ತ್ರಿಪುರ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ, ಲೆಕ್ಕಕ್ಕಿಲ್ಲದಂತಾದ ಕಾಂಗ್ರೆಸ್‌!

ತ್ರಿಪುರ, ನಾಗಾಲ್ಯಾಂಡ್‌ ಮತ್ತು ಮೇಘಾಲಯದ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಈಶಾನ್ಯದ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಪ್ರದರ್ಶನ ನೀರಸವಾಗಿದ್ದರೆ, ಮೇಘಾಲಯದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ದಟ್ಟವಾಗಿದೆ.

BJP return to power in Tripura Nagaland Hung government in Meghalaya san

ನವದೆಹಲಿ (ಫೆ.2): ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಕೆಲವು ಸ್ಥಾನಗಳಲ್ಲಿ ಫಲಿತಾಂಶ ಬಂದಿದ್ದು, ಕೆಲವೆಡೆ ಪಕ್ಷಗಳು ಮುನ್ನಡೆ ಸಾಧಿಸಿವೆ. ಈ ಎರಡೂ ನೆಲೆಗಳಲ್ಲಿ ಇದುವರೆಗೆ ಬಂದಿರುವ ಚಿತ್ರದ ಪ್ರಕಾರ ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಬಿಜೆಪಿಗೆ ಖಚಿತ ಬಹುಮತ ಕಂಡುಬರುತ್ತಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಮೇಘಾಲಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ. ಮೂರೂ ರಾಜ್ಯಗಳಲ್ಲಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ನಾಗಾಲ್ಯಾಂಡ್‌ನಲ್ಲಿ 37 ಮತ್ತು ತ್ರಿಪುರಾದಲ್ಲಿ 34 ಸ್ಥಾನಗಳಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಮೇಘಾಲಯದಲ್ಲಿ ಎನ್‌ಪಿಪಿ 26 ಸ್ಥಾನಗಳಲ್ಲಿ ಮುಂದಿದೆ. ತ್ರಿಪುರ-ನಾಗಾಲ್ಯಾಂಡ್‌ನಲ್ಲಿ ಎಕ್ಸಿಟ್ ಪೋಲ್‌ಗಳು ಬಿಜೆಪಿ ಮೈತ್ರಿಕೂಟಕ್ಕೆ ಬಹುಮತದ ಮುನ್ಸೂಚನೆ ನೀಡಿದ್ದರೆ, ಮೇಘಾಲಯದಲ್ಲಿ ತ್ರಿಶಂಕು ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಈಗಿನ ಅಪ್‌ಡೇಟ್ಸ್..
- ಎಲ್ಲಾ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಸ್ಥಾನಗಳನ್ನು ಗೆದ್ದಿದ್ದಾರೆ. ತ್ರಿಪುರಾದಲ್ಲಿ, ಮಣಿಕಾ ಸಹಾ ಪಶ್ಚಿಮ ತ್ರಿಪುರಾದ ನಗರ ಬರ್ಡೋವಲಿಯಿಂದ, ಮೇಘಾಲಯದ ಪಶ್ಚಿಮ ಗರೋ ಹಿಲ್ಸ್‌ನ ದಕ್ಷಿಣ ತುರಾ (ST) ಸ್ಥಾನದಿಂದ ಕಾನ್ರಾಡ್ ಸಂಗ್ಮಾ ಮತ್ತು ನಾಗಾಲ್ಯಾಂಡ್‌ನ ಕೊಹಿಮಾದ ಉತ್ತರ ಅಂಗಮಿ II (ST) ಸ್ಥಾನದಿಂದ ನೇಫಿಯು ರಿಯೊದಿಂದ ಗೆದ್ದಿದ್ದಾರೆ.

- ರಾತ್ರಿ 8 ಗಂಟೆಗೆ ಪ್ರಧಾನಿ ಬಿಜೆಪಿ ಕೇಂದ್ರ ಕಚೇರಿಗೆ ತೆರಳಲಿದ್ದಾರೆ. 3 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಭಾಷಣ ಮಾಡಲಿದ್ದಾರೆ.

- ಹೆಕಾನಿ ಜಖಾಲು ಅವರು ದಿಮಾಪುರ್ III ಸ್ಥಾನವನ್ನು ಗೆಲ್ಲುವ ಮೂಲಕ ನಾಗಾಲ್ಯಾಂಡ್‌ನ ಮೊದಲ ಮಹಿಳಾ ಶಾಸಕರಾಗಿದ್ದಾರೆ. 1963ರಲ್ಲಿ ರಾಜ್ಯ ಸ್ಥಾನಮಾನವನ್ನು ಪಡೆದಿದ್ದ ನಾಗಾಲ್ಯಾಂಡ್‌ನಲ್ಲಿ ಇಲ್ಲಿಯವರೆಗೆ ಯಾವುದೇ ಮಹಿಳೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರಲಿಲ್ಲ.

ತ್ರಿಪುರದಲ್ಲಿ ಸದ್ಯದ ಟ್ರೆಂಡ್‌: ತ್ರಿಪುರದ 60 ವಿಧಾನಸಭಾ ಸ್ಥಾನಗಳ ಪೈಕಿ, ಬಿಜೆಪಿ ಮೈತ್ರಿಕೂಟ 34 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಎಡರಂಗ ಹಾಗೂ ಕಾಂಗ್ರೆಸ್‌ 14 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು ತ್ರಿಪುರ ಮೋಥ ಪಾರ್ಟಿ (ಟಿಎಂಪಿ) 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತ್ರಿಪುರದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಸಾಧಿಸಲು 31 ಕ್ಷೇತ್ರ ಗೆಲ್ಲಬೇಕಿದೆ.

ತ್ರಿಪುರದಲ್ಲಿ ಬಿಜೆಪಿ ಜೋರು, ಮೇಘಾಲಯದಲ್ಲಿ ಎನ್‌ಪಿಪಿಗೆ ಹಿನ್ನಡೆ!

ಮೇಘಾಲಯ ಎನ್‌ಪಿಪಿ ದೊಡ್ಡ ಪಾರ್ಟಿ: ಇನ್ನು ಮೇಘಾಲಯ ವಿಧಾನಸಭೆಯಲ್ಲಿ ನ್ಯಾಷನಲಿಸ್ಟ್‌ ಪೀಪಲ್ಸ್ ಪಾರ್ಟಿ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿದೊಡ್ಡ ಪಕ್ಷ ಎನಿಸಿದೆ. ಇನ್ನೊಂದೆಡೆ ಇತರರು 25 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್‌ 5 ಸ್ಥಾನಗಳಲ್ಲಿ ಹಾಗೂ  ಬಿಜೆಪಿ ಮೂರು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

 

ಇಂದು ಈಶಾನ್ಯದ 3 ರಾಜ್ಯಗಳ ಚುನಾವಣಾ ಫಲಿತಾಂಶ: ತ್ರಿಪುರ, ಮೇಘಾಲಯ, ನಾಗಾಲ್ಯಾಂಡಲ್ಲಿ ಮತ ಎಣಿಕೆ

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ: ಇನ್ನು ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ 36 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಈಗಾಗಲೇ 28 ಕ್ಷೇತ್ರಗಳಲ್ಲಿ ಗೆಲುವು ಕಂಡಿರುವ ಮೈತ್ರಿಕೂಟ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎನ್‌ಪಿಎಫ್‌ ಎರಡು ಕ್ಷೇತ್ರಗಳಲ್ಲಿ ಹಾಗೂ ಇತರರು 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

Latest Videos
Follow Us:
Download App:
  • android
  • ios