ಜನಾ​ರ್ದನ ರೆಡ್ಡಿ ಪಕ್ಷ​ವನ್ನು ನಾನು ನೋಡಿ​ಕೊ​ಳ್ಳು​ತ್ತೇ​ನೆ: ಕೇಂದ್ರ ಸಚಿವ ಅಮಿತ್‌ ಶಾ

ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಕಲ್ಯಾಣ ಕರ್ನಾ​ಟಕ ಭಾಗ​ದ​ಲ್ಲಿ ಬಿಜೆಪಿ ಪಾಲಿಗೆ ತಲೆ​ನೋ​ವಾ​ಗಿ​ರುವ ಮಾಜಿ ಸಚಿವ ಜನಾ​ರ್ದನ ರೆಡ್ಡಿ ಹಾಗೂ ಅವರ ಪಕ್ಷವನ್ನು ನಾನು ನೋಡಿ​ಕೊ​ಳ್ಳು​ತ್ತೇ​ನೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖಂಡ​ರಿಗೆ ಧೈರ್ಯ ತುಂಬಿ​ದ್ದಾ​ರೆ. 

I look after Janardhan Reddys Party Says Union Minister Amit Shah gvd

ಸಂಡೂರು(ಬ​ಳ್ಳಾ​ರಿ) (ಫೆ.24): ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಕಲ್ಯಾಣ ಕರ್ನಾ​ಟಕ ಭಾಗ​ದ​ಲ್ಲಿ ಬಿಜೆಪಿ ಪಾಲಿಗೆ ತಲೆ​ನೋ​ವಾ​ಗಿ​ರುವ ಮಾಜಿ ಸಚಿವ ಜನಾ​ರ್ದನ ರೆಡ್ಡಿ ಹಾಗೂ ಅವರ ಪಕ್ಷವನ್ನು ನಾನು ನೋಡಿ​ಕೊ​ಳ್ಳು​ತ್ತೇ​ನೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖಂಡ​ರಿಗೆ ಧೈರ್ಯ ತುಂಬಿ​ದ್ದಾ​ರೆ. ಬಿಜೆಪಿ ಸಮಾ​ವೇ​ಶದ ಬಳಿಕ ಸಂಡೂ​ರಿನ ಶಿವಲೀಲಾ ಪ್ಯಾಲೇಸ್‌ನಲ್ಲಿ ಗುರುವಾರ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ನಾಲ್ಕು ಜಿಲ್ಲೆಗಳ ಕೋರ್‌ ಕಮಿಟಿ ಸಭೆಯಲ್ಲಿ ರೆಡ್ಡಿ ವಿಚಾರ ಪ್ರಸ್ತಾ​ಪ​ವಾ​ದಾಗ ಈ ಭರ​ವಸೆ ನೀಡಿ​ದ​ರು. ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿ​ಸಿದ್ದು, ಬಳ್ಳಾರಿ, ಕೊಪ್ಪಳ, ರಾಯ​ಚೂರು, ವಿಜ​ಯ​ನ​ಗರ ಸೇರಿ​ ಉತ್ತರ ಕರ್ನಾ​ಟಕ ಭಾಗ​ವನ್ನು ಮುಖ್ಯ​ವಾ​ಗಿ​ಟ್ಟು​ಕೊಂಡು ಈಗಾ​ಗಲೇ ಪ್ರಚಾ​ರ​ವನ್ನೂ ಆರಂಭಿ​ಸಿ​ದ್ದಾ​ರೆ. 

ಜತೆಗೆ ಸ್ವತಃ ಗಂಗಾ​ವ​ತಿ​ಯಿಂದ ಸ್ಪರ್ಧಿ​ಸು​ವು​ದಾಗಿ ಘೋಷಿ​ಸಿ​ದ್ದಾರೆ. ಯಡಿ​ಯೂ​ರಪ್ಪ ಸರ್ಕಾ​ರದ ಅವ​ಧಿ​ಯಲ್ಲಿ ಸಚಿ​ವರೂ ಆಗಿ​ದ್ದ ಜನಾ​ರ್ದನ ರೆಡ್ಡಿಯ ಈ ನಡೆ ಬಳ್ಳಾರಿ ಸೇರಿ​ ಸುತ್ತ​ಮು​ತ್ತಲ ಜಿಲ್ಲೆ​ಗಳ ಬಿಜೆಪಿ ನಾಯ​ಕ​ರಲ್ಲಿ ಆತಂಕ ಮೂಡಿ​ಸಿ​ದೆ. ಇದೇ ಕಾರ​ಣಕ್ಕೆ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷ ಬಲವರ್ಧನೆ ಬಗ್ಗೆ ಅಮಿತ್‌ ಶಾ ಅವರು ಸಲಹೆ ನೀಡುತ್ತಿದ್ದಾಗ ಶಾಸಕರಾದ ಸೋಮಶೇಖರ ರೆಡ್ಡಿ ಹಾಗೂ ಪರಣ್ಣ ಮುನವಳ್ಳಿ ಅವರು ಜನಾರ್ದನ ರೆಡ್ಡಿ ಪಕ್ಷದ ಬಗ್ಗೆ ವಿಷ​ಯ ಪ್ರಸ್ತಾಪಿಸಿದ್ದಾರೆ.

ರೋಹಿಣಿ ವರ್ಸಸ್‌ ರೂಪಾಗೆ ಕೋರ್ಟ್‌ ಬ್ರೇಕ್‌: ಆಕ್ಷೇಪಾರ್ಹ, ಮಾನಹಾನಿ ಹೇಳಿಕೆ ನೀಡದಂತೆ ಇಬ್ಬರಿಗೂ ತಾಕೀತು

ಗಂಗಾವತಿಯಲ್ಲಿ ನನಗೆ ಸಮಸ್ಯೆಯಾಗುತ್ತಿದೆ ಎಂದು ಪರಣ್ಣ ಹೇಳಿದರೆ, ‘ನನ್ನ ಸೊಸೆ(ತಮ್ಮನ ಹೆಂಡ​ತಿ​) ಅರುಣಾ ಲಕ್ಷ್ಮಿ ನನ್ನ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ’ ಎಂದು ಸೋಮಶೇಖರ ರೆಡ್ಡಿ ಅವ​ರು ಅಮಿತ್‌ ಶಾ ಗಮನಕ್ಕೆ ತಂದರು. ಆದರೆ, ರೆಡ್ಡಿ ಮತ್ತು ಪಕ್ಷದ ಕುರಿತು ಹೆಚ್ಚು ತಲೆ​ಕೆ​ಡಿ​ಸಿ​ಕೊಂಡಂತೆ ಕಾಣದ ಶಾ ಅವರು, ನಾನಿ​ದ್ದೇನೆ ಅಲ್ವಾ? ಆ ಸಮಸ್ಯೆ ನಾನು ನೋಡಿ​ಕೊ​ಳ್ಳು​ತ್ತೇನೆ. ನೀವು ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕಾರ್ಯ ಮಾಡಿ ಎಂದು ತಿಳಿ​ಸಿ​ದ್ದಾ​ರೆ ಎನ್ನ​ಲಾ​ಗಿ​ದೆ.

ಮೈ ಹೂಂ ನಾ, ದೇಖ್‌ ಲೂಂಗಾ: ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಕೆಆರ್‌ಪಿ ಪಾರ್ಟಿ ಕುರಿತು ಸಂಡೂರಿನ ಶಿವಲೀಲಾ ಪ್ಯಾಲೇಸ್‌ನಲ್ಲಿ ಗುರುವಾರ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ನಾಲ್ಕು ಜಿಲ್ಲೆಗಳ ಕೋರ್‌ ಕಮಿಟಿ ಸಭೆಯಲ್ಲಿ ಪ್ರಸ್ತಾಪವಾಗಿದೆ. ಈ ಬಗ್ಗೆ ಸಭೆಯಲ್ಲಿ ಪ್ರತಿಕ್ರಿಯಿಸಿದ ಅಮಿತ್‌ ಶಾ ಅವರು, ಮೈ ಹೂಂ ನಾ, ದೇಖ್‌ ಲೂಂಗಾ ಎಂದು ಉತ್ತರಿಸಿದ್ದಾರೆ.

45 ಹೊಸ ವಾರ್ಡ್‌ ಅಭಿವೃದ್ಧಿಗೆ ತಲಾ 1 ಕೋಟಿ ಅನುದಾನ: ಬಿಬಿಎಂಪಿ ನಿರ್ಧಾರ

ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷ ಬಲವರ್ಧನೆ ಬಗ್ಗೆ ಅಮಿತ್‌ ಶಾ ಅವರು ಸಲಹೆ ನೀಡುತ್ತಿದ್ದಾಗ ಶಾಸಕರಾದ ಸೋಮಶೇಖರ ರೆಡ್ಡಿ ಹಾಗೂ ಪರಣ್ಣ ಮುನವಳ್ಳಿ ಅವರು ಜನಾರ್ದನ ರೆಡ್ಡಿಯ ಪಕ್ಷ ಕೆಆರ್‌ಪಿ ಬಗ್ಗೆ ಪ್ರಸ್ತಾಪಿಸಿದರು. ಗಂಗಾವತಿಯಲ್ಲಿ ನನಗೆ ಸಮಸ್ಯೆಯಾಗುತ್ತಿದೆ ಎಂದು ಪರಣ್ಣ ಹೇಳಿದರೆ, ನನ್ನ ಸೊಸೆ ಅರುಣಾ ಲಕ್ಷ್ಮಿ ನನ್ನ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಎಂದು ಸೋಮಶೇಖರ ರೆಡ್ಡಿ, ಅಮಿತ್‌ ಶಾ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾನಿರುವೆ. ನಿಮ್ಮ ಸಮಸ್ಯೆ ಬಗೆಹರಿಸುವೆ. ನೀವು ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕಾರ್ಯ ಮಾಡಬೇಕು ಎಂದು ಸಂದೇಶ ನೀಡಿದ್ದಾರೆ.

Latest Videos
Follow Us:
Download App:
  • android
  • ios