ಬೆಂಗ​ಳೂ​ರು[ಮಾ.16]: ‘ಧರ್ಮ​ಸ್ಥ​ಳದ ಮಂಜು​ನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳು​ತ್ತಿ​ದ್ದೇನೆ. ನಾನು ಯಾರ ವಿರುದ್ಧವೂ ಯಾವುದೇ ಅನಾಮಧೇಯ ಪತ್ರ ಬರೆ​ದಿ​ಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮೀಪದ ಸಂಬಂಧಿಯೂ ಆಗಿರುವ ಮಾಜಿ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರ ವಿರುದ್ಧ ಎರಡು ಅನಾಮಧೇಯ ಪತ್ರಗಳು ಮಾಧ್ಯಮ ಸಂಸ್ಥೆಗಳಿಗೆ ತಲುಪಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿದ್ದವು. ಇದರ ಹಿಂದೆ ಸಂತೋಷ್‌ ಇದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಂತೋಷ್‌ ಅವರು ಭಾನುವಾರ ಲಿಖಿತ ಸ್ಪಷ್ಟೀಕರಣ ನೀಡಿದ್ದಾರೆ. ಧರ್ಮ​ಸ್ಥ​ಳದ ಮಂಜು​ನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳು​ತ್ತಿ​ದ್ದೇನೆ. ನಾನು ಯಾವುದೇ ಪತ್ರವನ್ನು ಬರೆ​ದಿ​ಲ್ಲ ಎಂದು ಈ ಮೂಲಕ ಸ್ಪಷ್ಟ​ಪ​ಡಿ​ಸು​ತ್ತಿ​ದ್ದೇನೆ. ಸುಳ್ಳು ಆಪಾ​ದ​ನೆ​ಗಳು, ಅಪ​ಪ್ರ​ಚಾ​ರ​ಗಳು, ಅರ್ಥ​ಹೀನ ಎಂದಿದ್ದಾರೆ.

ಕಳೆದ ಕೆಲವು ದಿನ​ಗ​ಳಿಂದ ನಾನು ಹೊರಗೆ ಕಾಣಿ​ಸಿ​ಕೊ​ಳ್ಳದೆ ಅಂತ​ರ್ಮುಖಿ​ಯಾ​ಗಿ​ದ್ದೇನೆ. ಕಳೆದ 8-9 ವರ್ಷ​ಗ​ಳಲ್ಲಿ ಯಾವುದೇ ವಿಶ್ವ​ವಿ​ದ್ಯಾ​ಲ​ಯ​ಗ​ಳ​ಲ್ಲಿಯೂ ಕಲಿ​ಸದ ಪಾಠ​ವನ್ನು ನನ್ನ ಗುರು ಬಿ.ಎ​ಸ್‌.ಯಡಿ​ಯೂ​ರಪ್ಪ ಕಲಿ​ಸಿ​ದ್ದಾರೆ. ಕಲಿ​ತಿ​ದ್ದೇನೆ. ರಾಜ್ಯ​ವನ್ನು ಅವರ ಜೊತೆ ನೆರ​ಳಿ​ನಂತೆ ಸಾಕಷ್ಟುಬಾರಿ ಸುತ್ತಿ​ದ್ದೇನೆ. ನನ್ನದು ಗುರು ಲಿಂಗ ಜಂಗ​ಮದ ಪದ್ಧತಿ, ಅಣ್ಣ ಬಸ​ವ​ಣ್ಣ​ನ​ವರ ಆಶೀ​ರ್ವ​ಚ​ನ​ದಂತೆ ಕಾಯಕ ಮಾಡು​ವುದೇ ನಮ​ಗೆ ಕೈಲಾ​ಸದ ಸಮಾನ. ನಾಡಿನ ಕೋಟ್ಯಂತರ ಜನ​ರಂತೆ ನಾನು ಬಿಜೆಪಿ ಸರ್ಕಾರ ಅಸ್ತಿ​ತ್ವಕ್ಕೆ ಬಂದು ನಿರಾ​ತಂಕ​ವಾಗಿ ಅವಧಿ ಪೂರೈ​ಸ​ಬೇಕು ಎಂದು ಆಶಿ​ಸು​ತ್ತಿ​ರು​ವ​ವನು. ನನ್ನ ಮೇಲೆ ಯಾರದೋ ಪ್ರಲೋ​ಭ​ನೆ​ಯಿಂದ ಚಿತಾ​ವ​ಣೆ​ಯಿಂದ ಸುಳ್ಳು ಆರೋ​ಪ​ಗ​ಳನ್ನು ಹೊರಿ​ಸು​ತ್ತಿ​ದ್ದಾರೆ. ಅದು​ ಮಾ​ಧ್ಯ​ಮ​ಗ​ಳ​ಲ್ಲಿ​ಯೂ ವರ​ದಿ​ಯಾ​ಗಿದೆ. ನಾನು ಯಾರಿಗೂ ಬಹಿ​ರಂಗ​ವಾಗಿ ಯಾವುದೇ ಅನಾ​ಮ​ಧೇಯ ಪತ್ರವನ್ನು ಬರೆ​ದಿಲ್ಲ. ದೂರು ಹೇಳು​ವು​ದ​ಕ್ಕಾಗಿ ದೆಹ​ಲಿಗೆ ಹೋಗಿಲ್ಲ ಎಂದಿದ್ದಾರೆ.

ಧರ್ಮ​ಸ್ಥ​ಳದ ಮಂಜು​ನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡಿ ಹೇಳು​ತ್ತಿ​ದ್ದೇನೆ. ನಾನು ಯಾವುದೇ ಪತ್ರವನ್ನು ಬರೆ​ದಿ​ಲ್ಲ ಎಂದು ಈ ಮೂಲಕ ಸ್ಪಷ್ಟ​ಪ​ಡಿ​ಸು​ತ್ತಿ​ದ್ದೇನೆ. ಸುಳ್ಳು ಆಪಾ​ದ​ನೆ​ಗಳು, ಅಪ​ಪ್ರ​ಚಾ​ರ​ಗಳು, ಅರ್ಥ​ಹೀನ. ನನಗೆ ವೈಯ​ಕ್ತಿ​ಕ​ವಾಗಿ ನೋವಾ​ಗಿದೆ, ಆಘಾ​ತ​ವಾ​ಗಿದೆ. ಇದನ್ನು ನಮ್ಮ ಹಿರಿ​ಯರ ಗಮ​ನಕ್ಕೆ ತಂದಿ​ದ್ದೇನೆ. ಅವರು ಮಾರ್ಗ​ದ​ರ್ಶನ ಮಾಡಿ​ದಂತೆ ನಡೆ​ದು​ಕೊ​ಳ್ಳು​ತ್ತೇನೆ. ನನಗೆ ತಿಳಿ​ದಂತೆ ಗುರು ದೋಷಣೆ ಮಾಡ​ಬಾ​ರದು. ಗುರುವಿ​ನಿಂದ ದೂರ ಉಳಿ​ದಿ​ದ್ದೇ​ನೆ ಅಷ್ಟೇ ಎಂದು ಹೇಳಿದ್ದಾರೆ.