Asianet Suvarna News Asianet Suvarna News

ಮಧ್ಯರಾತ್ರಿ ಬಿಎಸ್'ವೈ ಮನೆಯಲ್ಲಿ ಪೊಲೀಸ್ ಹುಡುಕಾಟ: ನಂತರ ಪೊಲೀಸ್ ಆಯುಕ್ತರಿಗೆ ಯಡಿಯೂರಪ್ಪ ಪತ್ರ

ನಿನ್ನೆ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಎಸಿಪಿ ಬಡಿಗೇರ್ ಮತ್ತು ಅವರ ತಂಡ ಯಡಿಯೂರಪ್ಪರ ಮನೆಗೆ ಪ್ರವೇಶಿಸಿ, ಸಂತೋಷ್ಗಾಗಿ ಶೋಧ ನಡೆಸಿದ್ದಾರೆಂದು ಸ್ವತಃ ಯಡಿಯೂರಪ್ಪನವರೇ ತಿಳಿಸಿದ್ದಾರೆ.

BSY Write letter to Bangalore police commissioner

ಬೆಂಗಳೂರು(ಜು.16): ತಡರಾತ್ರಿ ಪೊಲೀಸರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಯಡಿಯೂರಪ್ಪ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಬಿಜೆಪಿಯ ಇಬ್ಬರು ಪ್ರಬಲ ನಾಯಕರ ಪಿಎಗಳ ನಡುವೆ ನಡೆದಿದೆ ಎನ್ನಲಾದ ಕಿತ್ತಾಟ ಮತ್ತು ಅಪಹರಣ ಯತ್ನ ಪ್ರಕರಣದ ಸುದ್ದಿ ಇದು. ವಿಪಕ್ಷ ನಾಯಕ ಈಶ್ವರಪ್ಪ ಪಿಎ ವಿನಯ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪಿಎ ಸಂತೋಷ್ ನಡುವಿನ ಸಿಡಿ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೇ ವಿನಯ್ ಅಪಹರಣದಲ್ಲಿ ಸಂತೋಷ್ ಪಾತ್ರ ಇದೆ ಎಂದು ಬಿಂಬಿತವಾಗಿತ್ತು. ಅದರ ಮುಂದುವರಿದ ಭಾಗವಾಗಿ ಪೊಲೀಸರು ಸಂತೋಷ್ ಗಾಗಿ ಯಡಿಯೂರಪ್ಪರ ಮನೆ ಸರ್ಚ್ ಮಾಡಿದ್ದಾರೆ.

ನಿನ್ನೆ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಎಸಿಪಿ ಬಡಿಗೇರ್ ಮತ್ತು ಅವರ ತಂಡ ಯಡಿಯೂರಪ್ಪರ ಮನೆಗೆ ಪ್ರವೇಶಿಸಿ, ಸಂತೋಷ್‌ಗಾಗಿ ಶೋಧ ನಡೆಸಿದ್ದಾರೆಂದು ಸ್ವತಃ ಯಡಿಯೂರಪ್ಪನವರೇ ತಿಳಿಸಿದ್ದಾರೆ. ಈ ಸಂಬಂಧ ಬೆಂಗಳೂರು ಪೊಲೀಸ್ ಕಮೀಷ'ನರ್ ಪ್ರವೀಣ್ ಸೂದ್‌ಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿರುವ ಸಾರಾಂಶ

'ಪೊಲೀಸರು ಬೆಳಗಿನ ಸಮಯದಲ್ಲಿ  ಬಂದು ನನ್ನ ಮನೆ ಶೋಧಿಸಬಹುದಾಗಿತ್ತು. ಆದರೆ ಮಧ್ಯರಾತ್ರಿ ಬಂದು ಮನೆ ಶೋಧಿಸಿರುವುದು ಸರಿಯಲ್ಲ. ಸಂತೋಷ್ ನನ್ನ ಸಂಬಂಧಿಯಾಗಿದ್ದು, ಕಳೆದ 7 ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡುತ್ತಿದ್ದಾನೆ. ವಿನಯ್ ಅಪಹರಣ ಪ್ರಕರಣದಲ್ಲಿ ಸಂತೋಷ್ ಹೆಸರನ್ನು ಬಲವಂತವಾಗಿ ಸೇರಿಸಲು ಪೊಲೀಸರು ರಾಜೇಂದ್ರನಿಗೆ ಒತ್ತಡ ಹೇರಿದ್ದಾರೆ. ಈ ಎಲ್ಲಾ ಬೆಳವಣಿಗೆ ರಾಜಕೀಯ ಪ್ರೇರಿತವಾದಂತೆ ಕಾಣುತ್ತಿದೆ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಯಡಿಯೂರಪ್ಪನವರು ಆಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ತನಿಖೆ ಕೈಗೆತ್ತುಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ಅಸಲಿಯತ್ತು ಬಯಲಾಗಬೇಕಾಗಿದೆ.

Follow Us:
Download App:
  • android
  • ios