Asianet Suvarna News Asianet Suvarna News

Mekedatu ಸಮಸ್ಯೆ ಬಗೆಹರಿಸದ ಮೋದಿ: ಬಿ.ಎಲ್‌. ಶಂಕರ್‌

*  ವಿವಾದ ಜೀವಂತ ಇಡುವುದೇ ಬಿಜೆಪಿ ಉದ್ದೇಶ
*  ಯೋಜನೆ ಜಾರಿಗೆ 2015ರಲ್ಲೇ ಮೋದಿಗೆ ಸಿದ್ದು ಮನವಿ
*  ತಮಿಳುನಾಡಿನ ಜತೆಗೆ ಸಭೆ ಆಯೋಜನೆಗೂ ಕೋರಲಾಗಿತ್ತು
 

PM Narendra Modi Not Solved The Mekedatu Dispute Says BL Shankar grg
Author
Bengaluru, First Published Jan 13, 2022, 11:51 AM IST

ಬೆಂಗಳೂರು(ಜ.13):  ಮೇಕೆದಾಟು ಯೋಜನೆ(Mekedatu Project) ಸಂಬಂಧ ಕರ್ನಾಟಕ(Karnataka) ಹಾಗೂ ತಮಿಳುನಾಡು(Tamil Nadu) ನಡುವಿನ ವಿವಾದವನ್ನು ಬಗೆಹರಿಸುವ ದಿಸೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಯಾವ ಕ್ರಮವನ್ನು ಕೈಗೊಂಡಿಲ್ಲ. ಈ ವಿವಾದ ಜೀವಂತ ಇರಬೇಕು ಎಂಬುದು ಕೇಂದ್ರ ಬಿಜೆಪಿ ಸರ್ಕಾರದ ಬಯಕೆಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌(BL Shankar) ಆರೋಪಿಸಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನ ಸಂಬಂಧ 2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ(Siddaramaiah) ನೇತೃತ್ವದ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದ್ದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿವಾದ ಇತ್ಯರ್ಥಕ್ಕೆ ತಮಿಳುನಾಡು ಮತ್ತು ಕರ್ನಾಟಕ ಮತ್ತು ಪುದುಚೇರಿ ಸರ್ಕಾರದ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಕೋರಲಾಗಿತ್ತು. ಆದರೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ನಿವಾರಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ(Central Government) ಮಾಡಲಿಲ್ಲ ಎಂದು ದೂರಿದರು.

News Hour:ರಾಮನಗರ ಜಿಲ್ಲಾಡಳಿತಕ್ಕೆ ಫುಲ್ ಪವರ್, ಹಿಂದೆ ಸರಿಯಲ್ಲ ಅಂದ್ರು ಡಿಕೆ ಬ್ರದರ್!

ಮೇಕೆದಾಟು ಯೋಜನೆ ಸಂಬಂಧ ಜಾಹೀರಾತು ಕೊಡುವ ಅವಶ್ಯಕತೆ ಇರಲಿಲ್ಲ. ವಿವಾದ ಹೋರಾಟದ ಸ್ವರೂಪಕ್ಕೆ ಹೋಗುವ ಮುನ್ನ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆದು ಚರ್ಚಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಜೊತೆಗೆ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ಪ್ರಧಾನಿ ಮೋದಿ ಅವರ ಮನವೊಲಿಸಲು ಮುಂದಾಗಬೇಕಿತ್ತು ಎಂದರು.

ಹಿಂದೆ ಯಾವುದೇ ಕೋರ್ಟ್‌ ಆದೇಶ ಇಲ್ಲದಿದ್ದರೂ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳ ಜೊತೆ ಸಂಧಾನ ಸಭೆ ನಡೆಸಿ ಕೃಷ್ಣಾ ಅಚ್ಚುಕಟ್ಟಿನಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕಕ್ಕೆ ತಲಾ 5 ಟಿಎಂಸಿ ನೀರು ಕೊಡಿಸಿದ್ದರು. ಅಂತಹ ಕೆಲಸವನ್ನು ಮೋದಿ ಅವರು ಯಾಕೆ ಮಾಡಲಿಲ್ಲ. ಸಮಸ್ಯೆಯನ್ನು ಜೀವಂತ ಇಡುವ ಉದ್ದೇಶ ಇದೆಯೇ ಎಂದು ಹೇಳಿದರು.

ಸರ್ಕಾರದ ಕೆಲಸ:

ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮಿತ್ರ ಪಕ್ಷವಾಗಿರುವ ತಮಿಳುನಾಡಿನ ಡಿಎಂಕೆ ಮನವೊಲಿಸಬೇಕಿತ್ತು ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿ.ಎಲ್‌. ಶಂಕರ್‌, ಸ್ಥಾನ ಹಂಚಿಕೆ ವಿಷಯವಾಗಿದ್ದರೆ ಮಾತುಕತೆ ಮಾಡಬಹುದಿತ್ತು. ಆದರೆ ಇದು ನೀರಿನ ವಿಷಯ, ಎರಡು ಸರ್ಕಾರಗಳ ನಡುವೆ ಮಾತುಕತೆ ನಡೆಯಬೇಕೇ ಹೊರತು ಪಕ್ಷಗಳ ನಡುವೆ ಅಲ್ಲ ಎಂದು ತಿರುಗೇಟು ನೀಡಿದರು.

ಪರಿಸರ ರಾಷ್ಟ್ರದ ಸ್ವತ್ತು ಆಗುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು, ಆದರೆ ಅನುಭವ, ತಿಳಿವಳಿಕೆಯ ಕೊರತೆ, ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯ ಇಲ್ಲದ ಕಾರಣ ಇಷ್ಟೆಲ್ಲಾ ಆಗಿದೆ ಎಂದು ಬಿ.ಎಲ್‌. ಶಂಕರ್‌ ಅಭಿಪ್ರಾಯಪಟ್ಟರು.

Congress Padayatra 'ಮುಖ್ಯಮಂತ್ರಿ ಆಗುವ ದೃಷ್ಟಿಯಿಂದಲೇ ಡಿಕೆಶಿ ಪಾದಯಾತ್ರೆ'

ಪಾದಯಾತ್ರೆ ಹಿಂದೆ ಜನರ ಪ್ರಾಣ ಬಲಿ ಪಡೆವ ದುರುದ್ದೇಶ: ಕಟೀಲ್‌

ಕಾಂಗ್ರೆಸ್‌(Congress) ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯು(Mekedatu Padayatra) ಕೋವಿಡ್‌ ಹರಡುವ ಮೂಲಕ ಜನರ ಪ್ರಾಣಬಲಿ ಪಡೆಯುವ ದುರುದ್ದೇಶದಿಂದ ಕೂಡಿದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಆಪಾದಿಸಿದ್ದಾರೆ.

ಪಾದಯಾತ್ರೆ ಬಗ್ಗೆ ರಾಜ್ಯ ಹೈಕೋರ್ಟ್‌ ಈಗಾಗಲೇ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಕಾಂಗ್ರೆಸ್‌ ಪಕ್ಷದವರಿಗೆ ನ್ಯಾಯಾಂಗದ ಕುರಿತು ವಿಶ್ವಾಸ ಇದ್ದರೆ ಮತ್ತು ಜನರ ಜೀವದ ಬಗ್ಗೆ ಕಳಕಳಿ ಇದ್ದರೆ ತಕ್ಷಣ ತಮ್ಮ ಪಾದಯಾತ್ರೆಯನ್ನು ರದ್ದುಪಡಿಸಬೇಕು. ಜೊತೆಗೆ ಕೋವಿಡ್‌(Covid19) ಹೆಚ್ಚಿಸಲು ಕಾರಣವಾಗಿದ್ದಕ್ಕೆ ಜನರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios