ವಿಡಿಯೋ ಯಾರು ರಿಲೀಸ್ ಮಾಡಿದ್ರು ಅನ್ನೋದ್ರ ಬಗ್ಗೆ ಮುಂದೆ ಒಂದು ಡಿಬೇಟ್ ಮಾಡೋಣ, ಈಗ ಬೇಡ: ಡಿಕೆಶಿ

ಅಶೋಕ್ ಸಂವಿಧಾನಾತ್ಮಕ ಹುದ್ದೆ ಇಟ್ಟುಕೊಂಡಿದಾರೆ, ಆ ಹುದ್ದೆಗೆ ಗೌರವ ಕೊಡಲಿ. ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ ನಾಯಕರು ಯಾರೂ ಮಾತಾಡ್ತಾ ಇಲ್ಲ. ವಿರೋಧ ಪಕ್ಷದ ನಾಯಕನಾಗಿ ಆಶೋಕಣ್ಣ, ವಿಜಯೇಂದ್ರ, ಶೋಭಕ್ಕಾ, ಸಿಟಿ ರವಿಯನ್ನ ಕರೆದುಕೊಂಡು ಸಂತ್ರಸ್ತರ ಮನೆಗೆ ಹೋಗಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿರುಗೇಟು ನೀಡಿದರು.

Prajwal Revanna sex scandal case DK Shivakumar reaction at kalaburagi rav

ಕಲಬುರಗಿ (ಮೇ.2): ಅಶೋಕ್ ಸಂವಿಧಾನಾತ್ಮಕ ಹುದ್ದೆ ಇಟ್ಟುಕೊಂಡಿದಾರೆ, ಆ ಹುದ್ದೆಗೆ ಗೌರವ ಕೊಡಲಿ. ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ ನಾಯಕರು ಯಾರೂ ಮಾತಾಡ್ತಾ ಇಲ್ಲ. ವಿರೋಧ ಪಕ್ಷದ ನಾಯಕನಾಗಿ ಆಶೋಕಣ್ಣ, ವಿಜಯೇಂದ್ರ, ಶೋಭಕ್ಕಾ, ಸಿಟಿ ರವಿಯನ್ನ ಕರೆದುಕೊಂಡು ಸಂತ್ರಸ್ತರ ಮನೆಗೆ ಹೋಗಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿರುಗೇಟು ನೀಡಿದರು.

ಪ್ರಜ್ವಲ್ ರೇವಣ್ಣ ಹಾಸನದಿಂದ ಹೋಗುವಾಗಲೇ ಅರೆಸ್ಟ್ ಮಾಡಬೇಕಿತ್ತು ಎಂಬ ಆರ್.ಅಶೋಕ್ ಹೇಳಿಕೆಗೆ ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಹಾಸನದಿಂದ ಹೋಗುವಾಗ ಅರೆಸ್ಟ್ ಏಕೆ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ಹೋಂ ಮಿನಿಸ್ಟರ್ ಉತ್ತರ ಕೊಡ್ತಾರೆ. ಅದಕ್ಕೂ ಮೊದಲು ಅಶೋಕಣ್ಣ ಬಿಜೆಪಿ ಮುಖಂಡರನ್ನು ಕರೆದುಕೊಂಡು ಸಂತ್ರಸ್ತರ ಫೋಟೋಗಳನ್ನು ನೋಡಿಕೊಂಡು ಅವರ ಮನೆಗಳಿಗೆ ಹೋಗಿ ಧೈರ್ಯ ತುಂಬುವ ಕೆಲಸ ಮಾಡಲಿ. ಬಿಜೆಪಿ, ಕುಮಾರಸ್ವಾಮಿ ಈ ಕೆಲಸ ಮಾಡಲಿ ಎಂದರು.

ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ; ಎಸ್‌ಐಟಿ ವಿಚಾರಣೆಗೆ ಕರೆದರೆ ಆತ್ಮಹತ್ಯೆ ಮಾಡಿಕೊಳ್ತೀವಿ ಎಂದ ಸಂತ್ರಸ್ತೆಯರು

ಬಿಜೆಪಿ ಜೊತೆ ಮೈತ್ರಿ ಇಷ್ಟ ಇರಲಿಲ್ಲ ಅಂತಾ ಅಜಿತ್ ಹನುಮಕ್ಕನವರ ಜೊತೆ ಸಂದರ್ಶನದಲ್ಲಿ ಕುಮಾರಸ್ವಾಮಿಯೇ ಹೇಳಿದ್ದಾರೆ. ಕಾರ್ತಿಕನನ್ನು ಮಲೇಷಿಯಾಗೆ ಕರೆದುಕಕೊಂಡು ಹೋಗಿದ್ದು ಯಾರು ಎನ್ನುವ ಪ್ರಶ್ನೆಗೆ ಎಚ್‌ಡಿಕೆ ಗರಂ ಆದ ಡಿಕೆ ಶಿವಕುಮಾರ, ಹೌದಾ ? ನಮ್ಮ ಬ್ರದರ್ ಹಾಗೆ ಹೇಳಿದ್ರಾ ?  ಅವರು ಹೇಳಿದ್ದಾರೆ ಅಂದ ಮೇಲೆ ಅವರಿಗೆ ಅದರ ಮಾಹಿತಿ ಗೊತ್ತಿರಬೇಕಲ್ಲಾ? ನನಗೇನು ತಲೆಕೆಟ್ಟಿದೆಯಾ? ರೋಡಲ್ಲಿ ಫೈಟ್ ಮಾಡೋನ ನಾನು? ಅವರು ತೋಟದ ಮನೆಯಲ್ಲಿ ಏನೇನೋ ಮಾಡಬಹುದು ಇನ್ನೊಂದು ಕಡೆ ಮಾಡಬಹುದು ಅಂತಹ ಅವಶ್ಯಕತೆ ಅವರಿಗಿರಬಹುದು, ನನಗಿಲ್ಲ ಎಂದರು.

 

ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರಿಗೆ ಧೈರ್ಯ ತುಂಬಿಲ್ಲ ಏಕೆ?: ಅಮಿತ್‌ ಶಾಗೆ ಕಾಂಗ್ರೆಸ್‌ ಪ್ರಶ್ನೆ

ಪೆನ್ ಡ್ರೈವ್ ಬಿಜೆಪಿ ಅವರಿಗೆ ಕೊಟ್ಟಿದ್ದೀನಿ ಅಂತ ಆ ಹುಡುಗನೇ ಹೇಳಿದಾನಲ್ವಾ? ವಕೀಲರು ಕೂಡ ಕುಮಾರಣ್ಣನ ಬಗ್ಗೆ ಅಭಿಮಾನ ಇದೆ ಅವರಿಗೆ ಈ ವಿಚಾರ ತಿಳಿಸಿದ್ದೆ ಅಂತ ಹೇಳಿದ್ದಾರಲ್ವಾ? ವಿಡಿಯೋ ಯಾರು ರಿಲೀಸ್ ಮಾಡಿದ್ರು ಬಿಟ್ರು ಅನ್ನೋದ್ರ ಬಗ್ಗೆ ಮುಂದೆ ಒಂದು ಡಿಬೇಟ್ ಮಾಡೋಣ ಈಗ ಬೇಡ ಎಂದರು.

Latest Videos
Follow Us:
Download App:
  • android
  • ios