Asianet Suvarna News Asianet Suvarna News

ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್‌ ಮುತಾಲಿಕ್ ಕಣಕ್ಕೆ, ಬಿಜೆಪಿ ಹಿಂದೆ ಸರಿಯಲು ಒತ್ತಾಯ

2023 ರ ವಿಧಾನ ಸಭಾ ಚುಣಾವಣೆಗೆ ಈ ಭಾರಿ   ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ‌ ಇಳಿಯಲಿದ್ದಾರೆ ಎಂದು ಶ್ರಿರಾಮ ಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Pramod Muthalik to contest Assembly election from  Karkala constituency an independent candidate gow
Author
First Published Feb 2, 2023, 4:16 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಫೆ.2): 2023 ರ ವಿಧಾನ ಸಭಾ ಚುನಾವಣೆಗೆ ಈ ಭಾರಿ ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ  ಕಣಕ್ಕೆ‌ ಇಳಿಯಲಿದ್ದಾರೆ ಎಂದು ಶ್ರಿರಾಮ ಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಧಾರವಾಡದ ಸರ್ಕಿಟ್ ಹೌಸ್ ನಲ್ಲಿ ಮಾತನಾಡಿದ ಗಂಗಾಧರ ಕುಲಕರ್ಣಿ ಅವರು ಬಿಜೆಪಿ ಸರಕಾರದ ವಿರುದ್ದ ಕಿಡಿ ಕಾರಿದರು ಇಗಾಗಲೆ ಪ್ರಮೋದ್ ಮುತಾಲಿಕ್ ಅವರು ಅವರ ಹುಟ್ಟುಹಬ್ಬದ ಜನೇವರಿ 23 ರಂದು  ಇಗಾಗಲೆ ಕ್ಷೇತ್ರವನ್ನ ಘೋಷಣೆ ಮಾಡಿದ್ದಾರೆ ಪ್ರಮೋದ್ ಮುತಾಲಿಕ ಅವರು.ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ಮಾಡೆ ಮಾಡುತ್ತಾರೆ. ಹಿಂದೆ ಸರಿಯೋ ಮಾತೆ ಇಲ್ಲ‌ಎಂದು ಗಂಗಾಧರ ಕುಲಕರ್ಣಿ ಹೇಳಿದರು.

ಹಿಂದುತ್ವ ಬೇಕಾಗಿದೆ ಕಾರ್ಕಳದಲ್ಲಿ ಭ್ರಷ್ಟಾಚಾರ ಬಹಳಷ್ಡಿದೆ ಕಾರ್ಕಳ ಕ್ಷೇತ್ರದಲ್ಲಿ ಅದರಿಂದ ಮುಕ್ತ. ಗೊಳಿಸಲು ಪ್ರಮೋದ್ ಮುತಾಲಿಕ್ ಅವರು ಸ್ಪರ್ಧೆ ಮಾಡಲಿದ್ದಾರೆ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷ ಅಭ್ಯರ್ಥಿಯನ್ನ ಹಾಕಬಾರದು ಹಿಂದೂ ಹೋರಾಟಗಾರರಿಗೋಸ್ಕರ ಅಭ್ಯರ್ಥಿಯನ್ನ ಹಾಕಬೇಡಿ ಎಂದ ಗಂಗಾಧರ ಕುಲಕರ್ಣಿ ಅವರು ಬಿಜೆಪಿ ಪಕ್ಷಕ್ಕೆ ಮನವಿ ಮಾಡಿಕ್ಕೊಂಡರು ಬಿಜೆಪಿ ತನ್ನ ಅಭ್ಯರ್ಥಿಯನ್ನ ನಿಲ್ಲಿಸಬಾರದು. ಬಜರಂಗದಳ ಶ್ರಿರಾಮ ಸೇನಾ ಮುತಾಲಿಕ್ ಅವರ ಕೊಡುಗೆ ಬಿಜೆಪಿಗೆ ಬಹಳಷ್ಟಿದೆ ಅವರು ಹಿಂದುತ್ವಕ್ಕಾಗಿ ದುಡಿದಿದ್ದಾರೆ.

 

ಗೋಹತ್ಯೆ, ಮತಾಂತರ ತಡೆಗೆ ಹೋರಾಟ ಅವಶ್ಯಕ: ಪ್ರಮೋದ್‌ ಮುತಾಲಿಕ್‌

ದಯವಿಟ್ಟು ಅಭ್ಯರ್ಥಿ ಹಾಕಬೇಡಿ. ಒಂದು ವೇಳೆ  ಅಭ್ಯರ್ಥಿ ಹಾಕಿದರೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರಿರಾಮ ಸೇನೆ ಅಭ್ಯರ್ಥಿಗಳನ್ನ ಹಾಕಲಾಗುವುದು ಎಂದು ಬಿಜೆಪಿಗೆ ಎಚ್ಚರಿಕೆ ಕೊಟ್ಟ ಶ್ರಿರಾಮ ಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಬಿಜೆಪಿ ವಿರುದ್ದ ಹರಿಹಾಯ್ದರು. ಪ್ರಮೋದ್ ಮುತಾಲಿಕ್ ಅವರಿಗೆ ಒಂದು ಅವಕಾಶ ಕೊಡಬೇಕು ಎಂದು ಶ್ರಿರಾಮ ಸೇನಾ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.

ಶೂಟೌಟ್‌ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಪ್ರಮೋದ್‌ ಮುತಾಲಿಕ್‌

ಬಿಜೆಪಿ ಪಕ್ಷ ಅನಾಚಾರ ಮಾಡಿದವರನ್ನ ಪಕ್ಷಕ್ಕೆ ಸೇರಿಸಿಕ್ಕೊಳ್ಳುತ್ತಿದ್ದಾರೆ ಮುತಾಲಿಕ್ ಅವರನ್ನ‌ ಪಕ್ಷಕ್ಕೆ‌ ಏಕೆ ಸೇರಿಸುತ್ತಿಲ್ಲ. ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ ಮಾಡಲಿದ್ದಾರೆ. ಅವರಿಗಾಗಿ ಬಿಜೆಪಿ ಪಕ್ಷ ಅಭ್ಯರ್ಥಿಯನ್ನ‌ ಹಾಕಬಾರದು ಎಂದು ಹೇಳಿದ್ದೇವೆ. ಒಂದು ವೇಳೆ ಅಭ್ಯರ್ಥಿಯನ್ನ‌ ಹಾಕಿದ್ದೆ ಆದರೆ ನಾವು ರಾಜ್ಯದ ಮೂಲೆ‌ ಮೂಲೆಯಿಂದಲೂ ನಮ್ಮ‌ ಕಾರ್ಯಕರ್ತರನ್ನ ಕರೆಸಿ ಕಾರ್ಕಳದಲ್ಲಿ ಸಭೆ ಮಾಡಿ ಮುಂದೆ ಎನೂ ಮಾಡಬೇಕು ಎಂದು ಎಲ್ಲ ನಿರ್ಣಯಗಳನ್ನ ತೆಗೆದುಕ್ಕೊಳ್ಳಲಾಗುವುದು ಎಂದು ಗಂಗಾಧರ ಕುಲಕರ್ಣಿ ಹೇಳಿದರು.

Follow Us:
Download App:
  • android
  • ios