ಅಪರೂಪದ ಫೋಟೋ ಹಂಚಿಕೊಂಡು ಸುರೇಶ್ ಅಂಗಡಿಯವರನ್ನ ಸ್ಮರಿಸಿದ ಮೋದಿ
ಅಪರೂಪದ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸುರೇಶ್ ಅಂಗಡಿ ಅವರನ್ನ ಸ್ಮರಿಸಿದ್ದಾರೆ.
ನವದೆಹಲಿ, (ಸೆ.23): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿಯವರು ವಿಧಿವಶರಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.
"
ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಚಿವ ಸುರೇಶ್ ಅಂಗಡಿ ನಿಧನ
ಟ್ವೀಟ್ ಮೂಲಕ ಸಂತಾಪ ಸೂಚಿಸರುವ ಮೋದಿ, ಸುರೇಶ್ ಅಂಗಡಿಯವರು ಅತ್ಯಂತ ವಿಶಿಷ್ಟ ಕಾರ್ಯಕರ್ತರಾಗಿದ್ದು, ಕರ್ನಾಟಕದಲ್ಲಿ ಪಕ್ಷವನ್ನು ಬಲಗೊಳಿಸುವಲ್ಲಿ ಅಪಾರ ಶ್ರಮ ವಹಿಸಿದ್ದರು. ಶ್ರದ್ಧಾವಂತ ಸಂಸದ, ಪರಿಣಾಮಕಾರಿ ಸಚಿವರಾಗಿದ್ದ ಅವರು ಭಾರಿ ಮೆಚ್ಚುಗೆಗೂ ಪಾತ್ರರಾಗಿದ್ದರು. ಅವರ ಅಗಲಿಕೆ ಅತೀವ ದುಃಖ ಉಂಟು ಮಾಡಿದೆ. ಅವರ ಕುಟುಂಬ ಹಾಗೂ ಬಂಧು-ಬಳಗಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದಿದ್ದಾರೆ.
ಅಲ್ಲದೆ ಅಂಗಡಿ ಜತೆ ಪುಟ್ಟ ಹೂಕುಂಡ ಹಸ್ತಾಂತರಿಸಿ ಶುಭಾಶಯ ವ್ಯಕ್ತಪಡಿಸಿದ್ದ ಅಪರೂಪದ ಫೋಟೋವೊಂದನ್ನು ಹಂಚಿಕೊಂಡು ಅವರನ್ನು ವಿಶೇಷವಾಗಿ ಸ್ಮರಿಸಿಕೊಂಡಿದ್ದಾರೆ.
"
ರಾಜ್ಯ ರಾಜಕಾರಣಿಗಳನ್ನು ದಿಗ್ಬ್ರಮೆಗೊಳಿಸಿದ ಸುರೇಶ್ ಅಂಗಡಿ ಹಠಾತ್ ನಿಧನ
1955 ಜೂನ್ 1ರಂದು ಜನಿಸಿದ ಅಂಗಡಿಯವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿ ಸಂಸದರಾಗಿದ್ದರು. 2004, 2009, 2014 ಮತ್ತು 2019ರಲ್ಲಿ ಸತತ ನಾಲ್ಕು ಬಾರಿ ಬೆಳಗಾವಿಯಿಂದ ಆರಿಸಿ ಬಂದಿದ್ದರು. ಪ್ರಸ್ತುತ ಮೋದಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವರಾಗಿದ್ದರು.
"