ಮುತಾಲಿಕ್‌ಗಿದ್ದ ಗೋವಾ ಪ್ರವೇಶ ನಿಷೇಧ 10 ವರ್ಷಗಳ ನಂತರ ತೆರವು

ಟ್ವಿಟರ್‌ನ ನೀಲಿ ಹಕ್ಕಿ ಲೋಗೋ 29 ಲಕ್ಷ ರು.ಗೆ ಹರಾಜಾಗಿದೆ. ಸಲ್ಮಾನ್ ಖಾನ್, ರಶ್ಮಿಕಾ ಜತೆಗಿನ ರೊಮ್ಯಾನ್ಸ್ ಬಗ್ಗೆ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ಮಸೀದಿ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಮಿತಿ ಮುಖ್ಯಸ್ಥ ಅಲಿ ಬಂಧನ.

Pramod Muthalik's entry ban in Goa lifted after 10 years

10 ವರ್ಷಗಳ ನಂತರ ಮುತಾಲಿಕ್ ಗೋವಾ ಪ್ರವೇಶ ನಿಷೇಧ ತೆರವು 

ಪಣಜಿ: 10 ವರ್ಷದ ನಂತರ ಕರ್ನಾಟಕದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಮೇ ಲಿನ ಗೋವಾ ಪ್ರವೇಶ ನಿಷೇಧ ವನ್ನು ಗೋವಾ ಬಿಜೆಪಿ ಸರ್ಕಾರ ತೆರವುಗೊಳಿಸಿದೆ. ಇದರ ಬೆನ್ನ ಲೈ ಮುತಾಲಿಕ್ ಗೋವಾಕ್ಕೆ ಭೇಟಿ ನೀಡಿ, ಮಾಜಿ ಆರೆಸ್ಸೆಸ್ ನಾಯಕ ಹಾಗೂ 'ಭಾರತ ಮಾತಾ ಕಿ ಜೈ' ಸಂಘದ ಸಂಸ್ಥಾ ಪಕ ಸುಭಾಷ್ ವೆಲಿಂಗ್ಟ‌ರ್ ಅವರ ಜತೆ ಮಾತುಕತೆ ನಡೆಸಿ ದ್ದಾರೆ. ಮುತಾಲಿಕ್ ಅವರ ಆಕ್ರಮಣಕಾರಿ ನಡೆ ಮತ್ತು ಹೇಳಿಕೆಗಳಿಂದ ರಾಜ್ಯದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 2014ರ ಏ.18ರಂದು ದಕ್ಷಿಣ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ವರದಿ ಸಿದ್ಧಪಡಿಸಿದ್ದರು. ಆ ಬಳಿಕ ಮನೋಹರ್‌ಪರ್ರಿಕ‌ರ್ ನೇತೃತ್ವದ ಸರ್ಕಾರ ಅವರ ಗೋವಾ ಪ್ರವೇಶಕ್ಕೆ ನಿಷೇಧ ಹೇರಿತ್ತು. ಇದಾದ ದಶಕದ ನಂತರ ನಿಷೇಧ ತೆರವುಗೊಂಡಿದೆ.

ಟ್ವಿಟರ್‌ನ ನೀಲಿ ಹಕ್ಕಿ 29 ಲಕ್ಷಕ್ಕೆ ಹರಾಜು 

ಸ್ಯಾನ್ ಫ್ರಾನ್ಸಿಸ್ಕೋ: ಟೆಕ್ ದಿಗ್ಗಜ ಎಲಾನ್ ಮಸ್ಕ್ ಅವರ ಪಾಲಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಟ್ವಿಟರ್‌ನ 'ನೀಲಿ ಹಕ್ಕಿ' ಲೋಗೋ ಬದಲಿಸಿ, 'ಎಕ್ಸ್' ಚಿಹ್ನೆ ತರಲಾಗಿತ್ತು. ಆ ವೇಳೆ ಇಲ್ಲಿನ ಮುಖ್ಯ ಕಚೇರಿಯಿಂದ ತೆರವುಗೊಳಿಸಲಾಗಿದ್ದ ನೀಲಿ ಹಕ್ಕಿ ಲೋಗೋ ಇದೀಗ 29 ಲಕ್ಷ ರು.ಗೆ ಹರಾಜಾಗಿದೆ. 2023ರಲ್ಲಿ ಟ್ವಿಟರ್, 'ಎಕ್ಸ್' ಎಂದು ಮರು ನಾಮಕರಣ ಆದಾಗ ನಡೆದ ಹರಾಜಿನಲ್ಲಿ ಆ ಲೋಗೋವನ್ನು ಪಡೆದಿದ್ದ ಆರ್‌ಆ‌ರ್ ಆಕ್ಷನ್ಸ್, ಅದನ್ನೀಗ ಮರು ಹರಾಜು ಹಾಕಿದೆ. ಖರೀದಿದಾರರ ಗುರುತನ್ನು ಬಹಿರಂಗಪಡಿಸಿಲ್ಲ. 12 ಅಡಿ ಉದ್ದ, 9 ಅಡಿ ಅಗಲವಿದ್ದು 560 ಕೆ.ಜಿ. ತೂಗುವ ಈ ಚಿಹ್ನೆ 2023ರವರೆಗೆ ಸ್ಯಾನ್ ಫ್ರಾನ್ಸಿಸ್ಕೋದ ಕಚೇರಿಯಲ್ಲಿತ್ತು.

ರಶ್ಮಿಕಾ ಜತೆ ರೊಮ್ಯಾನ್ಸ್ ಪ್ರಶ್ನಿಸಿದ್ದಕ್ಕೆ ಸಲ್ಲು ಚಾಟಿ 
ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ಸಿಕಂದರ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ನಟಿಸುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಶ್ನೆಗೆ ಸಲ್ಮಾನ್ ಕಟುವಾಗಿ ಉತ್ತರಿಸಿದ್ದಾರೆ. 'ರಶ್ಮಿಕಾ ನಿಮಗಿಂತ 31 ವರ್ಷ ಚಿಕ್ಕವರು. ಅವರೊಂದಿಗೆ ಹೇಗೆ ರೊಮ್ಯಾನ್ಸ್ ಮಾಡುತ್ತೀರಿ?' ಎಂಬ ಪ್ರಶ್ನೆಗೆ ತಿರುಗೇಟು ನೀಡಿರುವ ಸಲ್ಲು, 'ರೊಮ್ಯಾನ್ಸ್ ಬಗ್ಗೆ ಅವರಿಗೇ ತೊಂದರೆಯಿಲ್ಲ. ಇನ್ನು ನಿಮಗೇಕೆ ಸಮಸ್ಯೆ?' ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ, 'ಮುಂದೆ ರಶ್ಮಿಕಾಗೆ ಮದುವೆಯಾಗಿ ಮುಂದೆ ಮಗಳಾದಲ್ಲಿ ಅವರು ದೊಡ್ಡವರಾದ ಮೇಲೆ ಆಕೆಯ ತಾಯಿ (ರಶ್ಮಿಕಾ) ಅನುಮತಿ ಪಡೆದು ಪುತ್ರಿ ಜೊತೆ ನಟಿಸುವೆ' ಎಂದು ಚಟಾಕಿ ಹಾರಿಸಿದ್ದಾರೆ.

ಸಂಭಲ್ ಮಸೀದಿ ಸಮಿತಿ ಮುಖ್ಯಸ್ಥ ಅಲಿ ಬಂಧನ 
ಸಂಭಲ್ (ಉ.ಪ್ರ.): ಇಲ್ಲಿನ ಶಾಹಿ ಜಾಮಾ ಮಸೀದಿ ಸಮೀಕ್ಷೆ ನಡೆಸುವಂತೆ ಕೋರ್ಟ್ ನೀಡಿದ್ದ ಆದೇಶವನ್ನು ವಿರೋಧಿಸಿ ನಡೆದ ಹಿಂಸಾಚಾರದ ಸಂಬಂಧ ಮಸೀದಿಯ ಸಮಿತಿ ಮುಖ್ಯಸ್ಥ ಝಾಫರ್ ಅಲಿ ಅವರನ್ನು ಬಂಧಿಸಲಾಗಿದೆ. ಮಸೀದಿ ಇರುವ ಜಾಗದಲ್ಲಿ ಹಿಂದೂ ದೇವಾಲಯ ಇತ್ತು ಎಂದು ಅರ್ಜಿ ಸಲ್ಲಿಕೆಯಾಗಿದ್ದು, ಈ ಕುರಿತ ಸಮೀಕ್ಷೆಗೆ ಕೋರ್ಟ್ ಆದೇಶಿಸಿತ್ತು. ಇದನ್ನು ವಿರೋಧಿಸಿ ಕಳೆದ ವರ್ಷ ನ.24ರಂದು ನಡೆದ ಪ್ರತಿಭಟನೆಯಲ್ಲಿ 4 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ ಆರೋಪ ಅಲಿ ಮೇಲಿದೆ.

Latest Videos
Follow Us:
Download App:
  • android
  • ios