ಮಾ.16ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ ಭೇಟಿ, 2 ಲಕ್ಷ ಜನ ಸೇರುವ ನಿರೀಕ್ಷೆ: ತೇಲ್ಕೂರ

ಈ ಬೃಹತ್ ಸಮಾವೇಶದಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರು ಮತ್ತು ಕಲಬುರಗಿ, ಬೀದರ್ ಸಂಸದರು ಸೇರಿದಂತೆ ಬಿಜೆಪಿ ಪಕ್ಷದ ಇನ್ನಿತರ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ: ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ 
 

PM Narendra Modi Will Visit Kalaburagi on March 16th says Rajkumar Patil Telkur grg

ಸೇಡಂ(ಮಾ.14):  ಮುಂಬರುವ ಕಲಬುರಗಿ- ಬೀದರ್‌ ಎರಡೂ ಲೋಕಸಭೆ ಚುನಾವಣೆ ಪ್ರಚಾರದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾ.16ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಏರ್ಪಡಿಸಲಾಗಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಕಲ್ಯಾಣ ಕರ್ನಾಟಕ ದಿಂದಲೇ ಕರ್ನಾಟಕದ ಲೋಕಸಭೆ ಚುನಾವಣೆ ಕಹಳೆ ಊದಲಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

ಅವರು ಬುಧವಾರ ಸೇಡಂ ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ನಡೆಯಲಿರುವ ಕಾರ್ಯಕ್ರಮಕ್ಕೆ ಎರಡೂ ಲೋಕಸಭೆ ಕ್ಷೇತ್ರದ ಸುಮಾರು ಎರಡು ಲಕ್ಷ ಜನ ಸಾಕ್ಷಿಯಾಗಲಿದ್ದಾರೆ ಎಂದ ಅವರು, ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಕಲಬುರಗಿ ನಗರಕ್ಕೆ ಪ್ರವೇಶಿಸಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿರುವ ಕಲ್ಯಾಣ ಮಂಟಪಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಬಿಜೆಪಿ ಸರ್ಕಾರ ಇದ್ದಾಗ ಭಯೋತ್ಪಾದಕರ ಅಡ್ಡೆಯಾಗಿತ್ತು; ನಮ್ಮ ಸರ್ಕಾರ ಬಂದ ಮೇಲೆ ಕಡಿಮೆಯಾಗಿದೆ: ರಾಮಲಿಂಗಾರೆಡ್ಡಿ

ಸೇಡಂ ತಾಲೂಕಿನಿಂದ ಹತ್ತು ಸಾವಿರ ಜನ ಬರಲಿದ್ದು ಒಂದು ಸಾವಿರ ವಾಹನ ಸೇಡಂ ನಿಂದಲೇ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಗೆ ಲೋಕಸಭೆ ಯಲ್ಲಿ ಈ ಬಾರಿ ನಾಲ್ಕು ನೂರು ಕ್ಷೇತ್ರದ ಗುರಿಯೊಂದಿಗೆ ಭಾರತಕ್ಕೆ ಮತ್ತೊಮ್ಮೆ ಮೋದಿ ಎಂಬ ಘೋಷಣೆಯೊಂದಿಗೆ ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಹಾಗೆಯೇ ಮೋದಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು. ಈ ಬೃಹತ್ ಸಮಾವೇಶದಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರು ಮತ್ತು ಕಲಬುರಗಿ, ಬೀದರ್ ಸಂಸದರು ಸೇರಿದಂತೆ ಬಿಜೆಪಿ ಪಕ್ಷದ ಇನ್ನಿತರ ಹಲವಾರು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಲೋಕಸಭೆ ಚುನಾವಣೆ ಸೇಡಂ ಉಸ್ತುವಾರಿ ಅವ್ವಣ್ಣ ಮ್ಯಾಗೇರಿ, ಸೇಡಂ ಮಂಡಲದ ಬಿಜೆಪಿ ಅಧ್ಯಕ್ಷ ಶರಣು ಶಂಕರ್, ಪ್ರದಾನ ಕಾರ್ಯದರ್ಶಿಗಳಾದ ತಿರುಪತಿ ಶಾಬಾದಕರ್, ವೀರೇಶ ಹೂಗಾರ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದು ಬಾನಾರ, ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ವಿಜಯಕುಮಾರ್ ಆಡಕಿ, ಓಂಪ್ರಕಾಶ್ ಪಾಟೀಲ, ರವಿ ಭಂಟನಳ್ಳಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios