Asianet Suvarna News Asianet Suvarna News

ಮಾನಸಿಕ ಅಸ್ವಸ್ಥ ಮುಸ್ಲಿಂ ಯುವತಿಯನ್ನು ಸ್ವೀಕರಿಸಲು ಒಪ್ಪದ ಕುಟುಂಬ: ಸೂಕ್ತ ಕ್ರಮಕ್ಕೆ ವಿಶು ಶೆಟ್ಟಿ ಆಗ್ರಹ

ತಿಂಗಳ ಹಿಂದೆ ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಅತಿರೇಕವಾಗಿ ವರ್ತಿಸುತ್ತಿದ್ದ ಕೇರಳ ಮೂಲದ ಮುಸ್ಲಿಂ ಯುವತಿಯನ್ನು ಮಣಿಪಾಲ ಪೊಲೀಸರ ಮನವಿ ಮೇರೆಗೆ ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

A family that refuses to accept a mentally ill at Udupi gvd
Author
First Published Aug 7, 2023, 8:24 PM IST

ಉಡುಪಿ (ಆ.07): ತಿಂಗಳ ಹಿಂದೆ ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಅತಿರೇಕವಾಗಿ ವರ್ತಿಸುತ್ತಿದ್ದ ಕೇರಳ ಮೂಲದ ಮುಸ್ಲಿಂ ಯುವತಿಯನ್ನು ಮಣಿಪಾಲ ಪೊಲೀಸರ ಮನವಿ ಮೇರೆಗೆ ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಯುವತಿಯ ಸಂಬಂಧಿಕರು ಪತ್ತೆಯಾಗಿದ್ದರೂ, ಅವರು ಆಕೆಯನ್ನು ಸ್ವೀಕರಿಸಲು ಒಪ್ಪದಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಯುವತಿಯ ಸಂಬಂಧಿಕರ ಮನವೊಲಿಸಬೇಕು ಇಲ್ಲವೇ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

ಯುವತಿ ಆಯೇಷಾ ಬಾನು (30) ತಂದೆ ಹೆಸರು ಅಬ್ದುಲ್ ಕರೀಂ  ಕೇರಳದ ತ್ರಿಶುರ್ ನವರಾಗಿದ್ದು,ಪ್ರಸ್ತುತ  ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಆಕೆಯ ತಾಯಿ ಹಾಗೂ ಸಹೋದರನ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಯುವತಿಯನ್ನು ಸ್ವೀಕರಿಸಲು ಒಪ್ಪುತ್ತಿಲ್ಲ. ಯುವತಿಯನ್ನು ಆಸ್ಪತ್ರೆಯಲ್ಲಿಯೇ ಬಿಡಲು ಸಾಧ್ಯವೇ ? ಅದ್ದರಿಂದ ಯುವತಿಯ ಹಿತದೃಷ್ಟಿಯಿಂದ ಸಂಬಂಧ ಪಟ್ಟ ಇಲಾಖೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

ಲೋಕಸಭೆ ಟಿಕೆಟ್‌ಗೆ ನಾನು ಪ್ರಬಲ ಆಕಾಂಕ್ಷಿ: ಪ್ರಮೋದ್‌ ಮಧ್ವರಾಜ್‌

ಯುವತಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ಆಸ್ಪತ್ರೆಯ ವೆಚ್ಚಕ್ಕೆ ಆಕೆಯನ್ನು ದಾಖಲಿಸಿದ ನಾನೇ ಜವಾಬ್ದಾರಿ . ಇದರ ನಡುವೆ ಆಕೆಯ ಕುಟುಂಬಸ್ಥರ ಅಮಾನವೀಯ ನಡೆ ತುಂಬಾ ನೋವನ್ನುಂಟು ಮಾಡಿದೆ. ಯುವತಿಗೆ ಮುಂದಿನ ಅಶ್ರಯ ನೀಡುವುದು ದೊಡ್ಡ ಸವಾಲಾಗಿದ್ದು, ಸಂಬಂದಪಟ್ಟ ಇಲಾಖೆಗಳು ಸೂಕ್ತ ಕ್ರಮ ಜರುಗಿಸಿ ಯುವತಿಗೆ ನ್ಯಾಯ ಒದಗಿಸುವಂತೆ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

Follow Us:
Download App:
  • android
  • ios