ಸಿಎಂಗೆ 4ನೇ ರಾಜಕೀಯ ಕಾರ್ಯದರ್ಶಿ ನೇಮಕ: ಪಿಎ ಆಗಿದ್ದವರಿಗೆ ಈಗ ಸಂಪುದ ದರ್ಜೆ ಸ್ಥಾನಮಾನ..!

ಸಿಎಂಗೆ ನಾಲ್ಕನೇ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಯಾಗಿದ್ದು, ಈ ಹಿಂದೆ ಪಿಎ ಆಗಿದ್ದವರನ್ನ ಇದೀಗ ಸಂಪುಟ ದರ್ಜೆ ಸ್ಥಾನಮಾನ ನೀಡಿ ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಯಾರವರು..?

NR santosh appointed as cm BSY political secretary with cabinet status

ಬೆಂಗಳೂರು, (ಮೇ.28): ಸಿಎಂ ನಾಲ್ಕನೇ ರಾಜಕೀಯ ಕಾರ್ಯದರ್ಶಿ ನೇಮಕವಾಗಿದೆ.  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ಅವರನ್ನು ನೇಮಕ ಮಾಡಲಾಗಿದ್ದು, ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ಇದೆ.

"

ಈಗಾಗಲೇ ಎಸ್ಆರ್ ವಿಶ್ವನಾಥ್, ಎಂ.ಪಿ.ರೇಣುಕಾಚಾರ್ಯ ಮತ್ತು ಶಂಕರಗೌಡ ಪಾಟೀಲ್ ಅವರು ಸಿಎಂ ಬಿಎಸ್‌ವೈ ಅವರ ರಾಜಕೀಯ ಕಾರ್ಯದರ್ಶಿಗಳಿದ್ದಾರೆ.

ಬಿಎಸ್‌ವೈ ವಿರುದ್ಧ ನಾನು ಪತ್ರ ಬರೆದಿಲ್ಲ: ಸಂತೋಷ್‌ ಆಣೆ

ಸಂತೋಷ್ ಈಗ ಸಿಎಂ ರಾಜಕೀಯ ಕಾರ್ಯದರ್ಶಿ

NR santosh appointed as cm BSY political secretary with cabinet status
ಹೌದು.. ಯಡಿಯೂರಪ್ಪ ಅವರು ತಮ್ಮ ಆಪ್ತ ಸಹಾಯಕರಾಗಿದ್ದ (PA)  ಎನ್.ಆರ್.ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ  ಮಾಡಿ ಸಿಎಂ ಸಹಿ ಇರುವ ಆದೇಶ ಪತ್ರ ಸುವರ್ಣ ನ್ಯೂಸ್.ಕಾಂಗೆ ಸಿಕ್ಕಿದೆ.

 ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಸಂತೋಷ್ ಅವರನ್ನು ತಮ್ಮ ರಾಜಕೀಯ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಲು ಆದೇಶಿಸಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖವಾಗಿದ್ದು, ಇಂದು (ಗುರುವಾರ) ಸಂಜೆ ವೇಳೆ ಅಧಿಕೃತ ಆದೇಶ ಹೊರಬೀಳುವ ಎಲ್ಲಾ ಸಾಧ್ಯತೆಗಳಿವೆ.

ಮಧ್ಯರಾತ್ರಿ ಬಿಎಸ್'ವೈ ಮನೆಯಲ್ಲಿ ಪೊಲೀಸ್ ಹುಡುಕಾಟ: ನಂತರ ಪೊಲೀಸ್ ಆಯುಕ್ತರಿಗೆ ಯಡಿಯೂರಪ್ಪ ಪತ್ರ

 ಸಂತೋಷ್ ಅವರು ಯಡಿಯೂರಪ್ಪನವರ ಆಪ್ತ ಸಹಾಯಕರಾಗಿದ್ದರು. ಬಿಎಸ್‌ವೈ ಸಿಎಂ ಆದ ಬಳಿಕ ಸಂತೋಷ್ ನಾಪತ್ತೆಯಾಗಿದ್ದರು. ಇದೀಗ ಸಂಪುಟ ದರ್ಜೆಯ ಸ್ಥಾನ ಮಾನ ನೀಡಿದ್ದು, ಕೆಲವರ ವಿರೋಧಕ್ಕೆ ಕಾರಣವಾಗಿದೆ. 

ಇನ್ನು ಇದೇ ಸಂತೋಷ್ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯ ವಿನಯ್ ನಡುವೆ ದೊಡ್ಡ ಗಲಾಟೆಯೇ ನಡೆದಿದ್ದು, ಅದು ಈಶ್ವರಪ್ಪ ಹಾಗೂ ಯಡಿಯೂರಪ್ಪ ನಡುವೆ ವೈಯಕ್ತಿಕ ಜಂಗೀ ಕುಸ್ತಿಗೆ  ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios