ಬೆಂಗಳೂರು, (ಸೆ.23): ಸದಾ ಲವಲವಿಕೆಯಿಂದ ಇರುತ್ತಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (65)  ನಿಧನರಾಗಿದ್ದಾರೆ.

"

ಕಳೆದ ಒಂದು ವಾರದಿಮದ ಕೊರೋನಾ ಸೋಂಕಿನಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಅಂಗಡಿ, ಇಂದು (ಬುಧವಾರ) ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಚಿವ ಸುರೇಶ್ ಅಂಗಡಿ ನಿಧನ

ಇನ್ನೇನು ಅವರು ಗುಣಮುಖರಾಗಿ ಹೊರ ಬರುತ್ತಾರೆಂದು ಭಾವಿಸಲಾಗಿರುವುದರ ಮಧ್ಯೆ ನಡೆದಿರುವ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. 

ರಾಜ್ಯ ನಾಯರ ಸಂತಾಪ
ಸುರೇಶ್ ಅಂಗಡಿ ಅವರ ಸಾವಿಗೆ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂಗಳಾದ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಶಾಸಕರು ಮತ್ತು ಸಚಿವರುಗಳು ಸಂತಾಪ ಸೂಚಿಸಿದ್ದಾರೆ.