ಬೆಳಗಾವಿ ಅಧಿವೇಶನ ವಿಫಲಕ್ಕೆ ವಿಪಕ್ಷ ಬಿಜೆಪಿ ಕಾರಣ: ಆಯನೂರು ಮಂಜುನಾಥ್‌

ಬೆಳಗಾವಿಯಲ್ಲಿ ನಡೆಯುತ್ತಿರುವ ಅದಿವೇಶನವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಕುಡಿಯುವ ನೀರಿನ ಹಾಹಾಕಾರ. ಉತ್ತರ ಕನ್ನಡ ಹತ್ತಾರು ಜಲ್ವಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. 

Opposition BJP is responsible for failure of Belagavi session Says Ayanuru Manjunath gvd

ಶಿವಮೊಗ್ಗ (ಡಿ.14): ಬೆಳಗಾವಿಯಲ್ಲಿ ನಡೆಯುತ್ತಿರುವ ಅದಿವೇಶನವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಕುಡಿಯುವ ನೀರಿನ ಹಾಹಾಕಾರ. ಉತ್ತರ ಕನ್ನಡ ಹತ್ತಾರು ಜಲ್ವಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಕ್ಷ ವಿಫಲವಾಗಿದೆ, ಬೆಳಗಾವಿ ಅಧಿವೇಶನವನ್ನು ವಿಫಲಗೊಳಿಸಿದ ಅಪಕೀರ್ತಿ ಬಿಜೆಪಿ ಸಲ್ಲುತ್ತದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಟೀಕಿಸಿದರು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದವು. ಜನ ನಿರೀಕ್ಷೆ ಇಟ್ಟುಕೊಂಡಿದ್ದರು. 

ಒಂದು ವಿರೋಧ ಪಕ್ಷವಾಗಿ ಸದನದಲ್ಲಿ ಜನರ ಸಮಸ್ಯೆಗಳನ್ನು ಚರ್ಚಿಸುವುದನ್ನು ಬಿಟ್ಟು, ಬೇಡವಾದ ವಿಷಯಕ್ಕೆ ಮಹತ್ವ ಕೊಟ್ಟು ಸದನದ ಸಮಯವನ್ನು ವ್ಯರ್ಥ ಮಾಡಿದರು. ಸದನದಲ್ಲಿ ಬಿಜೆಪಿ ಆಂತರಿಕ ಬೇಗುದಿ ಎದ್ದು ಕಂಡಿದೆ. ಬಿಜೆಪಿಯ ನಾಯಕರುಗಳ ಮಧ್ಯೆಯೇ ಸಾಮರಸ್ಯ ಇರಲಿಲ್ಲ. ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ಶಾಸಕರು ಬೇರೆ ಬೇರೆ ರೀತಿ ಮಾತನಾಡಿದರು ಎಂದು ಆರೋಪಿಸಿದರು. ಸರ್ವಸಮ್ಮತ ಇಲ್ಲದೇ ಭಿನ್ನಮತ ಸ್ಪೋಟಗೊಂಡಿದೆ. ವಿರೋಧ ಪಕ್ಷದ ನಾಯಕನ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಯತ್ನಾಳ್ ಬಹಿರಂಗ ಅಸಮಾಧಾನ ತೊಂಡಿಕೊಂಡಿದ್ದಾರೆ. ಈ ಹಿಂದೆ ಹಣ ನೀಡಿದರೆ ಮುಖ್ಯಮಂತ್ರಿ ಆಗಬಹುದು ಅಂತ ಯತ್ನಾಳ್ ಆರೋಪಿಸಿದ್ದರು. ವಿರೋಧ ಪಕ್ಷವು ಬಿಡ್ಡಿಂಗ್ ಆಯ್ತಾ ಅಂತ ಅನುಮಾನ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಯತ್ನಾಳ್‌ ಬೀದಿಯಲ್ಲಿ ಮಾತಾಡಿ ಉತ್ತರ ಕುಮಾರ ಆಗೋದು ಬೇಡ: ಈಶ್ವರಪ್ಪ

ಬಿಜೆಪಿ ಈಗ ಒಡೆದ ಮನೆಯಂತಾಗಿದೆ. ರಾಜ್ಯಾಧ್ಯಕ್ಷರು ದೆಹಲಿಗೆ ಹೋದ ಪುಟ್ಟಾ ಬಂದ ಪುಟ್ಟ ಅಂತಾಗಿದೆ. ಟೀಕೆ ಟಿಪ್ಪಣಿಗಳಲ್ಲಿ‌ ಮಾತ್ರ ವಿರೋಧ ಮಾಡುತ್ತಿದೆ. ಸದನವನ್ನು ವಿರೋಧ ಪಕ್ಷ ವಿಫಲಗೊಳಿಸಿದೆ. ಇದರ ಸಂಪೂರ್ಣ ಹೊಣೆಯನ್ನು ಬಿಜೆಪಿ ನಾಯಕರು ತಗೋಬೇಕು. ಕರ್ನಾಟಕದ ಸಂಕಷ್ಟಗಳಿಗೆ ಧ್ವನಿಯಾಗದ ವಿರೋಧ ಪಕ್ಷದ ನಾಯಕರು ರಾಜ್ಯದ ಜನರ ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‌ ಸರ್ಕಾರದ ಬಗ್ಗೆ ರಸ್ತೆ ಬದಿಯಲ್ಲಿ ಗಿಣಿ ಇಟ್ಟುಕೊಂಡು ಭವಿಷ್ಯ ಹೇಳುವಂತೆ ಯತ್ನಾಳ್, ಕುಮಾರಸ್ವಾಮಿ, ಈಶ್ವರಪ್ಪ ಭವಿಷ್ಯ ಹೇಳುತ್ತಿದ್ದಾರೆ. ಆದರೆ, ಅವರ ಭವಿಷ್ಯವೇ ಅವರಿಗೆ ಗೊತ್ತಿಲ್ಲ. ಇವರೆಲ್ಲ ಹೋರಿ ಹಿಂದೆ ಓಡುವ ನರಿಗಳ ಥರ ಕಾಣುತ್ತಿದ್ದಾರೆ ಹೊರೆತು. ಬೇಟೆಯಾಡುವ ಹುಲಿಗಳ ತರ ಕಾಣುತ್ತಿಲ್ಲ. ಈಶ್ವರಪ್ಪ ರಾಜಕೀಯ ಮುತ್ಸದಿ ಅಲ್ಲ. ಅವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದು ಖಾರಿವಾಗಿ ಪ್ರತಿಕ್ರಿಯಿಸಿದರು.

ಶಾಸಕ ಯತ್ನಾಳ್‌ಗೆ ನೋಟಿಸ್‌ ನೀಡಬೇಕು: ರೇಣುಕಾಚಾರ್ಯ

ರಾಘವೇಂದ್ರಗೆ ಓಲೈಸುವ ಮಠಾಧೀಶರು: ಸಂಸದ ರಾಘವೇಂದ್ರ ಅವರಿಗೆ ಮಠಾಧೀಶರು ಸನ್ಮಾನ ಕಾರ್ಯಕ್ರಮಕ್ಕೆ ಸಮಾಜದ ಯಾವ ಮುಖಂಡರಿಗೂ ಆಹ್ವಾನ ನೀಡಿಲ್ಲ ಎಂದು ಆಯನೂರು ಮಂಜುನಾಥ್‌ ಆರೋಪಿಸಿದರು. ಬಿಜೆಪಿಯ ಪ್ರಾಯೋಜಿತ ಮಠಾಧೀಶರಾಗಿ ಸನ್ಮಾನ ಮಾಡಿದ್ದಾರೋ‌ ಗೊತ್ತಿಲ್ಲ. ರಾಘವೇಂದ್ರ ಅವರನ್ನು ಓಲೈಸುವ ಕೆಲಸ ಮಠಾಧೀಶರು ಮಾಡುತ್ತಿದ್ದಾರೆ. ಸಾರ್ಥಕ ಸನ್ಮಾನ ಮಾಡುವುದಾದರೆ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರಿಗೆ ಸನ್ಮಾನ ಮಾಡಲಿ. ಅವರು ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಧಿಕಾರತನ‌, ಶ್ರೀಮಂತಿಗೆ ಬೆಂಬಲಿಸುವ ಕಾರ್ಯ ಸ್ವಾಮೀಜಿಗಳಿಗೆ ತರವಲ್ಲ. ಸ್ವಾಮೀಜಿಗಳು ಸಹ ಬಿಜೆಪಿಯ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳು ಪಕ್ಷಕ್ಕೆ ಸೀಮಿತರಾಗಬಾರದು. ಬಿಜೆಪಿಗೆ ಮೊದಲು ಸಂಸದ ಸ್ಥಾನ ತಂದುಕೊಟ್ಟಿದ್ದು ನಾನು, ನಾನು ನಾಲ್ಕು ಸದನ ಹೋಗಿ ಬಂದಿದ್ದೇನೆ ನಾನು ನೆನಪಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಮಗ ಅಂತ ರಾಘವೇಂದ್ರ ಸಾಧಕನಾಗಿ ಕಂಡರಾ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios