ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್.ಯಡಿಯೂರಪ್ಪ
ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ, ಇಡೀ ರಾಜ್ಯ ತಿರುಗಾಡಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.
ಸಂಡೂರು (ಫೆ.24): ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಆದರೆ, ಇಡೀ ರಾಜ್ಯ ತಿರುಗಾಡಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು. ನಗರದ ಎಸ್‌ಆರ್‌ಎಸ್ ಶಾಲಾ ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸೂರ್ಯ, ಚಂದ್ರರಷ್ಟೇ ಸತ್ಯ, ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ 140 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನಾನು ಮತ್ತೊಮ್ಮೆ ಸಂಡೂರಿಗೆ ಬರುವೆ ಎಂದರು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಹತ್ತು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.
ಬಿಜೆಪಿ ಅಧಿಕಾರಕ್ಕೆ ಬಂದರೆ, ಬಳ್ಳಾರಿ ಜಿಲ್ಲೆಯ ಚಿತ್ರಣ ಬದಲಾಗಿದೆ. ಈ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಬಿ. ಶ್ರೀರಾಮುಲು, ಆನಂದ ಸಿಂಗ್, ಶಶಿಕಲಾ ಜೊಲ್ಲೆ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ಸೋಮಶೇಖರ ರೆಡ್ಡಿ, ವೈ.ಎಂ. ಸತೀಶ್, ಸಂಸದ ದೇವೇಂದ್ರಪ್ಪ, ಮುಖಂಡ ಕಾರ್ತಿಕೆಯ ಘೋರ್ಪಡೆ, ಜೆ. ಶಾಂತಾ, ಸುರೇಶಬಾಬು, ಸಿದ್ದೇಶ ಯಾದವ್, ನಂದೀಶ್, ಸಿದ್ದೇಶ, ಬಿಜೆಪಿ ಜಿಲ್ಲಾಧ್ಯಕ್ಷರಾದ ಮುರಾರಿಗೌಡ, ಚನ್ನಬಸವನಗೌಡ ಪಾಟೀಲ ಮತ್ತಿತರರಿದ್ದರು.
ಜನಾರ್ದನ ರೆಡ್ಡಿ ಪಕ್ಷವನ್ನು ನಾನು ನೋಡಿಕೊಳ್ಳುತ್ತೇನೆ: ಕೇಂದ್ರ ಸಚಿವ ಅಮಿತ್ ಶಾ
ಬಾದಾಮಿ ಬಿಡುವುದು ನಂಬಿಕೆ ದ್ರೋಹ: ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮನ್ನು ಗೆಲ್ಲಿಸಿರುವ ಬಾದಾಮಿ ಕ್ಷೇತ್ರಕ್ಕೆ ಮತ್ತೆ ಹೋಗುವುದಿಲ್ಲ ಎನ್ನುವುದು ಸರಿಯಲ್ಲ. ಇದು ಕಷ್ಟಕಾಲದಲ್ಲಿ ಗೆಲ್ಲಿಸಿದ ಜನರಿಗೆ ಮಾಡುವ ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಅವರಿಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಕಿವಿ ಮಾತು ಹೇಳಿದರು.
ಬಾದಾಮಿಯಲ್ಲಿ ನಿಮ್ಮನ್ನು ಗೆಲ್ಲಿಸಿದ ಜನರ ಪರವಾಗಿ ಐದು ವರ್ಷ ಕೆಲಸ ಮಾಡಿದ್ದೀರಿ. ಇದೀಗ ಕ್ಷೇತ್ರ ತೊರೆಯುವ ಮಾತನ್ನಾಡುತ್ತಿದ್ದೀರಿ. ಇದು ಕ್ಷೇತ್ರದಲ್ಲಿ ನಿಮಗೆ ಗೆಲ್ಲುವ ವಿಶ್ವಾಸವಿಲ್ಲ ಎಂಬುದನ್ನು ತೋರಿಸುತ್ತದೆ. ತವರು ಜಿಲ್ಲೆಯಲ್ಲಿ ಸೋಲುತ್ತಿರುವಾಗ ನಿಮ್ಮನ್ನು ಗೆಲ್ಲಿಸಿದ ಆ ಭಾಗದ ಜನರಿಗೆ ನಂಬಿಕೆ ದ್ರೋಹ, ವಿಶ್ವಾಸದ್ರೋಹ ಮಾಡುತ್ತಿದ್ದೀರಿ ಎಂದು ಹೇಳಿದರು. ಗೆದ್ದು ಬಂದ ಕ್ಷೇತ್ರಕ್ಕೆ ವಾಪಸು ಹೋಗುವುದಿಲ್ಲ ಎಂದರೆ ಏನರ್ಥ? ಏನೇ ಆಗಲಿ ಅದೇ ಕ್ಷೇತ್ರದಲ್ಲಿ ನಿಂತು ಜನರ ಋುಣ ತೀರಿಸುವ ಪ್ರಯತ್ನ ಮಾಡಬೇಕು. ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾಯಿಸಲು ಹೋಗಬಾರದು. ಬಾದಾಮಿ ಜನರ ಋುಣ ಅವರ ಮೇಲಿದೆ ಎಂದು ಹೇಳಿದರು.
ಚುನಾವಣೆ ಗೆಲ್ಲಲು ಅಮಿತ್ ಶಾ ಪಂಚಸೂತ್ರ: ಮೋದಿ, ಪಕ್ಷದ ಹೆಸರಲ್ಲಿ ಚುನಾವಣಾ ಪ್ರಚಾರ ನಡೆಸಿ
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಯು.ಟಿ. ಖಾದರ್, ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲೇ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ. ಬಾದಾಮಿ ಬೆಂಗಳೂರಿನಿಂದ ದೂರ ಇರುವುದರಿಂದ ನಿರಂತರವಾಗಿ ಓಡಾಡಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಅವರು ಕ್ಷೇತ್ರ ಬದಲಿಸುತ್ತಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಬಾದಾಮಿಯನ್ನು ತನ್ನದೇ ಕ್ಷೇತ್ರ ಎಂದು ತಿಳಿದು ಅಭಿವೃದ್ಧಿ ಮಾಡುತ್ತೇನೆ ಎಂದಿದ್ದಾರೆ ಎಂದು ಸಮರ್ಥಿಸಿಕೊಂಡರು.