ಕಾಂಗ್ರೆಸ್‌ನ ಕಣ, ಕಣದಲ್ಲೂ ಹಿಂದೂ ವಿರೋಧಿ ಗುಣವಿದೆ: ಮುತಾಲಿಕ್
ವಿಧಾನಸೌಧದಲ್ಲಿ ನಮಾಜ್ ಮಾಡಲು ಕೊಠಡಿ ಕೊಡಿ ಎಂದು ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯರೊಬ್ಬರು ಬೇಡಿಕೆ ಇಟ್ಟಿದ್ದಾರೆ. ಸರ್ಕಾರವೇನಾದರೂ ಇದಕ್ಕೆ ಅವಕಾಶ ಕೊಟ್ಟರೆ ರಾಜ್ಯ ಹೊತ್ತಿ ಉರಿಯುತ್ತೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ (ಜು.15): ವಿಧಾನಸೌಧದಲ್ಲಿ ನಮಾಜ್ ಮಾಡಲು ಕೊಠಡಿ ಕೊಡಿ ಎಂದು ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯರೊಬ್ಬರು ಬೇಡಿಕೆ ಇಟ್ಟಿದ್ದಾರೆ. ಸರ್ಕಾರವೇನಾದರೂ ಇದಕ್ಕೆ ಅವಕಾಶ ಕೊಟ್ಟರೆ ರಾಜ್ಯ ಹೊತ್ತಿ ಉರಿಯುತ್ತೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ನ ಕಣ, ಕಣದಲ್ಲೂ ಹಿಂದೂ ವಿರೋಧಿ ಗುಣವಿದೆ. ಕಾಂಗ್ರೆಸ್‌ನ ತುಷ್ಟೀಕರಣದ ಫಲವಾಗಿ ಅವರು ನಿರ್ಭಯವಾಗಿ ಕೊಠಡಿ ಕೇಳಿದ್ದಾರೆ. ವಿಧಾನಸೌಧ ಮಕ್ಕಾ-ಮದೀನಾ ಅಲ್ಲ. ಪ್ರಜಾಪ್ರಭುತ್ವದ ಆಧಾರದ ದೇಗುಲ.
ಅಲ್ಲಿ ನಮಾಜ್ ಮಾಡುತ್ತೇವೆ, ಬುರ್ಕಾ ಹಾಕಿಕೊಂಡು ಬರುತ್ತೇವೆ, ಮೈಕ್ ಹಾಕುತ್ತೇವೆ ಎಂದು ಕೇಳಿದರೆ ಸಿದ್ದರಾಮಯ್ಯನವರು ಅನುಮತಿ ಕೊಟ್ಟರೂ ಅಚ್ಚರಿ ಏನಿಲ್ಲ. ಹಾಗೇನಾದರೂ ಅವಕಾಶ ನೀಡಿದರೆ ರಾಜ್ಯ ಹೊತ್ತಿ ಉರಿಯುತ್ತೆ. ಶ್ರೀರಾಮ ಸೇನೆಯ ಸಾವಿರಾರು ಕಾರ್ಯಕರ್ತರು ಇದರ ವಿರುದ್ಧ ಹೋರಾಟ ನಡೆಸಿ, ನಿತ್ಯ ವಿಧಾನಸೌಧದಲ್ಲಿ ಹನುಮಾನ್ ಚಾಲೀಸಾ, ಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಾನ ನಾಗರಿಕ ಸಂಹಿತೆ ಜಾರಿಗೆ ಶ್ರೀರಾಮಸೇನೆ ಬೆಂಬಲ ನೀಡಲಿದೆ. ಜುಲೈ 18ರಿಂದ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನ ಆರಂಭಿಸಿ, 5 ಲಕ್ಷ ಜನರ ಸಹಿ ಸಂಗ್ರಹಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಆರ್‌ಎಸ್‌ಎಸ್ ಸಂಸ್ಥೆಗೆ ಜಮೀನು ಮಂಜೂರಿಗೆ ತಡೆ: ಬೊಮ್ಮಾಯಿ ಆಕ್ರೋಶ
ಜೈನಮುನಿ ಹತ್ಯೆ ಆರೋಪಿಗಳಿಗೆ ಯೋಗಿ ಮಾದರಿಯಲ್ಲಿ ಶಿಕ್ಷೆಯಾಗಲಿ: ಈಚೆಗೆ ಚಿಕ್ಕೋಡಿಯ ಜೈನಮುನಿ ಕಾಮಕುಮಾರ ಮಹಾರಾಜರನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ನೀಡುವ ಮಾದರಿಯಲ್ಲಿ ಶಿಕ್ಷೆ ನೀಡಬೇಕು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು. ತಾಲೂಕಿನ ವರೂರಿನಲ್ಲಿರುವ ನವಗ್ರಹ ಜೈನ ಮಂದಿರಕ್ಕೆ ಮಂಗಳವಾರ ತೆರಳಿ, ಗುಣಧರನಂದಿ ಮಹಾರಾಜರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜೈನಮುನಿಯನ್ನು ಕ್ರೂರವಾಗಿ ಹತ್ಯೆಗೈದ ಆರೋಪಿಗಳಿಗೆ ಅಷ್ಟೇ ಪ್ರಮಾಣದ ಕ್ರೂರ ಶಿಕ್ಷೆಯಾಗಬೇಕು.
ಅವರ ಮನೆಗಳನ್ನು ಬುಲ್ಡೋಜರ್ ಮೂಲಕ ತೆರವುಗೊಳಿಸಿ ಸಂಪೂರ್ಣ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಇದು ಸಾಮಾನ್ಯ ಕೊಲೆ ಅಲ್ಲ. ಕುರಿ, ಕೋಳಿ ಕತ್ತರಿಸುವ ಮಾದರಿಯಲ್ಲಿ ಜೈನಮುನಿಯನ್ನು ಕತ್ತರಿಸಿದ್ದಾರೆ. ಈ ಮಾನಸಿಕ ಸ್ಥಿತಿ ಇರುವಂತಹವರು ಯಾರು ಎಂಬುದನ್ನು ಸರ್ಕಾರ ಹೊರ ಹಾಕಬೇಕು ಎಂದು ಒತ್ತಾಯಿಸಿದರು. ಪ್ರಕರಣವನ್ನು ಬಿಜೆಪಿಯವರು ಸಿಬಿಐಗೆ ಒಪ್ಪಿಸಲು ಹೇಳುತ್ತಿರುವ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಪರೇಶ್ ಮೇಸ್ತ ಸೇರಿದಂತೆ ಹಲವರ ಹತ್ಯೆ ಕುರಿತು ಸಿಬಿಐಗೆ ವಹಿಸಲಾಗಿತ್ತು. ಏನಾಯ್ತು? ಬಿಜೆಪಿಯವರು ಮೊದಲು ಬಾಯಿ ಮುಚ್ಚಿಕೊಂಡಿರಲಿ ಎಂದು ವಾಗ್ದಾಳಿ ನಡೆಸಿದರು.
ಮೋದಿ ಮತ್ತೆ ಪ್ರಧಾನಿಯಾಗಲೆಂದು ಚಾಮುಂಡಿ ಬೆಟ್ಟ ಹತ್ತಿದ ಶೋಭಾ
ವರ್ಷದಲ್ಲಿ ಹೊರಬರುತ್ತಾರೆ: ನಮ್ಮ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂದರೆ ಇಂತಹ ಕ್ರೂರ ಹತ್ಯೆ ಮಾಡಿದರೂ ಆರೋಪಿಗಳು ಒಂದು ವರ್ಷದೊಳಗೆ ಜಾಮೀನು ಪಡೆದು ಹೊರಬರುತ್ತಾರೆ ನೋಡ್ತಾ ಇರಿ. ಆರೋಪಿಗಳು ಯಾವುದೇ ಧರ್ಮದವರಾಗಿರಲಿ ಅವರಿಗೆ ಶಿಕ್ಷೆ ಕೊಡಲೇಬೇಕು. ಇಂಥವರನ್ನು ರಕ್ಷಣೆ ಮಾಡಿದರೆ ನಾಳೆ ಇದೆ ಮಚ್ಚು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಆರೋಪಿ ಪರ ವಹಿಸದಂತೆ ಬೆಳಗಾವಿ ಜಿಲ್ಲಾ ವಕೀಲರಿಗೆ ಮನವಿ ಮಾಡಲಾಗುವುದು. ಒಂದು ವೇಳೆ ದುಡ್ಡಿನ ಆಸೆಗೆ ಬಿದ್ದು ಯಾವುದಾದರೂ ವಕೀಲ ಇವರ ಪರ ಪ್ರಕರಣ ತೆಗೆದುಕೊಂಡಲ್ಲಿ ನೀವೂ ಈ ಕ್ರೌರ್ಯಕ್ಕೆ ಸಾಥ್ ನೀಡಿದಂತೆ ಎಂದರು.