ಆರ್‌ಎಸ್‌ಎಸ್ ಸಂಸ್ಥೆಗೆ ಜಮೀನು ಮಂಜೂರಿಗೆ ತಡೆ: ಬೊಮ್ಮಾಯಿ ಆಕ್ರೋಶ
ಹಿಂದಿನ ಸರ್ಕಾರ ಸಂಘ ಪರಿವಾರಕ್ಕೆ ಸೇರಿದ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿದ್ದ ಜಮೀನು ತಡೆಹಿಡಿದಿರುವ ಈಗಿನ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಬೆಂಗಳೂರು (ಜು.15): ಹಿಂದಿನ ಸರ್ಕಾರ ಸಂಘ ಪರಿವಾರಕ್ಕೆ ಸೇರಿದ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿದ್ದ ಜಮೀನು ತಡೆಹಿಡಿದಿರುವ ಈಗಿನ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದರಾಮಯ್ಯ ಅವಧಿಯಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ಅದರ ಪರಿಣಾಮ ಜನಸೇವಾ ಟ್ರಸ್ಟ್‌ಗೆ ನೀಡಿರುವ ಜಮೀನು ತಡೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಜನಸೇವಾ ಟ್ರಸ್ಟ್ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ.
ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಹಿಂದಿನ ನಮ್ಮ ಸರ್ಕಾರ ಜಮೀನು ಕೊಟ್ಟಿತ್ತು. ಕಾಂಗ್ರೆಸ್ ಇದ್ದಾಗಲೂ ಚನ್ನೇನಹಳ್ಳಿಯಲ್ಲಿ ಭೂಮಿ ನೀಡಲಾಗಿತ್ತು. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಇತ್ತು. ಆದಿಚುಂಚನಗಿರಿ, ಹಿಂದುಳಿದ ಮಠಗಳಿಗೂ ನೀಡಿದ್ದೆವು. ಅದೇ ರೀತಿ ರಾಷ್ಟೊ್ರೕತ್ಥಾನಕ್ಕೂ ಕೂಡ ಕೊಡಲಾಗಿತ್ತು. ಅದನ್ನು ತಡೆಹಿಡಿಯುವ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಇವರ ನಿಜಬಣ್ಣ ಮುಂದೆ ಬಯಲಾಗಲಿದೆ.
ಮೋದಿ ಮತ್ತೆ ಪ್ರಧಾನಿಯಾಗಲೆಂದು ಚಾಮುಂಡಿ ಬೆಟ್ಟ ಹತ್ತಿದ ಶೋಭಾ
ಇವರ ದ್ವೇಷದ ರಾಜಕಾರಣವನ್ನು ನಾನು ಖಂಡಿಸುತ್ತೇನೆ ಎಂದರು. ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಇದು ನಿರೀಕ್ಷಿತವೇ ಆಗಿತ್ತು. ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಅವರೇ ತೋರಿಸುತ್ತಿದ್ದಾರೆ. ಸಚಿವರು ಆರಂಭದಲ್ಲೇ ಆರೆಸ್ಸೆಸ್‌ಗೆ ಮಂಜೂರಾದ ಭೂಮಿ ವಾಪಸ್ ಬಗ್ಗೆ ಮಾತಾಡುತ್ತಾರೆ. ಜನಸೇವಾ ವಿದ್ಯಾ ಕೇಂದ್ರ ಲಕ್ಷಾಂತರ ಬಡಮಕ್ಕಳಿಗೆ ವಿದ್ಯೆ ಕೊಡುತ್ತಿರುವ ಸಂಸ್ಥೆ. ಅಂಥ ಸಂಸ್ಥೆಯಿಂದ ಭೂಮಿ ವಾಪಸ್ ಪಡೆಯುವುದು ಸರಿಯಿಲ್ಲ. ನಾನೂ ಕೂಡಾ ಅದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್‌ದಿಂದ ರೈತ ವಿರೋಧಿ ನೀತಿ: ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಇದರಿಂದ ಅನ್ನದಾತರು ತೀವ್ರ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಗುರುಲಿಂಗನಗೌಡ ಆಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಯುವ ಬದಲು ರೈತ ಸಮುದಾಯಕ್ಕೆ ಸಂಕಷ್ಟಕ್ಕೆ ಗುರಿ ಮಾಡುವ ಕೆಲವು ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ರೈತರ ಅನುಕೂಲ ದೃಷ್ಟಿಯಿಂದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿತ್ತು.
ಇದರಿಂದ ರೈತಾಪಿಗಳು ಎಪಿಎಂಸಿಗೆ ಮಾರಾಟಕ್ಕೆ ತೆಗೆದುಕೊಂಡು ಹೋಗುವ ಉತ್ಪನ್ನಗಳಿಗೆ ಮಾತ್ರ ತೆರಿಗೆ ಕಟ್ಟುವಂತಾಗಿತ್ತು. ಈ ಹಿಂದಿನ ಕಾನೂನನ್ನು ಕಾಂಗ್ರೆಸ್ ರದ್ದು ಮಾಡುವುದರಿಂದ ಎಪಿಎಂಸಿಯಲ್ಲದೆ ಹೊರಗಡೆ ಕೃಷಿ ಉತ್ಪನ್ನ ಮಾರಿಕೊಂಡರೂ ತೆರಿಗೆ ಕಟ್ಟಬೇಕಾಗುತ್ತದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕೃಷಿ ಸಂಬಂಧಿ ಕೈಗಾರಿಕೆಗಳು ತೀವ್ರ ಸಂಕಷ್ಟದಲ್ಲಿವೆ. ಪ್ರಮುಖವಾಗಿ ರೈಸ್‌ಮಿಲ್‌ಗಳು, ಹತ್ತಿ ಮಿಲ್‌ಗಳನ್ನು, ಸಕ್ಕರೆ ಕಾರ್ಖಾನೆಗಳು ನಡೆಸುವುದು ಕಷ್ಟವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯ ನಡುವೆ ರಾಜ್ಯ ಸರ್ಕಾರ ಹೆಚ್ಚುವರಿ ವಿದ್ಯುತ್ ಶುಲ್ಕದ ಬರೆ ಎಳೆದಿದೆ.
ಇದರಿಂದ ಸಣ್ಣ ಅತಿ ಸಣ್ಣ ಕೈಗಾರಿಕೆಗಳು ಮುಚ್ಚುವ ಸ್ಥಿತಿ ತಲುಪಿವೆ. ಗೃಹಬಳಕೆಯ ವಿದ್ಯುತ್ ಶುಲ್ಕ ಸಹ ತೀವ್ರ ಏರಿಕೆಯಾಗಿ ಮಧ್ಯಮ ವರ್ಗದ ಜನರು ಬದುಕು ನಡೆಸುವುದು ಕಷ್ಟವಾಗಿದೆ. ರೈತ ಕುಟುಂಬದ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆಂದು ಆರಂಭಿಸಿದ್ದ ವಿದ್ಯಾನಿಧಿ ಯೋಜನೆಯನ್ನು ರದ್ದುಮಾಡಲು ಕಾಂಗ್ರೆಸ್ ಮುಂದಾಗಿದೆ. ಗೋಹತ್ಯೆಗಳ ತಡೆಗೆ ಜಿಲ್ಲೆಗೊಂದು ಗೋಶಾಲೆಗಳನ್ನು ತೆರೆಯುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ರೈತರಿಗೆ ಸಹಕಾರಿಯಾಗಿದ್ದ ಕಿಸಾನ್ ಕ್ರೆಡಿಟ್‌ಕಾರ್ಡ್, ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳು ರದ್ದುಪಡಿಸಲಾಗುತ್ತಿದೆ ಎಂದು ದೂರಿದರು.
ಚೀಟಿ ಎತ್ತಿ ತಾತ್ಕಾಲಿಕ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿ: ಶೆಟ್ಟರ್
ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ರದ್ದು ಮಾಡುವ ಅವೈಜ್ಞಾನಿಕ ನಿರ್ಧಾರವನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ನಿಲುವಿನಿಂದಾಗಿ ರೈತರ ಜಮೀನುಗಳು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದ್ದವು. ಇದೀಗ ಕಾಯ್ದೆಯನ್ನೇ ರದ್ದು ಮಾಡಲು ಮುಂದಾಗಿರುವುದು ರೈತಾಪಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಅವಕಾಶವಿತ್ತು. ಅದನ್ನು ರದ್ದುಪಡಿಸಲಾಗಿದೆ. ರೈತರ ಪ್ರತಿ ಎಕರೆಗೆ .250ರಂತೆ .1250 ಗಳನ್ನು ಡೀಸೆಲ್ ಸಹಾಯಧನ ನೀಡುವ ರೈತಶಕ್ತಿ ಯೋಜನೆಯನ್ನು ಈ ಸರ್ಕಾರ ರದ್ದುಮಾಡಿದೆ. ಈ ಬಾರಿಯ ಬಜೆಟ್‌ನಲ್ಲಿ ತುಂಗಭದ್ರಾ ಜಲಾಶಯದ ಹೂಳಿಗೆ ಸಂಬಂಧಿಸಿದಂತೆ ಯಾವುದೇ ಚಕಾರ ಎತ್ತಲಿಲ್ಲ ಎಂದು ದೂರಿದರು.