ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಕೇಂದ್ರದಿಂದ ವೀಕ್ಷಕರು ಬಂದಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಮತ್ತು ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಸಮೀಕರಣ ನಡೆದಿದೆ. ಸಮೀಕರಣವನ್ನು ಗಮನದಲ್ಲಿಟ್ಟುಕೊಂಡ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರ ಆಯ್ಕೆ ವಿಳಂಬ ಆಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ (ಜು.8) : ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಕೇಂದ್ರದಿಂದ ವೀಕ್ಷಕರು ಬಂದಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಮತ್ತು ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಸಮೀಕರಣ ನಡೆದಿದೆ. ಸಮೀಕರಣವನ್ನು ಗಮನದಲ್ಲಿಟ್ಟುಕೊಂಡ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರ ಆಯ್ಕೆ ವಿಳಂಬ ಆಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Add Asianetnews Kannada as a Preferred SourcegooglePreferred

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಸ್ಥಾನದ ಅವಧಿ ಮುಗಿದಿದೆ. ಸ್ಥಾನಗಳ ಆಯ್ಕೆಗೆ ವಿಳಂಬವಾಗಲು ಇನ್ಯಾವ ಕಾರಣಗಳು ಗೋಚರಿಸುತ್ತಿಲ್ಲ. ವಿಧಾನಸಭೆಯಲ್ಲಿ ಇರುವ ಎಲ್ಲ ಶಾಸಕರಿಗೂ ಶಕ್ತಿ ಇದೆ. ಇವರು ಸೂಚಿಸುವವರು ವಿಪಕ್ಷ ನಾಯಕನಾಗಿ ಆಯ್ಕೆಯಾಗುತ್ತಾರೆ ಎಂದರು.

ಕೇಂದ್ರ ಸರ್ಕಾರದಿಂದ 25 ಟವರ್‌ ಮಂಜೂರು: ಸಂಸದ ಬಿವೈ ರಾಘವೇಂದ್ರ

ಪಕ್ಷ ತಾಯಿ ಇದ್ದಂತೆ. ಪಕ್ಷಕ್ಕೆ ನೋವಾದಾಗ ನೋಟಿಸ್‌ ನೀಡಿದ್ದಾರೆ. ಇದು ಮಾಜಿ ಸಚಿವ ರೇಣುಕಾಚಾರ್ಯರಿಗೆ ಮಾತ್ರ ಅಲ್ಲ ತುಂಬಾ ಜನರಿಗೆ ನೋಟಿಸ್‌ ನೀಡಲಾಗಿದೆ. ರೇಣುಕಾಚಾರ್ಯ ಅವರು ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಆದರೂ ಸೋತಿದ್ದಾರೆ. ಸೋತ ನೋವಲ್ಲಿ ಈ ರೀತಿ ಮಾತನಾಡಿದ್ದಾರೆ. ನೋಟಿಸ್‌ಗೆ ಉತ್ತರ ನೀಡುವುದು ಸ್ವಲ್ಪ ನಿಧಾನ ಆಗಿರಬಹುದು ಎಂದರು.

ಗ್ಯಾರಂಟಿಯಿಂದಾಗಿ ಕಾಂಗ್ರೆಸ್‌ಗೆ ತಾತ್ಕಾಲಿಕ ಗೆಲುವಾಗಿದೆ. ರಾಜ್ಯದ ಜನರು ಕಾಂಗ್ರೆಸ್‌ ಗ್ಯಾರಂಟಿಗಳನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಕಾಂಗ್ರೆಸ್‌ಗೆ ಗ್ಯಾರಂಟಿಯ ಲಾಟರಿ ಹೊಡೆದಿದೆ. ಮುಂಬರುವ ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ಹೇಳಿದರು.

Shikaripur constituency: ವಿಜಯೇಂದ್ರರನ್ನು ಸೋಲಿಸಲು ವಾಮಾಚಾರ: ಬಿವೈ ರಾಘವೇಂದ್ರ

ವಿಐಎಸ್‌ಎಲ್‌ ಕಾರ್ಖಾನೆ ಯಾವುದೇ ಕಾರಣಕ್ಕೂ ಬಂದ್‌ ಆಗಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮ್‌ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇವೆ. ಕಾರ್ಖಾನೆ ಅಗತ್ಯ ಕಚ್ಚಾ ವಸ್ತುಗಳ ಪೂರೈಕೆ ಮಾಡುವಲ್ಲಿ ಸ್ವಲ ವಿಳಂಬವಾಗಿದೆ ಅಷ್ಟೇ ಎಂದರು.