ನನ್ನಿಂದ ಮೋದಿಯನ್ನು ದೂರ ಮಾಡಲು ಯಾರಿಗೂ ಸಾಧ್ಯವಿಲ್ಲ: ಕೆ.ಎಸ್.ಈಶ್ವರಪ್ಪ
ಮೋದಿ ಪೋಟೋ ಬಳಕೆ ಮಾಡಬಾರದು ಎಂಬ ಬಿಜೆಪಿಯವರ ಚಿಂತನೆಗೆ ಹಿನ್ನಡೆಯಾಗಿದೆ. ನನ್ನಿಂದ ಮೋದಿಯನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ಮೇ.03): ಮೋದಿ ಪೋಟೋ ಬಳಕೆ ಮಾಡಬಾರದು ಎಂಬ ಬಿಜೆಪಿಯವರ ಚಿಂತನೆಗೆ ಹಿನ್ನಡೆಯಾಗಿದೆ. ನನ್ನಿಂದ ಮೋದಿಯನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನರೇಂದ್ರ ಮೋದಿ ಅವರ ಪೋಟೋ ಅಷ್ಟೇ ಅಲ್ಲ. ಅವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ವಿಶ್ವ ನಾಯಕ ಮೋದಿ ಪೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರ ಈಶ್ವರಪ್ಪರಿಗೆ ಮಾತ್ರ ಅಲ್ಲ, ಭಾರತ ದೇಶದ 140 ಕೋಟಿ ಜನಕ್ಕೂ ಮೋದಿ ಪೋಟೋ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ.
ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಮೋದಿಗೆ ಈ ರೀತಿ ಅಪಮಾನ ಮಾಡಬಾರದು ಎಂದು ಹರಿಹಾಯ್ದರು. ರಾಮಮಂದಿರ ನಿರ್ಮಾಣ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮೊದಲು ದಿನಾಂಕ ಸಿಕ್ತು ನಂತರ ನ್ಯಾಯ ಸಿಕ್ತು. ಮೋದಿ ಪೋಟೋ ಬಳಸಲು ತೀರ್ಪು ಸಿಕ್ಕಿರುವುದು ನನ್ನ ಭಾಗ್ಯ. ನರೇಂದ್ರ ಮೋದಿ ಅವರ ಪೋಟೊ ಬಳಕೆ ಮಾಡಬಾರದು ಎಂಬ ಬಿಜೆಪಿ ಚಿಂತನೆಗೆ ಹಿನ್ನಡೆಯಾಗಿದೆ. ಚುನಾವಣೆಗೆ ನರೇಂದ್ರ ಮೋದಿಯವರ ಪೋಟೋವನ್ನು ಸಂಪೂರ್ಣ ವಾಗಿ ಬಳಸುತ್ತೇನೆ. ಈ ಚುನಾವಣೆಯಲ್ಲಿ ಗೆದ್ದ ಬಳಿಕ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ವಿರುದ್ಧ ಜಡ್ಜ್ ಮುಂದೆ ಸಂತ್ರಸ್ತೆ ಹೇಳಿಕೆ: ಬಂಧನದ ಆತಂಕ ಹೆಚ್ಚಳ
ಶಿರಾಳಕೊಪ್ಪದಲ್ಲಿ ಸಭೆಗೆ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿರಾಳಕೊಪ್ಪದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಮಾನವಾಗುವ ರೀತಿಯಲ್ಲಿ ಬಿಜೆಪಿ ನಾಯಕರು ನಡೆದುಕೊಂಡಿ ದ್ದಾರೆ. ಪ್ರಜಾಭುತ್ವದಲ್ಲಿ ಯಾವುದೇ ವ್ಯಕ್ತಿ ಚುನಾವಣೆಗೆ ನಿಲ್ಲುವ ಅಧಿಕಾರ ಇರುತ್ತದೆ. ಚುನಾವಣೆಗೆ ಸ್ಪರ್ಧೆ ಮಾಡುವ ವ್ಯಕ್ತಿ ತನಗೆ ಯಾಕೆ ಮತ ಕೊಡಬೇಕು ಎಂದು ಹೇಳುವುದಕ್ಕೆ ಪೂರ್ಣ ಸ್ವತಂತ್ರವೂ ಇದೆ. ಆದರೆ, ಬೇರೆ ಯಾರು ಪ್ರಚಾರ ಮಾಡಬಾರದು ಎಂದು ಗೂಂಡಾ ರಾಜಕೀಯ ಮೂಲಕ ತಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.
ನನ್ನ ಸ್ನೇಹಿತರು, ಹಿತೈಷಿಗಳು ಶಿರಾಳಕೊಪ್ಪದಲ್ಲಿ ಸಭೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡು ಚುನಾವಣೆ ಆಯೋಗದ ಅಧಿಕಾರಿಗಳಿಂದ ಪರವಾನಿಗೆಯನ್ನೂ ಪಡೆದಿದ್ದರು. ಆದರೆ, ಸಭೆ ನಡೆಸುವ ಸಂದರ್ಭದಲ್ಲಿ ಕೆಲ ಗೂಂಡಾಗಳು ಹೋಗಿ ಇಲ್ಲಿ ಸಭೆ ಮಾಡೋಂಗಿಲ್ಲ, ಇಲ್ಲಿ ಕೂರಂಗಿಲ್ಲ ಎಂದು ಸಭೆಗೆ ಸೇರಿದ ಮಹಿಳೆಯರನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕೂಡ ದೊಡ್ಡ ರಸ್ತೆ ನಡುವೆ ನಿಂತು ಸಾರ್ವಜನಿಕವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟರು. ಈ ರೀತಿ ಗೂಂಡಾಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ನಾನೆಲ್ಲ ನಿಮ್ಮನ್ನೆ ಬೆಂಬಲಿಸುತ್ತೇವೆ ಎಂದು ನೆರೆದಿದ್ದ ಸಾವಿರಾರು ಮಂದಿ ಹೇಳಿದ್ದು ನನ್ನ ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದರು.
ದೇವಸ್ಥಾನ ಸಮಿತಿಯವರೂ ನಮಗೆ ಅವಕಾಶ ಕೊಟ್ಟಿದ್ದರು. ಇಲಾಖೆಯೂ ನಮಗೆ ಅನುವು ಮಾಡಿ ಕೊಟ್ಟಿತ್ತು. ಆದರೆ, ಕೆಲ ಕಿಡಿಗೇಡಿಗಳು ದೇವಸ್ಥಾನ ಸಮಿತಿಯವರ ಬಳಿ ಹೋಗಿ ನಿಮಗೆ ಒಂದು ಕೋಟಿ ಕೊಡಿಸುತ್ತೇವೆ ಎಂದು ಹೇಳಿ ಗೂಂಡಾಗಿರಿ ನಡೆಸಿದ್ದಾರೆ. ನನ್ನ 40 ವರ್ಷದಲ್ಲಿ ಈ ರೀತಿ ಯಾವ ಪಕ್ಷವೂ ಗೂಂಡಾಗಿರಿ ರಾಜಕೀಯ ಮಾಡಿದ್ದು ನಾನು ನೋಡಿಲ್ಲ. ಸೋಲುತ್ತೇನೆ ಎಂಬ ಭಯದಿಂದ ಈ ರೀತಿ ಕುತಂತ್ರ ರಾಜಕೀಯ ಮಾಡುತ್ತಿರುವುದು ಖಂಡಿನೀಯ. ಮುಂದೆ ಏನಾದರೂ ಇದೇ ರೀತಿ ಆದರೆ ನಾನು ಬೇರೆ ರೀತಿ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಹುಲ್ ಗಾಂಧಿ ಪಿಎಂ ಆಗಲೆಂದು ಪಾಕಿಸ್ತಾನ ಬಯಕೆ: ಪ್ರಧಾನಿ ಮೋದಿ
ಬಿಜೆಪಿ ಆಕ್ಷೇಪಕ್ಕೆ ಕೋರ್ಟ್ ಸೊಪ್ಪಾಕಿಲ್ಲ!: ಈಶ್ವರಪ್ಪ ಮೋದಿ ಪೋಟೋವನ್ನು ಬಳಕೆ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕು ಎಂದು ಬಿಜೆಪಿಯವರು ಕೋರ್ಟ್‌ಗೆ, ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದ್ದರು. ಆದರೆ, ಚುನಾವಣೆ ಆಯೋಗ, ಕೋರ್ಟ್ ಬಿಜೆಪಿಯವರ ಆಕ್ಷೇಪಕ್ಕೆ ಸೊಪ್ಪಾಕಿಲ್ಲ ಎಂದು ಕುಟುಕಿದರಲ್ಲದೆ, ಗಣಪತಿ ಹಿಂದೂ ಸಮಾಜದ ಆರಾಧ್ಯ ದೈವ. ಗಣಪತಿ, ಈಶ್ವರಪ್ಪ ಪೋಟೋ ಬಳಸಬೇಡಿ ಎಂದು ಕೋರ್ಟ್ ಹೋಗಲು ಸಾಧ್ಯವೇ? ಹಾಗೆ ಮೋದಿಯ ಪೋಟೋವೂ ಹೌದು. ಅವರನ್ನು ಪೋಟೋ ಬಳಕೆಗೆ ಪೂರ್ಣ ಅಧಿಕಾರ ಸಿಕ್ಕಿರುವುದು ಸಂತಸ ತಂದಿದೆ. ಬರುವ ದಿನದಲ್ಲಿ ಕೇವಲ ಮೋದಿ ಪೋಟೊ ಬಳಕೆ ಮಾಡುವುದಲ್ಲ. ಅವರ ಹೋರಾಟ, ಸಿದ್ಧಾಂತವನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.