ಪ್ರತಿಯೊಬ್ಬ ಭಾರತೀಯರು ಸಹ ಬೆಂಬಲವಾಗಿ ನಿಲ್ಲಬೇಕೆಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೇವಸ್ಥಾನದಲ್ಲಿ ಪೂಜೆ ಮಾಡಿ ತಿಳಿಸಿದರು.  

ಬೆಂಗಳೂರು (ಮೇ.07): ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಮತ್ತು pok ಯ ನಾಲ್ಕು ಕಡೆ ಕಾರ್ಯಾಚರಣೆ ಆರಂಭವಾಗಿದೆ. ಇದು ಹೆಮ್ಮೆ ಪಡುವ ಕೆಲಸ. ಪ್ರತಿಯೊಬ್ಬ ಭಾರತೀಯರು ಸಹ ಬೆಂಬಲವಾಗಿ ನಿಲ್ಲಬೇಕೆಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೇವಸ್ಥಾನದಲ್ಲಿ ಪೂಜೆ ಮಾಡಿ ತಿಳಿಸಿದರು. 

ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮನುಕಲುದ ಅತ್ಯಂತ ಪ್ರಖರ ಅಸ್ತ್ರ ಶಾಂತಿ ಎಂದು ಟ್ವೀಟ್ ಮಾಡಿದೆ. ರಾಹುಲ್ ಗಾಂಧಿ, ಖರ್ಗೆ ನಿಮ್ಮ ನಿಲವು ತಿಳಿಸಿ. ಕಾಂಗ್ರೆಸ್ ಉಗ್ರರ ಪರವಾಗಿ ಇದ್ದಾರಾ. ಪಾಕಿಸ್ತಾನದ ಪರ ಇದ್ದಾರಾ. ಇದನ್ನು ತಿಳಿಸಿ, ನಿಮ್ಮ ನಿಲುವು ಹೇಳಿ. ಅಲ್ಲದೇ ಭಾರತೀಯರ ಕ್ಷಮೆ ಕೇಳಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಭಾರತ ಪಾಕಿಸ್ತಾನ ನಡುವೆ ಯುದ್ಧ ಆರಂಭ ಆಗಿದೆ. ನಾವೆಲ್ಲಾ ಒಂದಾಗಿ ಇರಬೇಕು. ದೇಶದ ಜೊತೆ ನಿಲ್ಲಬೇಕು. ಜನಾಕ್ರೋಶದ ಇವತ್ತಿನ ಕೋಲಾರ ಯಾತ್ರೆ ಇಂದು ಮಾಡುತ್ತೇವೆ. ನಾಳೆಯಿಂದ ತುಮಕೂರಿನಲ್ಲಿ ನಡೆಯಬೇಕಿರುವ ಯಾತ್ರೆ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದೇವೆ ಎಂದು ಹೇಳಿದರು.

'ಆಪರೇಷನ್ ಸಿಂಧೂರ್': ಸಿಎಂ ಸಿದ್ದು ಸೇರಿದಂತೆ ರಾಜಕೀಯ ನಾಯಕರಿಂದ ಮೆಚ್ಚುಗೆ!

ಎನ್‌ಐಎ ತನಿಖೆಗೆ ವಿಜಯೇಂದ್ರ ಆಗ್ರಹ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಿಂದ ಕುಟುಂಬದ ಆಧಾರ ಸ್ತಂಭವೇ ಕಳಚಿ ಬಿದ್ದಿದೆ. ಹಾಗಾಗಿ ಕುಟುಂಬದ ಅಧಾರಸ್ತಂಭವೇ ಇಲ್ಲದೇ ಇರುವ ಸಮಯದಲ್ಲಿ ಬಿಜೆಪಿ ವತಿಯಿಂದ ರು. 25 ಲಕ್ಷ ಪರಿಹಾರವಾಗಿ ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಣೆ ಮಾಡಿದ್ದಾರೆ. ಘಟನೆಯ ಗಂಭೀರತೆ ಮತ್ತು ಕುಟುಂಬದ ಪರಿಸ್ಥಿತಿ ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರ ಕೂಡಾ ಪರಿಹಾರ ಮಂಜೂರು ಮಾಡಬೇಕು. ಕೇಂದ್ರದ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಕಾಶ್ಮೀರ ಪಹಲ್ಗಾಮ್ ದುರ್ಘಟನೆ ನಡೆದು ಮರೆಯಾಗುವ ಮೊದಲೇ ಮಾನವಕುಲವನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಅಮಾನವೀಯ ಸ್ಥಿತಿಯಲ್ಲಿ ಹತ್ಯೆ ಮಾಡಿರುವುದು ಖಂಡನಾರ್ಹ, ಈ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ ಎಂದು ತಿಳಿಸಿದರು. ಘಟನೆಯಲ್ಲಿ ಪೋಲೀಸ್ ವೈಪಲ್ಯ ವಿಚಾರ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಜೀವಕ್ಕೆ ಬೆದರಿಕೆ ಇರುವ ವಿಚಾರ ಪೋಲೀಸ್ ಇಲಾಖೆಗೆ ಸ್ಪಷ್ಟವಾಗಿ ಗೊತ್ತಿದ್ದರೂ ಕೂಡ ರಕ್ಷಣೆ ನೀಡದೆ ಆತನ ಕೊಲೆಯಾಗಿದೆ ಎಂದು ಆರೋಪ ಮಾಡಿದರು.

ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ದೇವೇಗೌಡ ಬೆಂಬಲ

ಗೃಹ ಇಲಾಖೆಯ ವೈಪಲ್ಯ ಮತ್ತು ಕಾಂಗ್ರೇಸ್ ಸರ್ಕಾರದ ನೀತಿ ಕೂಡ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಂಗ್ರೆಸ್‌ ಸರ್ಕಾರದ ಮೇಲೆ ಹಿಂದೂಗಳಿಗೆ ರಕ್ಷಣೆ ಇಲ್ಲದಿದ್ದು, ವಿಶ್ವಾಸವೇ ಇಲ್ಲದಂತಾಗಿದೆ ಎಂದರು. ರಾಜ್ಯದ ಜನತೆ ಗೃಹ ಇಲಾಖೆಯ ಮೇಲೆ ವಿಶ್ವಾಸ ಕಳೆದುಕೊಂಡಿದೆ. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಕೊಲೆಗಳು ನಡೆದಾಗ ಹಿಂದು ಪರ ನಿಲ್ಲುವುದಿಲ್ಲ. ಇಂತಹ ಘಟನೆಗಳು ಪದೇ ಪದೇ ಮರುಕಳಿಸದಂತೆ ಕ್ರಮಗೊಳ್ಳಬೇಕು ಎಂದು ಆಗ್ರಹಿಸಿದರು.