Asianet Suvarna News Asianet Suvarna News

ಶೂಟೌಟ್‌ ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಪ್ರಮೋದ್‌ ಮುತಾಲಿಕ್‌

ಸರ್ಕಾರ ಹಾಗೂ ಪೊಲೀಸರ ಕೈಯಲ್ಲಿ ಈ ಪ್ರಕರಣ ಒಂದು ತಿಂಗಳಲ್ಲಿ ಸತ್ಯಾಸತ್ಯತೆ ಹೊರ ತರದಿದ್ದರೆ, ನಮ್ಮ ಕೈಗೆ ಕೊಡಿ 24 ಗಂಟೆಯಲ್ಲಿ ಆ ರಾಜಕಾರಣಿಯನ್ನು ಹೊರ ತರುತ್ತೇವೆ ಎಂದು ಸವಾಲು ಹಾಕಿದರು. ಈ ಕುರಿತು ಶೀಘ್ರವೇ ರಾಜ್ಯಪಾಲರು, ಗೃಹ ಸಚಿವರಿಗೆ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ನೀಡಲಾಗುವುದು: ಮುತಾಲಿಕ್‌

Pramod Mutalik Talks Over Shootout Case grg
Author
First Published Jan 20, 2023, 9:00 PM IST

ಬೆಳಗಾವಿ(ಜ.20): ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ ಶೂಟೌಟ್‌ ಪ್ರಕರಣದಲ್ಲಿ ನಗರ ಪೊಲೀಸರು ಸೂಕ್ತ ತನಿಖೆ ನಡೆಸದೇ ರಾಜಕೀಯ ಒತ್ತಡಕ್ಕೆ ಮಣಿದು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಐಡಿ ಅಥವಾ ಎಸ್‌ಐಟಿ ಮೂಲಕ ತನಿಖೆ ನಡೆಸಲು ಸರ್ಕಾರಕ್ಕೆ ಒಂದು ತಿಂಗಳು ಗಡುವು ನೀಡುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹಾಗೂ ಪೊಲೀಸರ ಕೈಯಲ್ಲಿ ಈ ಪ್ರಕರಣ ಒಂದು ತಿಂಗಳಲ್ಲಿ ಸತ್ಯಾಸತ್ಯತೆ ಹೊರ ತರದಿದ್ದರೆ, ನಮ್ಮ ಕೈಗೆ ಕೊಡಿ 24 ಗಂಟೆಯಲ್ಲಿ ಆ ರಾಜಕಾರಣಿಯನ್ನು ಹೊರ ತರುತ್ತೇವೆ ಎಂದು ಸವಾಲು ಹಾಕಿದರು. ಈ ಕುರಿತು ಶೀಘ್ರವೇ ರಾಜ್ಯಪಾಲರು, ಗೃಹ ಸಚಿವರಿಗೆ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ನೀಡಲಾಗುವುದು ಎಂದರು.

ಗೋಹತ್ಯೆ, ಮತಾಂತರ ತಡೆಗೆ ಹೋರಾಟ ಅವಶ್ಯಕ: ಪ್ರಮೋದ್‌ ಮುತಾಲಿಕ್‌

ಇದು ಕೊಲೆ ಯತ್ನ:

ಬೆಳಗಾವಿ ನಗರದಲ್ಲಿ ಬಹಳ ವರ್ಷಗಳಿಂದ ಶೂಟೌಟ್‌ ಪ್ರಕರಣ ಆಗಿರಲಿಲ್ಲ. ಆದರೆ ಇತ್ತೀಚೆಗೆ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದು ಕೊಲೆಯ ಯತ್ನ. ಕೊಲೆಯಾಗಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯಾಗುತ್ತಿತ್ತು. ಅಂತಹ ಗಂಭೀರ ಪ್ರಕರಣವನ್ನು ನಗರ ಪೊಲೀಸರು ವ್ಯವಸ್ಥಿತವಾಗಿ ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದ್ದು, ವೈಯಕ್ತಿಕ ಜಗಳ, ವೈಯಕ್ತಿಕ ಆರ್ಥಿಕ ವ್ಯವ್ಯಹಾರ ಎಂದು ಪೊಲೀಸ್‌ ಕಮಿಷನರ್‌ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ದೂರಿದರು.

ಕೊಲೆ ಹಿಂದೆ ರಾಜಕೀಯ ಪ್ರಭಾವ:

ರವಿ ಕೋಕಿತ್ಕರ ಕೊಲೆಯ ಯತ್ನದ ಹಿನ್ನೆಲೆ ರಾಜಕೀಯ ಪ್ರಭಾವದಿಂದ ನಡೆದಿದೆ. ನಗರ ಪೊಲೀಸ್‌ ಇಲಾಖೆ ಎಲ್ಲೋ ರಾಜಕೀಯ ಒತ್ತಡಕ್ಕೆ ಮಣಿದಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಕಾರಿನಲ್ಲಿದ್ದ ಮೂವರು ಜನರ ಹೇಳಿಕೆ, ಅಕ್ಕ ಪಕ್ಕದವರ ಹೇಳಿಕೆ ಪಡೆದಿಲ್ಲ. ಅಲ್ಲದೇ ಒಂದೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕಾರಿನಲ್ಲಿ ಮತ್ತೊಂದು ಗುಂಡು ಪತ್ತೆಯಾಗಿದೆ. ಇದರಿಂದ ತಿಳಿಯುತ್ತದೆ ಎಷ್ಟುಗಂಭೀರವಾಗಿ ನಗರ ಪೊಲೀಸರು ಈ ಪ್ರಕರಣ ತೆಗೆದುಕೊಂಡಿದ್ದಾರೆ ಎಂಬುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಅರ್ಚಕರ ನೇಮಕ, ಹೋರಾಟಕ್ಕೆ ಬೆಲೆ ಸಿಕ್ಕಿದೆ: ಪ್ರಮೋದ್‌ ಮುತಾಲಿಕ್‌

ಸಿಸಿ ಟಿವಿಯಲ್ಲಿ ಎರಡೂ ದ್ವಿಚಕ್ರ ವಾಹನಗಳು ಹೋಗಿವೆ. ಅದರಲ್ಲಿ ವೇಗವಾಗಿ ಹೋದ ಬೈಕ್‌ ಬಿಟ್ಟು ಸ್ಕೂಟರ್‌ ಹಿಡಿದಿದ್ದಾರೆ. ಇನ್ನೊಂದು ಬೈಕ್‌ ಎಲ್ಲಿ ಹೊಯಿತು ಎನ್ನುವ ತನಿಖೆ ಮಾಡಿಲ್ಲ. ಮೂವರು ಬಂಧಿತರು ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಹಾಜರಾಗಬೇಕಿತ್ತು. ಪೊಲೀಸ್‌ ಅಧಿಕಾರಿಗಳ ಮುಂದೆ ಅಲ್ಲ ಇದು ಒಂದು ಸಾಕಷ್ಟುಅನುಮಾನ ಮೂಡುತ್ತಿದೆ ಎಂದರು.

ನಗರ ಪೊಲೀಸರ ಮೇಲೆ ವಿಶ್ವಾಸ ಹೋಗುತ್ತಿದೆ. ಈ ಪ್ರಕರಣದಲ್ಲಿ ಗಂಭೀರತೆ ಏಕೆ ಇಲ್ಲ. ಕಳೆದ ಜ.8 ರಂದು ದಾವಣಗೆರೆಯಲ್ಲಿ ಈ ಪ್ರಕರಣ ಗಂಭೀರವಾಗಿದೆ ಇದರ ತನಿಖೆ ನಡೆಸುವುದಾಗಿ ಹೇಳಿದ್ದರು. ಆದರೆ ಮುಖ್ಯಮಂತ್ರಿಯನ್ನು ಪಕಕ್ಕೆ ತಳ್ಳಿ ಬೆಳಗಾವಿ ಪ್ರಭಾವಿ ರಾಜಕಾರಣಿ ಈ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರದಿಂದ ನಗರ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಅಂತ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ. 

Follow Us:
Download App:
  • android
  • ios