BS Yadiyurappa: ರಾಜಕೀಯ ನಿವೃತ್ತಿ ಪಡೆದಿಲ್ಲ, ಮನೆಯಲ್ಲಿ ಕೂರಲ್ಲ: ಬಿಎಸ್‌ವೈ

ಪಕ್ಷ ನನಗೆ ಸಾಕಷ್ಟುಅವಕಾಶಗಳನ್ನು ನೀಡಿದೆ. ಪಕ್ಷದ ಋುಣ ತೀರಿಸುವುದು ನನ್ನ ಕರ್ತವ್ಯ. ರಾಜ್ಯದ ಉದ್ದಗಲಕ್ಕೂ ಪ್ರವಾಸ ನಡೆಸಿ ಪಕ್ಷ ಬಲಪಡಿಸುವುದರೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ. ಆ ದಿಕ್ಕಿನಲ್ಲಿ ನಾಳೆಯಿಂದಲೇ ಪ್ರವಾಸ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Not politics retired not sitting at home says BSY at bengaluru rav

ಶಿವಮೊಗ್ಗ (ಮಾ.1) : ಪಕ್ಷ ನನಗೆ ಸಾಕಷ್ಟುಅವಕಾಶಗಳನ್ನು ನೀಡಿದೆ. ಪಕ್ಷದ ಋುಣ ತೀರಿಸುವುದು ನನ್ನ ಕರ್ತವ್ಯ. ರಾಜ್ಯದ ಉದ್ದಗಲಕ್ಕೂ ಪ್ರವಾಸ ನಡೆಸಿ ಪಕ್ಷ ಬಲಪಡಿಸುವುದರೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ. ಆ ದಿಕ್ಕಿನಲ್ಲಿ ನಾಳೆಯಿಂದಲೇ ಪ್ರವಾಸ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ಹೇಳಿದರು.

ನಗರದಲ್ಲಿ ಮಂಗ​ಳ​ವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಚುನಾವಣೆ(Assembly election)ಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿಲ್ಲ. ಯಡಿಯೂರಪ್ಪ ಮನೆಯಲ್ಲಿ ಕೂತಿ​ದ್ದಾ​ನೆಂದು ಯಾರೂ ಭಾವಿಸುವ ಅಗತ್ಯವಿಲ್ಲ. ಈಗಾಗಲೇ ನಾನು ಹೇಳಿದಂತೆ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಮುಂದಿನ ದಿನಗಳ​ಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಪಕ್ಷವನ್ನು ಇನ್ನಷ್ಟುಬಲಪಡಿಸುತ್ತೇನೆ ಎಂದು ತಿಳಿಸಿದರು.

Assembly election: ಬಿಎಸ್‌ವೈ ಬಗ್ಗೆ ನಮ್ರತೆ ಇದ್ರೆ ಮತ್ತೆ ಸಿಎಂ ಮಾಡಿ: ಡಿಕೆಶಿ

ನನ್ನ ಕೈ, ಕಾಲು ಗಟ್ಟಿಇರುವ ತನಕ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಅದು ನನ್ನ ಕರ್ತವ್ಯ. ನನ್ನ ಕೊನೇ ಉಸಿರು ಇರುವವರೆಗೂ ಪಕ್ಷದ ಪರ ಕೆಲಸ ಮಾಡಿದರೂ ಅದು ಕಡಿಮೆಯೇ. ಆ ಭರವಸೆಯನ್ನು ಜನರಿಗೆ ನೀಡುತ್ತೇನೆ ಎಂದರು.

ಪ್ರಧಾನಿ ಮೋದಿ(PM Narendra Modi)ಯವರು ತುಂಬಾ ಆತ್ಮೀಯವಾಗಿ ನನ್ನ ಬಳಿ ನಡೆದುಕೊಂಡಿದ್ದಾರೆ. ಮೊದಲಿನಿಂದಲೂ ನನ್ನ ಬಗ್ಗೆ ಅವರಿಗೆ ತುಂಬಾ ವಿಶ್ವಾಸವಿದೆ, ಆತ್ಮೀಯತೆ ಇದೆ. ಅವರು ತೋರಿದ ಪ್ರೀತಿ-ವಿಶ್ವಾಸ ಮರೆಯಲು ಸಾಧ್ಯವಿಲ್ಲ. ನಾನು ​ಅ​ವ​ರಿಗೆ ಸದಾ ಋುಣಿ. ಮುಂಬರುವ ದಿನದಲ್ಲಿ ಅವರ ಅಪೇಕ್ಷೆಯಂತೆ ಪಕ್ಷವನ್ನು ಇನ್ನಷ್ಟುಬಲಪಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಅದೇ ಅವರಿಗೆ ನಾನು ನೀಡುವ ಕೊಡುಗೆ ಎಂದ​ರು.

ಜೆಡಿಎಸ್‌ ಹಳ್ಳ ಹಿಡಿಯಲು ಇಬ್ರಾಹಿಂ ಹೇಳಿಕೆಗಳೇ ಸಾಕು: ಅಶ್ವತ್ಥನಾರಾಯಣ ವ್ಯಂಗ್ಯ

Latest Videos
Follow Us:
Download App:
  • android
  • ios