ಜೆಡಿಎಸ್ ಬಳಿಕ ಮತ್ತೊಂದು ಪಕ್ಷ ಬಿಜೆಪಿ ಜೊತೆ ಮೈತ್ರಿ ಮುನ್ಸೂಚನೆ!
ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮತ್ತೊಂದು ಪಕ್ಷ ಬಿಜೆಪಿ ಜೊತೆಗಿನ ಮೈತ್ರಿ ಸೂಚನೆ ನೀಡಿದೆ. ಈ ಕುರಿತು ಸ್ಫೋಟಕ ಮಾಹಿತಿ ಇಲ್ಲಿದೆ

ನವದೆಹಲಿ(ಸೆ.25) ಲೋಕಸಭಾ ಚುನಾವಣೆಗೆ ತಯಾರಿ ಜೋರಾಗಿದೆ. ಕಾಂಗ್ರೆಸ್ ಈಗಾಗಲೇ ವಿಪಕ್ಷಗಳ ಜೊತೆ ಸೇರಿ ಇಂಡಿಯಾ ಮೈತ್ರಿ ಒಕ್ಕೂಟ ರಚನೆ ಮಾಡಿದೆ. ಇತ್ತ ಬಿಜೆಪಿ ಎನ್‌ಡಿಎ ಒಕ್ಕೂಟ ಬಲಪಡಿಸಲು ಮುಂದಾಗಿದೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಮಾಡಿಕೊಂಡಿದೆ. ಇದೀಗ ಮತ್ತೊಂದು ಪ್ರಮುಕ್ಷ ಪಕ್ಷ ಬಿಜೆಪಿ ಜೊತೆ ಮೈತ್ರಿ ಸೂಚನೆ ನೀಡುತ್ತಿದೆ. ಒಡಿಶಾದಲ್ಲಿ ಆಡಳಿತದಲ್ಲಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇೃತ್ವದ ಬಿಜೆಡಿ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ವಿದೇಶಾಂಗ ನೀತಿ, ದೇಶದ ಕಟ್ಟಕಡೆಯ ಪ್ರಜೆಗೆ ಮೂಲಭೂತ ಸೌಕರ್ಯ ಸಿಗಲು ರೂಪಿಸಿರುವ ಯೋಜನೆಗಳು, ಭ್ರಷ್ಟಾಚರ ರಹಿತ ಆಡಳಿತ ಸೇರಿದಂತೆ ಹಲವು ವಿಚಾರಗಳ ಕುರಿತು ನವೀನ್ ಪಟ್ನಾಯಕ್ ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆ. ಇದೇ ವೇಳೆ ಒಡಿಶಾದ ಅಭಿವೃದ್ಧಿ, ಒಡಿಶಾದ ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಕೇಂದ್ರದ ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿದ್ದೇವೆ. ಕೇಂದ್ರ ಹಾಗೂ ರಾಜ್ಯದ ನಡುವಿನ ಸಂಬಂಧ ಉತ್ತಮವಿದ್ದರೆ ಅಭಿವೃದ್ಧಿ ಕೆಲಸಗಳು ಸುಲಭವಾಗುತ್ತದೆ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ. ಈ ಮೂಲಕ 2024ರ ಲೋಕಸಭಾ ಚುನಾವಣೆಗೆ ಮೈತ್ರಿ ಸೂಚನೆ ನೀಡಿದ್ದಾರೆ.
ಬಿಎಸ್‌ವೈ ಭೇಟಿ ಮಾಡಿದ ನಿಖಿಲ್: ಮಂಡ್ಯದಿಂದಲೇ ಮತ್ತೆ ಸ್ಪರ್ಧಿಸ್ತಾರಾ ಹೆಚ್‌ಡಿಕೆ ಪುತ್ರ ?
ಪ್ರಧಾನಿ ಮೋದಿ ಆಡಳಿತದ ಕುರಿತು ನವೀನ್ ಪಟ್ನಾಯಕ್ ರೇಟಿಂಗ್ ನೀಡಿದ್ದಾರೆ. ಮೋದಿ ಆಡಳಿತಕ್ಕೆ 10ರಲ್ಲಿ 8 ಅಂಕ ನೀಡಿದ್ದಾರೆ. ಪ್ರಮುಖವಾಗಿ ಭ್ರಷ್ಟಾಚಾರ ರಹಿತ ಆಡಳಿತ ಈ ದೇಶಕ್ಕೆ ಬೇಕಾಗಿದೆ. ಅದನ್ನು ಮೋದಿ ನೀಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತದಲ್ಲಿ ಮಾತ್ರ ದೇಶದ ಪ್ರತಿಯೊಬ್ಬ ಪ್ರಜೆಗೆ ಸೌಲಭ್ಯಗಳು ತಲುಪಲು ಸಾಧ್ಯ ಎಂದು ಮೋದಿ ಹೇಳಿದ್ದಾರೆ.
ಮಹಿಳಾ ಮೀಸಲಾತಿ ಬಿಲ್ ಕುರಿತು ಮಾತನಾಡಿದ ನವೀನ್ ಪಟ್ನಾಯಕ್, ಇದು ಅತ್ಯಂತ ಮಹತ್ವದ ಹೆಜ್ಜೆ. ಈ ರೀತಿಯ ಐತಿಹಾಸಿಕ ಮಸೂದೆಗಳಿಗೆ ಬಿಜೆಡಿ ಸದಾ ಬೆಂಬಲ ನೀಡಲಿದೆ. ನನ್ನ ತಂದೆ ಬಿಜು ಪಟ್ನಾಯಕ್ 90ರ ದಶಕದಲ್ಲಿ ಮಹಿಳೆಯರಿಗೆ ಸ್ಥಳೀಯ ಚುನಾವಣೆಯಲ್ಲಿ ಶೇಕಡಾ 33 ರಷ್ಟು ಮೀಸಲಾತಿ ಘೋಷಿಸಿದ್ದರು. ನಾವು ಅದನ್ನು ಶೇಕಡಾ 50ಕ್ಕೆ ಏರಿಸಿದ್ದೇವೆ ಎಂದು ಪಟ್ನಾಯಕ್ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆಗಷ್ಟೇ ಅಲ್ಲ, ದೀರ್ಘಾವಧಿಗೆ: ಎಚ್‌ಡಿಕೆ
ಲೋಕಸಭೆ ಚುನಾವಣೆಯಲ್ಲಿ ಬಿಜೆಡಿ ಪಕ್ಷ, ಬಿಜೆಪಿಗೆ ಬೆಂಬಲ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ಇಂಡಿಯಾ ಮೈತ್ರಿ ಕೂಟದಿಂದಲೂ ಬಿಜೆಡಿ ಹೊರಗುಳಿದಿದೆ.