕ್ ಅವರು ಬಿಜೆಪಿ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿದಾಗ ಅವರು ಒಡಿಶಾದಲ್ಲಿ ಒಮ್ಮೆ ಬಿಜು ಜನತಾ ದಳ (ಬಿಜೆಡಿ) ಕ್ಯಾಬಿನೆಟ್‌ನ ಭಾಗವಾಗಿದ್ದರು. ನವೀನ್ ಪಟ್ನಾಯಕ್ ಕೂಡ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿ: ಯಾರು ಈ ದ್ರೌಪದಿ ಮುರ್ಮು..? ಇವರೇ ಮೋದಿ ಆಯ್ಕೆ ಯಾಕೆ.?

ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ವಿರೋಧ ಪಕ್ಷದ ಪಾಳಯಕ್ಕೆ ತೀವ್ರ ಸಂಕಷ್ಟಕ್ಕೆ ಕಾರಣವಾಗಲಿದೆ. ಇದು ಯುಪಿಎ ಮಿತ್ರಪಕ್ಷವಾದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಆಳ್ವಿಕೆಯಲ್ಲಿರುವ ಬುಡಕಟ್ಟು ಬಹುಸಂಖ್ಯಾತ ರಾಜ್ಯವಾದ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರಿಂದ ಅವರನ್ನು ಬೆಂಬಲಿಸದೇ ಇರುವುದು ಕಷ್ಟವಾಗಲಿದೆ. .
ವಿರೋಧ ಪಕ್ಷದ ಭಾಗವಾಗಿರುವ ಜೆಎಂಎಂ ರಾಷ್ಟ್ರಪತಿ ಚುನಾವಣೆಗೆ ಜಂಟಿ-ವಿರೋಧದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುವ ನಿರೀಕ್ಷೆಯಿದೆ. ಆದರೆ ಮುರ್ಮು, ಜಾರ್ಖಂಡ್‌ನ ಮಾಜಿ ಗವರ್ನರ್ ಆಗಿದ್ದು, ರಾಜ್ಯ ಸರ್ಕಾರದೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ. ಇದು ಜೆಎಂಎಂ ಅನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.

ದೇವಸ್ಥಾನದಲ್ಲಿ ಕಸ ಗುಡಿಸಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು!

2017 ರಲ್ಲಿ, ಜಾರ್ಖಂಡ್‌ನಲ್ಲಿ ಭೂ ಹಿಡುವಳಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಯನ್ನು ಮುರ್ಮು ವಿಫಲಗೊಳಿಸಿದ್ದರು. ಛೋಟಾನಾಗ್‌ಪುರ ಟೆನೆನ್ಸಿ (ಸಿಎನ್‌ಟಿ) ಕಾಯಿದೆ ಮತ್ತು ಸಂತಾಲ್ ಪರಗಣ ಟೆನೆನ್ಸಿ (ಎಸ್‌ಪಿಟಿ) ಕಾಯಿದೆಗೆ ತಿದ್ದುಪಡಿ ಮಾಡಲು ಪರಿಚಯಿಸಿದ ಬಿಲ್‌ಗಳನ್ನು ಅವರು ಹಿಂದಿರುಗಿಸಿದ್ದರು. CNT ಮತ್ತು SPT ಕಾಯಿದೆಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಪ್ರಸ್ತಾವಿತ ತಿದ್ದುಪಡಿಗಳನ್ನು ಜಾರ್ಖಂಡ್‌ನ ಆದಿವಾಸಿಗಳು ಆಕ್ರಮಣಕಾರಿಯಾಗಿ ವಿರೋಧಿಸಿದ್ದರು. ಇದು ದ್ರೌಪದಿ ಮುರ್ಮುವನ್ನು ಪ್ರಬಲ ಆಡಳಿತಾತ್ಮಕ ಬುಡಕಟ್ಟು ನಾಯಕಿಯನ್ನಾಗಿ ಮಾಡಿತ್ತು. ಈ ನಿರ್ಧಾರದ ಮೂಲಕ ಬಿಜೆಪಿ ಒಡಿಶಾದಲ್ಲಿ ತನ್ನ ರಾಜಕೀಯ ಹಿಡಿತವನ್ನು ಬಲಪಡಿಸಲು ಮತ್ತು ಚುನಾವಣೆಯಲ್ಲಿ ಸೋತ ಜಾರ್ಖಂಡ್‌ನಲ್ಲಿ ನೆಲೆ ಕಾಣಲು ಪ್ರಯತ್ನಿಸುತ್ತಿದೆ.

Follow Us:
Download App:
  • android
  • ios