Asianet Suvarna News Asianet Suvarna News

Farm Laws| ಪ್ರಧಾನಿ ಮೋದಿಗೆ ರೈತರ ಪರ ಕಾಳಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

*  ಮೋದಿ ಸರ್ಕಾರದ ವಿರುದ್ಧ  ಹರಿಹಾಯ್ದ ಮಲ್ಲಿಕಾರ್ಜುನ ಖರ್ಗೆ
*  ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆ 
*  ಮೋದಿ ಪ್ರಶ್ನೆ ಕೇಳಿದರೇ ಉತ್ತರಿಸುವೆ 

PM Narendra Modi Has No Concern about Farmers Says Mallikarjun Kharge grg
Author
Bengaluru, First Published Nov 21, 2021, 12:36 PM IST

ಕಲಬುರಗಿ(ನ.21): ಕೃಷಿ ಕಾಯ್ದೆ(Farm Laws) ಮಸೂದೆ ವಾಪಸ್ ಹಿಂದೆ ಪ್ರಧಾನಿ ಮೋದಿಯವರಿಗೆ ರೈತರ ಪರ ಕಾಳಜಿ ಇಲ್ಲ. ಪಂಚರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ದೃಷ್ಟಿಯಿಂದ ಕಾಯ್ದೆಯನ್ನ ವಾಪಸ್ ತೆಗೆದುಕೊಂಡಿದ್ದಾರೆ. ಈಗಲೂ ಕಾನೂನು ಸರಿ ಇದೆ ಎನ್ನುವುದೇ ಅವರ ಭಾವನೆಯಾಗಿದೆ. ಹೋರಾಟದಿಂದ ಏಳುನೂರು ರೈತರ ಸಾವಿಗೀಡಾಗಿದ್ದಾರೆ. ಇದರಿಂದ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ ಅಂತ ನರೇಂದ್ರ ಮೋದಿ ಸರ್ಕಾರ ವಿರುದ್ಧ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹರಿಹಾಯ್ದಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮೋದಿ(Narendra Modi) ಪದೇ ಪದೇ ತಪ್ಪು ಮಾಡುತ್ತಿರುವುದು ಇದರಿಂದ ಗೊತ್ತಾಗುತ್ತದೆ. ಮೋದಿ ಅವರು ಸಡನ್ ಆಗಿ ತಮ್ಮ ಮನಸ್ಸಿಗೆ ತೋಚಿದ ನಿರ್ಣಯವನ್ನ ಕೈಗೊಳ್ಳುತ್ತಾರೆ. ಕಾಯ್ದೆ ವಾಪಸ್ ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ಸಂಪುಟದಲ್ಲಿ ಚರ್ಚಿಸಿಲ್ಲ. ಮೋದಿ ಮನಸ್ಸಿಗೆ ಬಂತು ಕಾಯ್ದೆ ವಾಪಸ್ ತೆಗೆದುಕೊಂಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಯ ಸೋಲಿನಿಂದ ಕಂಗೆಟ್ಟು ಮೋದಿ ಈ ನಿರ್ಣಯ ಕೈಗೊಂಡಿದ್ದಾರೆ ಅಂತ ಹೇಳಿದ್ದಾರೆ. 

ಮೋದಿ ಪ್ರಶ್ನೆ ಕೇಳಿದರೇ ಉತ್ತರಿಸುವೆ 

ಖರ್ಗೆ ಲೂಟಿ ಗ್ಯಾಂಗ್ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ಅಂಥವರ(ಕಟೀಲ್‌) ಬಗ್ಗೆ ನಾನು ಮಾತನಾಡಲಾರೆ. ಅವರ ಗುರುಗಳು ನನಗೆ ಪ್ರಶ್ನೆ ಕೇಳಲಿ ಉತ್ತರಿಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೋದಿ ಪ್ರಶ್ನೆ ಕೇಳಿದರೇ ಉತ್ತರಿಸುವೆ ಎಂದು ಖರ್ಗೆ ಹೇಳಿದ್ದಾರೆ. 

ಇಂಥವರ(ಕಟೀಲ್‌) ಮಾತುಗಳಿಗೆ ನಮ್ಮ ಪಕ್ಷದ ಇಲ್ಲಿನ ನಾಯಕರು ಉತ್ತರ ಕೊಡುತ್ತಾರೆ. ಅದು ಬಿಜೆಪಿಯವರ(BJP) ಸಂಸ್ಕೃತಿ ಎತ್ತಿತೋರಿಸುತ್ತದೆ. ಅರುಣಾಚಲ ಪ್ರದೇಶದಲ್ಲಿ(Arunachal Pradesh) ಚೀನಾ(China) ಗ್ರಾಮ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರು ಗ್ರಾಮ ನಿರ್ಮಾಣ ಮಾಡುತ್ತಿದ್ದಾರೆ. ಇವರು ಅದನ್ನು ನೋಡುತ್ತಾ ಕುಳಿತಿದ್ದಾರೆ. ಚೀನಾದ ನಡೆಯ ಬಗ್ಗೆ ರಾಹುಲ್ ಗಾಂಧಿ(Rahul Gandhi) ಮೊದಲೇ ಎಚ್ಚರಿಸಿದ್ದರು. ಆದರೆ ಇವರ್ಯಾರು ಅದರ ಬಗ್ಗೆ ಗಮನ ಕೊಡಲಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ(Central Government) ನಿರ್ಲಕ್ಷಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆ 

ಉತ್ತರ ಪ್ರದೇಶ ಚುನಾವಣೆಯಲ್ಲಿ(Uttara Pradesh) ಕಾಂಗ್ರೆಸ್(Congress) ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಪ್ರಿಯಾಂಕ ಗಾಂಧಿ(Priyanka Gandhi) ಈಗಾಗಲೇ ಹೇಳಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ಮಟ್ಟದ ಹೊಂದಾಣಿಕೆ ಬಿಟ್ರೆ ಸ್ವತಂತ್ರವಾಗಿ ಸ್ಪರ್ಧಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

'ಶೀಘ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಭಾರಿ ಬದಲಾವಣೆ : ಬಿಜೆಪಿ ಮೂಲದಿಂದ ಮಾಹಿತಿ'

ಕಾಂಗ್ರೆಸ್‌ ಶಾಪಗ್ರಸ್ಥ ಪಕ್ಷ: ಕಟೀಲ್‌ ವ್ಯಂಗ್ಯ

ಯಾದಗಿರಿ(Yadgir): ಗಾಂಧೀಜಿ, ಅಂಬೇಡ್ಕರ್‌ ಹಾಗೂ ಗೋಮಾತೆ ಹೆಸರಲ್ಲಿ ಮತಗಳ ಪಡೆದ ಕಾಂಗ್ರೆಸ್‌ ನಡೆಸಿದ್ದ ಆಡಳಿತ ಯುಗ ಅಂತ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದ್ದು, ಹೊಸ ಶಕೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಟೀಕಿಸಿದ್ದರು.

ವಿಧಾನ ಪರಿಷತ್ತಿನ ಚುನಾವಣಾ(Vidhan Parishat Election) ಪ್ರಚಾರ ಹಿನ್ನೆಲೆಯಲ್ಲಿ ಆಯೋಜನೆಗೊಂಡ ಜನ ಸ್ವರಾಜ್‌(JanSwaraj) ಸಮಾವೇಶ ಅಂಗವಾಗಿ, ಶುಕ್ರವಾರ ಸಂಜೆ ಯಾದಗಿರಿ ನಗರದ ವನಿಕೇರಿ ಲೇಔಟಿನಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್‌ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. 

ಮಹಾತ್ಮಾ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್‌ ಈವರೆಗೆ ಆಡಳಿತ ಮಾಡಿದೆ, ಅವರ (ಕಾಂಗ್ರೆಸ್‌) ಬಣ್ಣ ಬಯಲಾಗಿದೆ. ಆಂತರಿಕ ಕಲಹದಿಂದಾಗಿ ಮುಂಬರುವ ಚುನಾವಣೆಗೂ ಮುನ್ನವೇ, ಕಾಂಗ್ರೆಸ್‌ ಪಕ್ಷ ಎರಡು ಹೋಳಾಗಲಿದೆ ಎಂದು ಭವಿಷ್ಯ ನುಡಿದರು.

ಜನಪರ ಯೋಜನೆಗಳು, ಆರ್ಥಿಕ ಪರಿಸ್ಥಿತಿ ಸುಧಾರಣೆ ಮುಂತಾದವುಗಳಿಂದಾಗಿ ಜನರು ಪ್ರಧಾನಿ ಮೋದಿ ಆಡಳಿತ ಶ್ಲಾಘಿಸುತ್ತಿದ್ದರೆ, ಮೋದಿ ಸರ್ಕಾರವನ್ನು ವಿನಾಕಾರಣ ಟೀಕಿಸುತ್ತಿರುವ ಕಾಂಗ್ರೆಸ್‌ಗೆ ನೆಲೆಯಿಲ್ಲದಂತಾಗಿದೆ ಎಂದರು. ಕೋವಿಡ್‌ ಸೋಂಕು ತಡೆಗಟ್ಟುವಲ್ಲಿ ಹಾಗೂ ಲಸಿಕಾಕರಣ ವಿಚಾರದಲ್ಲಿ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದ ಇಲ್ಲಿನ ಯೋಜನೆಗಳು ಜಗತ್ತಿನಾದ್ಯಂತ ಶ್ಲಾಘಿಸಲ್ಪಿಟ್ಟಿವೆ ಎಂದ ಅವರು, ಲಸಿಕೆ ಟೀಕಿಸಿದವರೇ ಕಳ್ಳತನದಿಂದ ಹೋಗಿ ಲಸಿಕೆ ಹಾಕಿಸಿಕೊಂಡು ಬಂದರು ಎಂದು ಕಾಂಗ್ರೆಸ್‌ ನಾಯಕರುಗಳ ವಿರುದ್ಧ ವ್ಯಂಗ್ಯವಾಡಿದರು.

Kalaburagi| 'ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ವಾಮಮಾರ್ಗ'

ದೇಶಕ್ಕೆ ಕಾಂಗ್ರೆಸ್‌ ಪಕ್ಷದ ಕೊಡುಗೆ ಎಂದರೆ, ಭಯೋತ್ಪಾದನೆ(Terrorism), ಭ್ರಷ್ಟಾಚಾರ(Courruption), ಬಡತನ ಹಾಗೂ ನಿರುದ್ಯೋಗ ಸಮಸ್ಯೆ ಎಂದು ಕಟಕಿಯಾಡಿದ ನಳೀನ್‌, ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಆಡಳಿತವನ್ನು ಜನ ಮೆಚ್ಚಿದ್ದಾರೆ ಹಾಗೂ ಒಪ್ಪಿದ್ದಾರೆ. ಕಾಂಗ್ರೆಸ್‌ ಮುಕ್ತ ರಾಷ್ಟ್ರ ಮಾಡಬೇಕಾಗಿದೆ, ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಿ ದೇಶವನ್ನು ಸುರಕ್ಷಿತರ ಕೈಗೆ ನೀಡಬೇಕಿದೆ ಎಂದು ಮನವಿ ಮಾಡಿದ್ದರು. 

ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಬೇಕಿದೆ ಎಂದು ಗ್ರಾಮ ಪಂಚಾಯತ್‌ ಸದಸ್ಯರಲ್ಲಿ ಮನವಿ ಮಾಡಿದ ಕಟೀಲ್‌, ಪ್ರತಿ ಸದಸ್ಯರಿಗೆ 10 ಸಾವಿರ ರು.ಗಳ ಗೌರವಧನ ಹಾಗೂ ಪಂಚಾಯ್ತಿಗೆ 2 ಕೋಟಿ ರು.ಗಳ ಅನುದಾನ ಇವೆಲ್ಲವನ್ನೂ ನೀಡಲಾಗುವುದು ಎಂದ ಅವರು, ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
 

Follow Us:
Download App:
  • android
  • ios