Asianet Suvarna News Asianet Suvarna News

Kalaburagi| 'ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ವಾಮಮಾರ್ಗ'

*  7 ಪರಿಷತ್‌ ಸದ್ಯರ ಹೆಸರು ಕಲಬುರಗಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಹುನ್ನಾರ
*  ಕಲಬುರಗಿ ದಕ್ಷಿಣ ಅಸೆಂಬ್ಲಿ ಕ್ಷೇತ್ರದ ಮತದಾರರಾಗಲು ಆನ್‌ಲೈನ್‌ ಮೂಲಕ ಅರ್ಜಿ
*  ಮೇಯರ್‌ ಚುನಾವಣೆಯಲ್ಲಿಯೂ ಮತ ಹಾಕುವ ಅರ್ಹತೆ ಪಡೆಯುವ ಹುನ್ನಾರ
 

BJP Attempt to Illegally Get Power in Kalaburagi City Corporation grg
Author
Bengaluru, First Published Nov 14, 2021, 1:17 PM IST
  • Facebook
  • Twitter
  • Whatsapp

ಕಲಬುರಗಿ(ನ.14):  ಕಲಬುರಗಿ ಪಾಲಿಕೆ(Kalaburagi City Corporation) ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬಿಜೆಪಿ(BJP) ತನ್ನ ಪರಿಷತ್‌ ಸದಸ್ಯರಾದ ಲಕ್ಷಣ ಸವದಿ, ಸೈಬಣ್ಣ ತಳವಾರ, ಭಾರತಿ ಶೆಟ್ಟಿ, ಲೆಹರ್‌ ಸಿಂಗ್‌, ಪ್ರತಾಪ ಸಿಂಗೆ, ರಘುನಾಥ ಮಲ್ಕಾಪೂರೆ, ಮುನಿರಾಜು ಇವರ ಹೆಸರನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮತದಾರರ ಯಾದಿಯಲ್ಲಿ(Voters List) ಸೇರಿಸಲು ಹುನ್ನಾರ ಮಾಡುತ್ತಿದೆ. ಇವರಾರ‍ಯರೂ ಮೂಲತಃ ಕಲಬುರಗಿ ನಿವಾಸಿಗಳಲ್ಲದೇ ಹೋದರೂ ಮೇಯರ್‌ ಚುನಾವಣೆಯಲ್ಲಿ(Mayor Election) ಇವರೆಲ್ಲರೂ ಮತದಾರರಾಗುವ ಅರ್ಹತೆ ಹೊಂದುವಂತೆ ಮಾಡಿ ವಾಮಮಾರ್ಗದಿಂದ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿ ಇಂತಹ ಅಪ್ರಜಾತಾಂತ್ರಿಕ ಕ್ರಮಗಳಿಗೆ ಮುಂದಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌(Dr Sharanaprakash Patil) ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾನಾಡಿದ ಅವರು ಮೇಯರ್‌ ಚುನಾವಣೆ ದಿನಾಂಕ ಘೋಷಣೆಯಾದ ದಿನವೇ ಅಂದರೆ ನ.9ರಂದೇ ಇವರೆಲ್ಲರ ಹೆಸರಲ್ಲಿ ಸ್ಥಳೀಯವಾಗಿ ಬಾಡಿಗೆ ಒಪ್ಪಂದ ಪತ್ರಗಳನ್ನು ಸಿದ್ಧಪಡಿಸಲಾಗಿದೆ. ಬಿಜೆಪಿಯ ಕಾರ್ಯಕರ್ತರ ಮನೆಗಳಲ್ಲೇ ಇವರು ಬಾಡಿಗೆ ಇದ್ದಾರೆಂಬ ದಾಖಲೆ ಹುಟ್ಟುಹಾಕಲು ಬಿಜೆಪಿಯವರು ಮೋಸ ಮಾಡುತ್ತಿದ್ದಾರೆ. ದಾಖಲೆಗಳನ್ನೆಲ್ಲ ನಕಲಿ ಹುಟ್ಟು ಹಾಕಿದ್ದಾರೆಂದರು.

Vidhan Parishat Election| ಜಿಪಂ, ತಾಪಂ ಸದಸ್ಯರಿಲ್ಲದೆ ‘ಪರಿಷತ್‌ ಫೈಟ್‌’?

ತಮಗೆ ಈ ಸಂಗತಿ ಗೊತ್ತಾಗುತ್ತಿದ್ದಂತೆಯೇ ಚುನಾವಣಾಧಿಕಾರಿ ಕಲಬುರಗಿ ಉಪ ವಿಭಾಗೀಯ ಆಯುಕ್ತೆ ಮೋನಾ ಅವರನು ಸಂಪರ್ಕಿಸಿ ಮಾಹಿತಿ ಕೋರಿದ್ದೇವು. ಅವರಿಂದ ಮಾಹಿತಿ ವಿಳಂಬವಾಗಿದೆ. ನಾವು ಪತ್ತೆ ಮಾಡಿದಾಗ ಈ 7 ಪರಿಷತ್‌ ಸದಸ್ಯರು ಬಾಡಿಗೆ ಒಪ್ಪಂದ ಪತ್ರ ಸಿದ್ಧಪಡಿಸಿ ಕಲಬುರಗಿಯಲ್ಲಿ ವಾಸವಿದ್ದೇವೆಂದು ಸಾರುವ ದಾಖಲೆ ನೀಡಿ ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಕೋರಿದ್ದಾರೆಂದು ಮಾಹಿತಿ ನೀಡಿದರು.

ಮೇಯರ್‌ ಚುನಾವಣೆಯಲ್ಲಿ ಪರಿಷತ್‌ ಸದಸ್ಯರಾಗಿದ್ದವರು, ರಾಜ್ಯದ ವ್ಯಾಪ್ತಿ ಇರುವವರು ಕಲಬುರಗಿಯಲಿ ವಾಸವಿದ್ದರೆ ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಅಂತಹವರು ಮೆಯರ್‌ ಚುನಾವಣೆಯಲ್ಲಿ ಮತದಾನದ ಅರ್ಹತೆ ಹೊಂದುತ್ತಾರೆ. ಇದೇ ನಿಯಮದ ಆಧಾರದಲ್ಲಿ ತನ್ನೆಲ್ಲ 7 ಪರಿಷತ್‌ ಸದಸ್ಯರು ಕಲಬುರಗಿ ವಾಸಿಗಳೆಂದು ಬಿಂಬಿಸಲು ಬಿಜೆಪಿ ಖೊಟ್ಟಿ ದಾಖಲೆ(Fake Document) ಹುಟ್ಟು ಹಾಕುತ್ತಿದೆ ಎಂದು ಡಾ. ಶರಣ ಪಾಟೀಲ್‌ ದೂರಿದ್ದಾರೆ.

ಸಿಎಂ ಪ್ರಭಾವ, ಒತ್ತಡ:

ಕಲಬರಗಿ ಪಾಲಿಕೆ ಆಯುಕ್ತರಿಂದ ಹಿಡಿದು ಬೂತ್‌ ಮಟ್ಟದ ಅಧಿಕಾರಿಗಳ ವರೆಗೂ ಸಿಎಂ ಬೊಮ್ಮಾಯಿ(Basavaraj Bommai) ಹಾಗೂ ಅವರು ಸಂಪುಟದ ಸಚಿವರು ಅನೇಕರು ಒತ್ತಡ ಹೇರುತ್ತ ಇಂತಹ ಕೆಲಸಕ್ಕೆ ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ. ಇದು ಮೋಸದ ಕೆಲಸವೇ ಹೊರತು ನ್ಯಾಯಸಮ್ಮತವಲ್ಲ. ಕಲಬುರಗಿಯಲ್ಲಿರದ ವ್ಯಕ್ತಿಗಳನ್ನು ಕಲಬರಗಿಯವರೆಂದು ಬಿಂಬಿಸಲು ಹೊರಟಿರುವ ಬಿಜೆಪಿ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ ಎಂದು ದೂರಿದರು.

King Maker| ಜೆಡಿಎಸ್‌ ಕೈಯಲ್ಲಿ ಕಲಬುರಗಿ ಪಾಲಿಕೆ ಅಧಿಕಾರ ಚುಕ್ಕಾಣಿ..!

ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್‌(JDS) ಕಿಂಗ್‌ ಮೇಕರ್‌(King Maker), ಈ ಪಕ್ಷದ 3 ಸದಸ್ಯರ ಬೆಂಬಲ ಕಾಂಗ್ರೆಸ್ಸಿಗೆ(Congress). ಇದನ್ನರಿತೇ ಬಿಜೆಪಿ ಹೇಗಾದರೂ ಮಾಡಿ ಅದಿಕಾರ ಗದ್ದುಗೆ ಕೈ ವಶವಾಗದಂತೆ ಮಾಡುವ ಹುನ್ನಾರದಿಂದ ಇಂತಹ ಕೆಲಸಕ್ಕೆ ಮುಂದಾಗಿದೆ ಎಂದು ದೂರಿದ ಡಾ. ಪಾಟೀಲ್‌ ಅಧಿಕಾರಿಗಳು ಇಂತಹ ಕಾನೂನು ಬಾಹಿರ ಕೆಲಸ ಮಾಡಬಾರದು. ಹಾಗೇನಾದರೂ ಮಾಡಿದ್ದೇ ಆದಲ್ಲಿ ಅವರೆಲ್ಲರ ವಿರುದ್ಧ ಕ್ರಿಮಿನಲ್‌ ಕೇಸ್‌(Criminal Case) ದಾಖಲಿಸುತ್ತೇವೆ. ಇಂತಹ ಮೋಸದ, ವಂಚನೆಯ ಪ್ರಕರಣದ ತನಿಖೆಗೂ ಆಗ್ರಹಿಸುತ್ತೇವೆ ಎಂದರು.

ಮೇಯರ್‌ ಚುನಾವಣೆ ರಂಗು

55 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ 28 ಸ್ಥಾನ ಪಡೆದರೆ ಬಿಜೆಪಿ 23 ಸ್ಥಾನ ಪಡೆದಿದೆ. ಜೆಡಿಎಸ್‌ 3 ಸ್ಥಾನ ಪಡೆದರೆ ಓರ್ವ ಪಕ್ಷೇತರ ಸದ್ಯ ಗೆದ್ದಿದ್ದಾನೆ. ಪಾಲಿಕೆಯ 55 ಸದಸ್ಯರ ಜೊತೆಗೇ ಮೇಯರ್‌ ಚುನಾವಣೆಯಲ್ಲಿ ಮತದಾನಕ್ಕೆ ಒಟ್ಟು 63 ಸದಸ್ಯರು ಅರ್ಹರು. ಪರಿಷತ್‌, ಸಂಸತ್‌ ಸದಸ್ಯರು ಕಲಬುರಗಿ ವಾಸಿಗಳು, ಇಲ್ಲಿನ ಮತದಾರರಾಗಿದ್ದವರು ಮಾತ್ರ ಮತದಾನಕ್ಕೆ ಅರ್ಹರು, ಅಂತಹ 8 ಮಂದಿಗೆ ಅದಾಗಲೇ ಗುರುತಿಸಿ ಸುತ್ತೋಲೆ ಹೊರಡಿಸಲಾಗಿದೆ. ಮೇಯರ್‌ ಗದ್ದುಗೆ ಹತ್ತಲು ಬಿಜೆಪಿ ಹಗೂ ಕಾಂಗ್ರೆಸ್ಸಿಗೆ ಮ್ಯಾಜಿಕ್‌ ನಂಬರ್‌ 32 ತಲುಪಲು ಜೆಡಿಎಸ್‌ನ ಬೆಂಬಲ ಬೇಕೇಬೇಕು. ಜೆಡಿಎಸ್‌ ತನ್ನ ಬೆಂಬಲ ಯಾರಿಗೆಂಬುದನ್ನು ಅಧಿಕೃತವಾಗಿ ಹೇಳಿಲ್ಲ. ಹೀಗಾಗಿ ನ. 20 ರ ಮೇಯರ್‌ ಚುನಾವಣೆ ಇಲ್ಲಿ ದಿನಕ್ಕೊಂದು ರಂಗು ಪಡೆದುಕೊಳ್ಳುತ್ತ ಸಾಗಿದೆ.
 

Follow Us:
Download App:
  • android
  • ios