ಡಿಕೆಶಿಯಂಥ ಕಲಾಕಾರ ಕರ್ನಾಟಕದಲ್ಲಿ ಯಾರೂ ಇಲ್ಲ: ಸದಾನಂದಗೌಡ

ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ ನಡುವೆ ಕಿರಿಕ್ ಇರೋದು ಈಗಿಂದ ಇರೋದು ಅಲ್ಲ. ಅವರು ಸಿಎಂ ಆಗಿದ್ದಾಗ ಅವರ ಸಭೆಗೆ ಹೋಗಿ ಡಿಕೆಶಿ ಹೋಗಿ ಕುಳಿತು ಗಲಾಟೆ ಮಾಡಿದ್ದರು. ಬಳಿಕ ಅತ್ಯಂತ ಆಪ್ತವಾಗಿ ಅಪ್ಪಿಕೊಂಡರು. ಜೋಡೆತ್ತು ಎಂದು ಕರೆಸಿಕೊಂಡವರು ಈಗ ಆ ಜೋಡೆತ್ತು ಪರಸ್ಪರ ಹಾಯುತ್ತಿವೆ ಇದು ಡೇಂಜರ್ ಎಂದು ಡಿವಿ ಸದಾನಂದಗೌಡ ಹೇಳಿದರು.

Prajwal revanna sex videos tapes case Karnataka former cm DV Sadanandagowda reacts at bengaluru rav

ಬೆಂಗಳೂರು (ಮೇ.7): ಕಾಂಗ್ರೆಸ್ ವಿಧಾನಸಭಾ ಚುನಾವಣೆ ಬಳಿಕ ಲೋಕಸಭಾ ಚುನಾವಣೆಯಲ್ಲೂ ದೊಡ್ಡಮಟ್ಟದಲ್ಲಿ ಪ್ರಯತ್ನ ಮಾಡಿದ್ರು ಆದರೆ ಮೋದಿ ಗ್ಯಾರಂಟಿ ಮುಂದೆ ಇವರದು ಠುಸ್ ಪಟಾಕಿ ಆಗಿದೆ ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ಲೇವಡಿ ಮಾಡಿದರು.

ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಸಂಬಂಧ ಇಂದು ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಪ್ರಕರಣದಲ್ಲಿ ಎಸ್ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದಂತೆ ಕಾಣ್ತಿಲ್ಲ. ಡಿಕೆ ಶಿವಕುಮಾರರಂತಹ ಕಲಾಕಾರ ಕರ್ನಾಟಕದಲ್ಲೇ ಯಾರೂ ಇಲ್ಲ. ಕಾರು ಚಾಲಕ ಕಾರ್ತಿಕ್ ಹೇಗೆ ಹೊರಗೆ ಹೋದ್ರು
ಅವರನ್ನು ಯಾಕೆ ವಶಕ್ಕೆ ಪಡೆದಿಲ್ಲ? ಚುನಾವಣೆ ಕೊನೆಯಲ್ಲಿ ಏನೋ ಪ್ರಯತ್ನ ಮಾಡಿದ್ರು. ಈ ಎಲ್ಲದರ ಸೂತ್ರದಾರ ಡಿಕೆ ಶಿವಕುಮಾರ ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಸಿಡಿ ಕೇಸ್‌ನ ಕಥಾ ನಾಯಕ ಕಾಂಗ್ರೆಸ್‌ನ ಡಿಕೆಶಿ?

 

ದೇವೇಗೌಡರು ಒಬ್ಬ ಮುತ್ಸದ್ಧಿ ರಾಜಕಾರಣಿ. ಈ ಪ್ರಕರಣದಲ್ಲಿ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ರೇವಣ್ಣ ವಿಷಯದಲ್ಲಿ ಪ್ಲಾನ್ ಆಫ್ ಆಕ್ಷನ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಇಲ್ಲವೆಂದು ಹೆಚ್‌ಡಿ ರೇವಣ್ಣರನ್ನ ಬಲಿಪಶು ಮಾಡುವ ಪ್ರಯತ್ನ ಮಾಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಹತಾಶೆಯಿಂದ ಕಾನೂನು ತಿರುಚುವ ಕಾರ್ಯ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ರಾಜಕೀಯವಾಗಿ ಏನೂ ಸಿಗದೇ ಇದ್ದಾಗ ಈ ರೀತಿ ಸಿಡಿ ಬಿಡೋದು ಅತ್ಯಂತ ನೀಚ ಕೆಲಸ. ರಾಜಕೀಯದಲ್ಲಿ ಕೂಡ ಇಂತಹ ಸೀರಿಯೆಸ್ ಕೇಸ್ ದಿಕ್ಕು ತಪ್ಪುತ್ತದೆ. ಒಮ್ಮೊಮ್ಮೆ ಸಣ್ನ ಕೇಸ್‌ಗಳು ಬಹಳ ಸೀರಿಯೆಸ್ ಆಗುತ್ತದೆ. ಸಮಾಜವನ್ನೇ ಬ್ಲಾಸ್ಟ್ ಮಾಡುವ ಪ್ರಯತ್ನ ಇದು. ಸಿಡಿ ಹಂಚಿಕೆ ಮಾಡಿದಾಗ ಕ್ರಮ ಆಗಬೇಕಿತ್ತು. ಆದರೆ ಆಗಲಿಲ್ಲ. ಈ ಕೇಸ್‌ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಪರ್ದೆ ಕೆ ಪೀಚೆ ಕೆಲಸ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಕೇಸ್‌ನಿಂದ ನಮಗೆ ಡ್ಯಾಮೇಜ್ ಆಗಿದೆ ನಿಜ. ಆದರೆ ಇವತ್ತು ಅದೇ ಬೌನ್ಸ್ ಬ್ಯಾಕ್ ಆಗಿದೆ. ಅವರೇ ಬ್ಯಾಟಿಂಗ್ ಶುರು ಮಾಡಿದ್ದರು. ನಾವು ಫೀಲ್ಡ್ ಮಾಡಿದ್ದೆವು. ಈಗ ಕ್ಯಾಚ್ ಆಗಿದೆ. ಹಾಗಾಗಿ ಅವರಿಗೆ ಈಗ ಅರ್ಥ ಆಗಿದೆನಿಜವಾದ ಕೊಳಕು ಯಾರು ಎಂದೇ ಅವರಿಗೆ ಗೊತ್ತಾಗ್ತಾ ಇಲ್ಲ.

 

ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ, ವಿಡಿಯೋ ಟಿಕ್ ಮಾಡಿದ್ದು ಸುರ್ಜೇವಾಲ, ಹೆಚ್‌ಡಿಕೆ ಗಂಭೀರ ಆರೋಪ!

ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ ನಡುವೆ ಕಿರಿಕ್ ಇರೋದು ಈಗಿಂದ ಇರೋದು ಅಲ್ಲ. ಅವರು ಸಿಎಂ ಆಗಿದ್ದಾಗ ಅವರ ಸಭೆಗೆ ಹೋಗಿ ಡಿಕೆಶಿ ಹೋಗಿ ಕುಳಿತು ಗಲಾಟೆ ಮಾಡಿದ್ದರು. ಬಳಿಕ ಅತ್ಯಂತ ಆಪ್ತವಾಗಿ ಅಪ್ಪಿಕೊಂಡರು. ಜೋಡೆತ್ತು ಎಂದು ಕರೆಸಿಕೊಂಡವರು ಈಗ ಆ ಜೋಡೆತ್ತು ಪರಸ್ಪರ ಹಾಯುತ್ತಿವೆ. ಆದರೆ ಇವರು ಎತ್ತಿನ ತರಹ ಹಾಯುತ್ತಿಲ್ಲ. ಕೋಣದ ತರಹ ಹಾಯುತ್ತಿದ್ದಾರೆ, ಇದು ಡೇಂಜರ್ ಎಂದರು. 

Latest Videos
Follow Us:
Download App:
  • android
  • ios