Assembly election: ಬಿಎಸ್‌ವೈ ಬಗ್ಗೆ ನಮ್ರತೆ ಇದ್ರೆ ಮತ್ತೆ ಸಿಎಂ ಮಾಡಿ: ಡಿಕೆಶಿ

ಶಿವಮೊಗ್ಗದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟುದಿನ ಎಲ್ಲಿ ಹೋಗಿತ್ತು? ಈ ನಾಟಕೀಯ ಅನುಕಂಪವನ್ನು ಜನ ಒಪ್ಪುವುದಿಲ್ಲ. ನಿಜವಾದ ನಮ್ರತೆ ಇದ್ದರೆ ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Be humble about BSY make him CM again says DK shivakumar rav

ಬೆಂಗಳೂರು (ಮಾ.1) : ಶಿವಮೊಗ್ಗದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರಿಗೆ ತೋರಿದ ನಮ್ರತೆ ಇಷ್ಟುದಿನ ಎಲ್ಲಿ ಹೋಗಿತ್ತು? ಈ ನಾಟಕೀಯ ಅನುಕಂಪವನ್ನು ಜನ ಒಪ್ಪುವುದಿಲ್ಲ. ನಿಜವಾದ ನಮ್ರತೆ ಇದ್ದರೆ ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಸದಾಶಿವನಗರ(Sadashivanagar)ದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ(BS Yadiyurappa) ಅವರನ್ನು ನಾಯಕತ್ವದಿಂದ ತೆಗೆದ ನಂತರ ಪಕ್ಷಕ್ಕೆ ಅಭದ್ರತೆ ಎದುರಾಗಿದೆ. ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬ ಮಾಡಲು ಮುಂದಾದಾಗ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಅವರ ಬಗ್ಗೆ ನಿಜವಾದ ನಮ್ರತೆ ಇದ್ದರೆ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಅಧಿಕೃತವಾಗಿ ಘೋಷಿಸಿ, ಅವರಿಗೆ ಜವಾಬ್ದಾರಿ ನೀಡಲಿ. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಲಿ. ಆಗ ಅವರ ನಮ್ರತೆಯನ್ನು ಜನ ನಂಬುತ್ತಾರೆ. ಅದನ್ನು ಬಿಟ್ಟು ರಾಜಕಾರಣದಲ್ಲಿ ನಾಟಕೀಯ ಸಿಂಪತಿಯನ್ನು ಜನ ಒಪ್ಪುವುದಿಲ್ಲ ಎಂದರು.

ಡಿಕೆಶಿ ಕೈಗೆ ತಂಬೂರಿ ಕೊಟ್ಟು ಜ್ಯೋತಿಷ್ಯ ಹೇಳಿ ಎನ್ನಬೇಕು: ಶಾಸಕ ಎನ್‌.ಮಹೇಶ್‌

ನರೇಂದ್ರ ಮೋದಿ(Narendra Modi) ಅವರು ಯಡಿಯೂರಪ್ಪ ಅವರನ್ನು ಏಕೆ ಅಧಿಕಾರದಿಂದ ಇಳಿಸಲಾಯಿತು. ಅವರು ವಿಧಾನಸೌಧದಿಂದ ರಾಜ್ಯಪಾಲರ ಮನೆವರೆಗೂ ಕಣ್ಣೀರು ಹಾಕಿಕೊಂಡು ಹೋಗಿ ರಾಜೀನಾಮೆ ನೀಡಿದ್ದರ ಬಗ್ಗೆಯೂ ಮೋದಿ ಅವರು ಮಾತನಾಡಬೇಕು. ಜತೆಗೆ ಯಡಿಯೂರಪ್ಪ, ಅವರ ಕುಟುಂಬ ಸದಸ್ಯರು, ಆಪ್ತರ ಮೇಲೆ ಇಡಿ ದಾಳಿ ನೋಟೀಸ್‌ ನೀಡಿರುವ ಬಗ್ಗೆ, ಅವರನ್ನು ತನಿಖಾಧಿಕಾರಿಗಳು ಎಷ್ಟುಬಾರಿ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ ಎಂಬುದರ ಬಗ್ಗೆಯೂ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.

ಲಿಂಗಾಯಿತ ನಾಯಕರಿಗೆ ಕಾಂಗ್ರೆಸ್‌ ಅವಮಾನಿಸಿಲ್ಲ

ವೀರೇಂದ್ರ ಪಾಟೀಲ್‌ ಹಾಗೂ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್‌ ಅಪಮಾನ ಮಾಡಿತ್ತು ಎಂಬ ಬಿಜೆಪಿ ಆಪಾದನೆ ಕುರಿತ ಪ್ರಶ್ನೆಗೆ, ನಾನು ಅವರ ಕಾಲದಲ್ಲಿ ಶಾಸಕನಾಗಿದ್ದೆ. ವೀರೇಂದ್ರ ಪಾಟೀಲ್‌ ಆಸ್ಪತ್ರೆಯಲ್ಲಿದ್ದಾಗ ನಾನು ರಾಜೀವ್‌ ಗಾಂಧಿ(Rajeev gandhi) ಅವರ ಜತೆ ಆಸ್ಪತ್ರೆಗೆ ಹೋಗಿದ್ದೆ. ಅವರು ಚೇತರಿಸಿಕೊಳ್ಳುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಚರ್ಚೆ ಮಾಡಿ, ವೀರೇಂದ್ರ ಪಾಟೀಲ್‌ ಅವರನ್ನು ಬದಲಿಸುವ ತೀರ್ಮಾನಿಸಲಾಯಿತು.

ಸಾಮೂಹಿಕ ನಾಯಕತ್ವದಲ್ಲಿ ಹೋದಾಗ್ಲೇ ಕಾಂಗ್ರೆಸ್‌ ಜಯ: ಡಿಕೆಶಿ

ಇಂದಿರಾ ಗಾಂಧಿ(Indira gandhi) ಅವರ ವಿರುದ್ಧ ಸ್ಪರ್ಧೆ ಮಾಡಿದವರನ್ನು ಪಕ್ಷಕ್ಕೆ ವಾಪಸ್‌ ಕರೆತಂದು ಲೋಕಸಭೆಗೆ ನಿಲ್ಲಿಸಿ, ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿರುವ ಇತಿಹಾಸ, ಹೃದಯ ಶ್ರೀಮಂತಿಕೆ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್‌ ಪಕ್ಷಕ್ಕಿದೆ. ನಿಜಲಿಂಗಪ್ಪ ಅವರನ್ನು ಭೇಟಿ ಮಾಡಲು ಸೋನಿಯಾ ಗಾಂಧಿ ಹಾಗೂ ಎಸ್‌.ಎಂ ಕೃಷ್ಣ ಅವರು ಹೋಗಿದ್ದರು. ನಿಜಲಿಂಗಪ್ಪ ಅವರಿಗೆ ಗೌರವ ನೀಡಲು ಅವರ ಅಳಿಯನನ್ನು ಎಂಎಲ್ಸಿ ಮಾಡಿದ್ದರು. ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್‌ ಇತಿಹಾಸ. ನಾವು ಬಿಜೆಪಿಯವರಂತೆ ನಾಟಕೀಯ ಅನುಕಂಪ ತೋರುವುದಿಲ್ಲ ಎಂದರು.

Latest Videos
Follow Us:
Download App:
  • android
  • ios