Asianet Suvarna News Asianet Suvarna News

ತ್ರಿಪುರಾ, ನಾಗಲ್ಯಾಂಡ್‌ನಲ್ಲಿ ಭರ್ಜರಿ ಗೆಲುವು, ಸಂಜೆ 7 ಗಂಟೆಗೆ ಬಿಜೆಪಿ ಕಚೇರಿಗೆ ಮೋದಿ ಭೇಟಿ!

ತ್ರಿಪುರಾ ಹಾಗೂ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಎರಡೂ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಸರ್ಕಾರ ರಚಿಸಲಿದೆ. ಆದರೆ ಮೆಘಾಲಯ ಕೈಜಾರಿದೆ. 3 ರಾಜ್ಯಗಳ ಚುನಾವಣೆಯಲ್ಲಿ 2 ಗೆದ್ದುಕೊಂಡಿರುವ ಬಿಜೆಪಿಯಲ್ಲಿ ಸಂಭ್ರಮ ಶುರುವಾಗಿದೆ. ಇದೀಗ ಪ್ರಧಾನಿ ಮೋದಿ ಸಂಜೆ 7 ಗಂಟೆಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿ ಭಾಷಣ ಮಾಡಲಿದ್ದಾರೆ.

PM Modi to address at bjp headquarters Delhi after landslide victory in Tripura Nagaland Assembly election ckm
Author
First Published Mar 2, 2023, 5:47 PM IST

ನವದೆಹಲಿ(ಮಾ.02) ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಬಲಗೊಳ್ಳುತ್ತಿದೆ. ಕಾಂಗ್ರೆಸ್ ಧೂಳೀಪಟವಾಗುತ್ತಿದೆ ಅನ್ನೋದುಕ್ಕೆ ಮೂರು ರಾಜ್ಯಗಳ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಎರಡು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ.ಮೆಘಾಲಯದಲ್ಲಿ ಬಿಜೆಪಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಎರಡು ರಾಜ್ಯದಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಬಿಜೆಪಿ ಇದೀಗ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಜಿ20 ಶೃಂಗಸಭೆಯಲ್ಲಿ ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಜೆ 7 ಗಂಟೆಗೆ ಬಿಜೆಪಿ ಪ್ರಧಾನ ಕಚೇರಿಕೆಗೆ ಭೇಟಿ ನೀಡಲಿದ್ದಾರೆ. ಇಷ್ಟೇ ಅಲ್ಲ ಪ್ರಧಾನ ಕಚೇರಿಯಿಂದ ಮೋದಿ ಭಾಷಣ ಮಾಡಲಿದ್ದಾರೆ. ನಾಗಾಲ್ಯಾಂಡ್, ತ್ರಿಪುರಾ ಹಾಗೂ ಮೆಘಾಲಯದ ಜನತೆಗೆ ಧನ್ಯವಾದ ಹೇಳಲಿದ್ದಾರೆ. ಇದರ ಜೊತೆಗೆ ಸಂಸದರನ್ನುದ್ದೇಶಿ ಭಾಷಣ ಮಾಡಲಿದ್ದಾರೆ. 

ಸಂಜೆ 7 ಗಂಟೆಗೆ ದೆಹಲಿ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಗೆಲುವಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಕಾರ್ಯಕರ್ತರು, ಸಂಸದರು,ಶಾಸಕರನ್ನುದ್ದೇಶಿ ಮೋದಿ ಮಾತನಾಡಲಿದ್ದಾರೆ. ಇನ್ನು ಕಚೇರಿಯ ಹೊರಭಾಗದಲ್ಲಿ ವೇದಿಕೆ ಹಾಕಲಾಗಿದೆ. ಈ ವೇದಿಕೆಯಿಂದ ಮೋದಿ ಭಾಷಣ ಮಾಡಲಿದ್ದಾರೆ. ತ್ರಿಪುರ ಹಾಗೂ ನಾಗಾಲ್ಯಾಂಡ್ ಗೆಲುವು ಹಾಗೂ ಸರ್ಕಾರ ರಚನೆ ಕುರಿತು ಮಾತನಾಡಿಲಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಶಹಬ್ಬಾಸ್ ಹೇಳಲಿದ್ದಾರೆ.

ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕಿ, ಇತಿಹಾಸ ರಚಿಸಿದ ಬಿಜೆಪಿ ಮೈತ್ರಿಕೂಟದ ಹೆಕಾನಿ!

ತ್ರಿಪುರಾದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 31. ಸದ್ಯ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದೆ. ಬಿಜೆಪಿ ಹಾಗೂ ಮೈತ್ರಿ ಪಕ್ಷಗಳು ಈಗಾಗಲೇ 33 ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ ನಾಗಾಲ್ಯಾಂಡ್ ಕಚೇರಿಯಲ್ಲಿ ಮೋದಿ ಮೋದಿ ಘೋಷಣೆ ಮೊಳಗುತ್ತಿದೆ. ಇದರ ಜೊತೆಗೆ ಜೈ ಶ್ರೀರಾಮ್ ಘೋಷಣೆಗಳು ಮೊಳಗತೊಡಗಿದೆ. ತ್ರಿಪುರಾದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. 2018ರಲ್ಲಿ ತ್ರಿಪುರಾದಲ್ಲಿ ಬಿಜೆಪಿ ಏಕಾಂಗಿಯಾಗಿ 36 ಸ್ಥಾನ ಗೆದ್ದಿತ್ತು. ಬಿಜೆಪಿ ಮೈತ್ರಿ ಪಕ್ಷವಾಗಿರುವ ಐಪಿಎಫ್ ಪಕ್ಷ 8 ಸ್ಥಾನ ಗೆದ್ದಿತ್ತು. 2018ರ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಂಡಿದೆ. 

ಇತ್ತ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡಿದೆ. ಬಿಜೆಪಿ ಹಾಗೂ ಎನ್‌ಡಿಪಿಪಿ ಮೈತ್ರಿ ಪಕ್ಷ ಒಟ್ಟು 37 ಸ್ಥಾನಗಳನ್ನು ಈಗಾಗಲೇ ಗೆದ್ದುಕೊಂಡಿದೆ. ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಈಶಾನ್ಯ ರಾಜ್ಯಗಳ ಪೈಕಿ ಇದೀಗ ಕೇಸರಿ ಪಕ್ಷ ದಶಕಗಳ ಕಾಲ ಕಾಂಗ್ರೆಸ್ ಹಾಗೂ ಎಡರಂಗದ ಸರ್ಕಾರವನ್ನು ಕಿತ್ತೊಗೆದಿದೆ. ಇಷ್ಟೇ ಅಲ್ಲ ಬಿಜೆಪಿ ಅಬ್ಬರಕ್ಕೆ ಕಾಂಗ್ರೆಸ್ ಹಾಗೂ ಎಡರಂಗ ಪಕ್ಷಗಳು ಧೂಳೀಪಟವಾಗಿದೆ. ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿಲ್ಲ. ಎನ್‌ಪಿಎಫ್ 2 ಸ್ಥಾನ ಗೆದ್ದರೆ, ಇತರರು 21 ಸ್ಥಾನ ಗೆದ್ದುಕೊಂಡಿದ್ದಾರೆ.

ತ್ರಿಪುರ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ, ಲೆಕ್ಕಕ್ಕಿಲ್ಲದಂತಾದ ಕಾಂಗ್ರೆಸ್‌!

ಮೆಘಾಲಯದಲ್ಲಿ ಬಿಜೆಪಿ 5ನೇ ಸ್ಥಾನ ಸಂಪಾದಿಸಿದೆ. ಎನ್‌ಪಿಪಿ ಪಕ್ಷ 25 ಸ್ಥಾನಗಳನ್ನು ಗೆದ್ದುಕೊಂಡಿದೆ. ಮೆಘಾಲಯದಲ್ಲಿ ಇದುವರೆಗೆ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಎನ್‌ಪಿಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಸಿಕ್ಕಿಲ್ಲ. ಇನ್ನು ಯುಡಿಪಿ 11 ಸ್ಥಾನಗಳನ್ನ ಗೆದ್ದುಕೊಂಡಿದೆ. ಇಲ್ಲಿ ಕಾಂಗ್ರೆಸ್ 5 ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್ ನಂತರದ ಸ್ಥಾನ ಬಿಜೆಪಿ ಪಡೆದುಕೊಂಡಿದೆ. ಇದುವರಿಗೆನ ಫಲಿತಾಂಶದ ಪ್ರಕಾರ ಬಿಜೆಪಿ 3 ಸ್ಥಾನ ಗೆದ್ದುಕೊಂಡಿದೆ.
 

Follow Us:
Download App:
  • android
  • ios