ಇಂಡಿಯಾ ಒಕ್ಕೂಟದ ಸಭೆಯಲ್ಲಿ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎನ್ನಲಾದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಈ ಘಟನೆಯು ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗ.

ವಿರೋಧ ಪಕ್ಷಗಳ iNDI Bloc ಒಳಗೆ ಎಲ್ಲವೂ ಸರಿಯಿಲ್ಲ ಎಂಬ ಬಿಜೆಪಿಯ ನಾಯಕರ ಹೇಳಿಕೆಗಳಿಗೆ ಇಂಬು ಕೊಡುವಂತ ಘಟನೆಗಳು ನಡೆಯುತ್ತಿವೆ. ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿವೆ. ಅದರ ಸಾಲಿಗೆ ಇದೀಗ ಮತ್ತೊಂದು ಬೆಳವಣಿಗೆ ನಡೆದಿದೆ. ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಸಿಪಿಎಂ ನಾಯಕ ಪಿಣರಾಯಿ ವಿಜಯನ್ ಅವರನ್ನು ರಾಹುಲ್ ಗಾಂಧಿ ಅಪ್ಪಿಕೊಳ್ಳಲು ನಿರಾಕರಿಸಿದ್ದರು. ಇದು ಎಡಪಕ್ಷಗಳ ಕೋಪಕ್ಕೆ ಗುರಿಯಾಗಿದೆ. ಈ ಹಿನ್ನೆಲೆ ರಾಹುಲ್ ಗಾಂಧಿ ಸಂಸತ್ತಿನಲ್ಲೇ ಮಿತ್ರಪಕ್ಶಗಳಿಂದ ಟೀಕೆಗಳನ್ನ ಎದುರಿಸುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಹುಲ್ ಗಾಂಧಿ ಹೇಳಿಕೆಯಿಂದ ಹೊಸ ವಿವಾದ:

ರಾಹುಲ್ ಗಾಂಧಿಯವರು ಇತ್ತೀಚೆಗೆ ಜೂ.8ರಂದು ನಡೆದ ಇಂಡಿಯಾ ಅಲೈಯನ್ಸ್ ಸಭೆಯಲ್ಲಿ ಮಾತನಾಡಿರುವ ಆಡಿಯೋ ಕ್ಲಿಪ್ ಬಹಿರಂಗವಾಗಿದ್ದು ಇಂಡಿಯಾ ಒಕ್ಕೂಟದಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಎಡಪಂಥಿಯರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಪಿಣರಾಯಿ ವಿಜಯನ್ ಅಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿದ್ದು ಏಕೆ?

ವರದಿಗಳ ಪ್ರಕಾರ, ಜೂನ್ 8 ರಂದು ನಡೆದ ಇಂಡಿಯಾ ಅಲೈಯನ್ಸ್ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆನ್ನಲಾದ ಆಡಿಯೋ ಕ್ಲಿಪ್‌ನಲ್ಲಿ, ಪಿಣರಾಯಿ ವಿಜಯನ್ ಅವರೊಂದಿಗೆ ರಾಜಕೀಯ ಸಂಘರ್ಷ ಇರೋದ್ರಿಂದ ಅವರನ್ನು ಅವರನ್ನು ಅಪ್ಪಿಕೊಳ್ಳುವುದಿಲ್ಲ ಎಂದು ಹೇಳಿರುವುದು ಕೇಳಿಬಂದಿದೆ. ರಾಹುಲ್ ಗಾಂಧಿ, 'ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ, ಆದರೆ ನೀವು ಕೇರಳದ ಮಾಜಿ ಮುಖ್ಯಮಂತ್ರಿಯನ್ನು ಹೋಗಿ ಅಪ್ಪಿಕೊಳ್ಳುವಂತೆ ಹೇಳಿದ್ರೆ ನಾನು ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ನನಗೆ ಅವರೊಂದಿಗೆ ರಾಜಕೀಯ ಸಂಘರ್ಷವಿದೆ ಎಂದಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ Vs ಸಿಪಿಎಂ ರಾಜಕೀಯ ಎದುರಾಳಿ

ಇಂಡಿಯಾ ಒಕ್ಕೂಟದಲ್ಲಿ ಒಂದೇ ಎಂದು ತೋರಿಸಿಕೊಂಡರು. ವಾಸ್ತವವಾಗಿ ಕೇರಳದಲ್ಲಿ ಕಾಂಗ್ರೆಸ್-ಸಿಪಿಎಂ ಹಿಂದಿನಿಂದಲೂ ರಾಜಕೀಯ ಎದುರಾಳಿಗಳಾಗಿವೆ.ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಿಣರಾಯಿ ವಿಜಯನ್ ಅವರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿತು. ಆದರೆ ರಾಷ್ಟ್ರೀಯ ಮಟ್ಟದಲ್ಲಿ, ಎರಡೂ ಪಕ್ಷಗಳು ಭಾರತ ಮೈತ್ರಿಕೂಟದ ಭಾಗವಾಗಿದ್ದು, ಬಿಜೆಪಿ ವಿರುದ್ಧ ರಾಜಕೀಯದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.

ರಾಹುಲ್ ಗಾಂಧಿ ಹೇಳಿಕೆ ಪಿಣರಾಯಿ ವಿಜಯನ್ ಹೇಳಿದ್ದೇನು?

ರಾಹುಲ್ ಗಾಂಧಿಯವರ ಹೇಳಿಕೆಗೆ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದು, ತಾವು ರಾಹುಲ್ ಗಾಂಧಿ ಎಂದಿಗೂ ಅಪ್ಪಿಕೊಳ್ಳುವ ಸಂಪ್ರದಾಯವನ್ನು ಹೊಂದಿಲ್ಲ ಎಂದು. ಹೀಗಾಗಿ ಇದರಲ್ಲೇನು ವಿಶೇಷವಿಲ್ಲ. ಸಾಮಾನ್ಯವಾಗಿ, ಇಬ್ಬರು ಔಪಚಾರಿಕ ಶುಭಾಶಯ ಅಥವಾ ಹಸ್ತಲಾಘವ ಮಾಡುತ್ತೇವಷ್ಟೇ. ನನ್ನ ಆಕ್ಷೇಪಣೆ ಅಪ್ಪುಗೆಯ ಬಗ್ಗೆ ಅಲ್ಲ. ರಾಹುಲ್ ಗಾಂಧಿಯವರ ಹೇಳಿಕೆ ರಾಜಕೀಯವಾಗಿ ಏನು ಸಂದೇಶ ರವಾನಿಸಿದೆ ಎಂಬ ಬಗ್ಗೆ. ಇದು ಅವರ ರಾಜಕೀಯ ದೃಷ್ಟಿಕೋನಗಳು, ಭಾರತ ಮೈತ್ರಿಕೂಟದ ಬಗ್ಗೆ ಅವರ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ' ಎಂದು ತಿರುಗೇಟು ನೀಡಿದ್ದಾರೆ.

2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿರುವ ತಮ್ಮ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿತ್ತುಎಂದು ಪಿಣರಾಯಿ ವಿಜಯನ್ ಇದೇ ವೇಳೆ ನೆನಪಿಸಿಕೊಂಡರು.

ಕಾಂಗ್ರೆಸ್ ವಿರುದ್ಧ ಎಡಪಕ್ಷಗಳು ಕಿಡಿ

ಸಿಪಿಎಂ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಂಸದ ಎಂ.ಎ. ಬೇಬಿ, ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳುವಂತೆ ಯಾರೂ ರಾಹುಲ್ ಗಾಂಧಿಯವರನ್ನು ಕೇಳಿರಲಿಲ್ಲ, ಆದರೆ ಅವರು ವಿಜಯನ್ ಅವರನ್ನು ಬಂಧಿಸುವಂತೆ ಒತ್ತಾಯಿಸುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು. ಇನ್ನು ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಮಾತನಾಡಿ, ಇದು ಅಪ್ಪುಗೆಯ ವಿಷಯವಲ್ಲ, ಬದಲಾಗಿ ಭಾರತ ಮೈತ್ರಿಕೂಟದ ರಾಜಕೀಯ, ಮತ್ತದರ ವಿಶ್ವಾಸಾರ್ಹತೆಯ ವಿಷಯವಾಗಿದೆ.

ನಮಗೆ ಯಾರ ಅಪ್ಪುಗೆಯ ಅಗತ್ಯವಿಲ್ಲ: ಬೃಂದಾ ಕಾರಟ್ ಕಿಡಿ

ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಹಿರಿಯ ಸಿಪಿಎಂ ನಾಯಕಿ ಬೃಂದಾ ಕಾರಟ್, ನಮಗೆ ಯಾರ ಅಪ್ಪುಗೆಯೂ ಅಗತ್ಯವಿಲ್ಲ. ಕಮ್ಯುನಿಸ್ಟರು ರಾಜಕೀಯ ಅಪ್ಪಿಕೊಳ್ಳುವ ಅಗತ್ಯವಿಲ್ಲ. ನಮಗೆ ಸ್ಪಷ್ಟ ರಾಜಕೀಯ ಚಿಂತನೆ ಬೇಕು. ರಾಹುಲ್ ಗಾಂಧಿ ತಮ್ಮ ಅಪ್ಪುಗೆ ರಾಜಕೀಯವನ್ನು ತಮ್ಮಲ್ಲೇ ಇಟ್ಟುಕೊಳ್ಳಬೇಕು, ಆದರೆ ವಿರೋಧ ಪಕ್ಷದ ನಾಯಕರಾಗಿ ಅವರು ಪಿಣರಾಯಿ ವಿಜಯನ್ ಅವರಂತಹ ವಿರೋಧ ಪಕ್ಷದ ನಾಯಕರನ್ನು ಗೌರವಿಸಬೇಕು' ಎಂದು ರಾಹುಲ್ ಗಾಂಧಿಗೆ ಮಾತಿನಲ್ಲೇ ತಿವಿದರು.