ಗ್ಯಾರಂಟಿ ಕಾರ್ಡ್‌ ಬೇಕಿಲ್ಲ, ಸಾಧನೆಯೇ ನಮಗೆ ರಿಪೋರ್ಟ್‌ ಕಾರ್ಡ್‌: ಬಿ.ಎಲ್‌.ಸಂತೋಷ್‌

ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ ಸರ್ಕಾ​ರ​ಗಳು ಮಾಡಿದ ಸಾಧನೆಗಳ ರಿಪೋರ್ಟ್‌ ಕಾರ್ಡ್‌ ಇದೆ. ನಾವು ಗ್ಯಾರೆಂಟಿ ಕಾರ್ಡ್‌ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು.

No Need for Guarantee Card Achievement Is Our Report Card Says BL Santosh gvd

ಶಿವಮೊಗ್ಗ (ಮೇ.01): ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ ಸರ್ಕಾ​ರ​ಗಳು ಮಾಡಿದ ಸಾಧನೆಗಳ ರಿಪೋರ್ಟ್‌ ಕಾರ್ಡ್‌ ಇದೆ. ನಾವು ಗ್ಯಾರೆಂಟಿ ಕಾರ್ಡ್‌ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು. ಇಲ್ಲಿನ ಪೇಸ್‌ ಕಾಲೇಜ್‌ ಆವರಣದಲ್ಲಿರುವ ಜಯಲಕ್ಷ್ಮೇ ಈಶ್ವರಪ್ಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಮರಸ್ಯ ಸಮಾವೇಶದಲ್ಲಿ ಅವರು ಮಾತನಾಡಿ, ಮತದಾರರ ಮನವೊಲಿಸುವುದು ಹೇಗೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಕಳೆದ ಬಾರಿ ನಾವು ಬಿಜೆಪಿಯಲ್ಲಿ ಸೋತಿದ್ದೇವೆ. ಆದರೆ, ಈ ಬಾರಿ ಅಲ್ಲೂ ಗೆದ್ದು ಆ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಬೇಕು. ನಮಗೆ ಶಿವಮೊಗ್ಗ ಮಾತ್ರವಲ್ಲ, ಎಲ್ಲೆಲ್ಲಿ ಶಕ್ತಿ ಇದೆಯೊ, ಅಲ್ಲೆಲ್ಲಾ ಗೆಲ್ಲಬೇಕು. ರಾಜ್ಯದ ಜನ ಬಿಜೆಪಿ ಪರವಾಗಿದ್ದಾರೆ ಎಂಬುದು ಸರ್ವೆಗಳೇ ಹೇಳಿವೆ. ಅಧಿಕಾರಕ್ಕೆ ಬರಲು ಯಾವುದೇ ಸಮಸ್ಯೆ ಇಲ್ಲ ಎಂದರು.

ಮುಸ್ಲಿಂ ಮೀಸಲಾತಿ ಕಿತ್ತುಕೊಂಡಿದ್ದೇವೆ: ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದ ಕಡೆಗೆ ಹೆಜ್ಜೆ ಇಡುತ್ತ ಹೋಗುತ್ತಿದ್ದೇವೆ. ದೇಶದ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುತ್ತಲೆ ಬಂದಿದ್ದೇವೆ. ಎಸ್‌ಸಿ ಸಮಾಜಕ್ಕೆ ಶೇ.2 ಹೆಚ್ಚಳ, ಎಸ್‌ಟಿ ಸಮುದಾಯಕ್ಕೆ ಶೇ.4ರಷ್ಟುಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ. ಆದರೆ, ಕಾಂಗ್ರೆಸ್‌ನವರು ಒಳಮೀಸಲಾತಿ ವಿರೋಧಿಸುತ್ತಿದ್ದಾರೆ. ಒಳಮೀಸಲು ವಿರುದ್ಧ ಅಪಪ್ರಚಾರಗಳನ್ನು ನಾವು ಎದುರಿಸುತ್ತೇವೆ. ನಾವು ಜಾತಿಗಳ ಆಧಾರದಲ್ಲಿ ಮೀಸಲಾತಿ ನೀಡಿದ್ದೇವೆ​ಯೇ ಹೊರತು, ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿಲ್ಲ. 

ಯಾರು ಏನೇ ಅಪಪ್ರಚಾರ ಮಾಡಿದರೂ ಜೆಡಿಎಸ್‌ ಅಧಿಕಾರಕ್ಕೆ ಬರುವುದು ತಪ್ಪಿಸಲಾಗದು: ಎಚ್‌ಡಿಕೆ

ಆದರೆ, ಕಾಂಗ್ರೆಸ್‌ನವರು ಧರ್ಮದ ಆಧಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.4ರಷ್ಟುಹೆಚ್ಚು ಮೀಸಲಾತಿಯನ್ನು ನೀಡಿದ್ದರು. ಇದನ್ನು ಬೊಮ್ಮಯಿ ಸರ್ಕಾರ ಕಿತ್ತುಕೊಂಡು ಶೇ.2ರಷ್ಟುಒಕ್ಕಲಿಗರಿಗೆ, ಇನ್ನೆರಡು ಪರ್ಸೆಂಟ್‌ ಮೀಸಲಾತಿಯನ್ನು ಲಿಂಗಾಯತ ಸಮಾಜಕ್ಕೆ ಕೊಟ್ಟಿದ್ದಾರೆ ಎಂದು ಹೇಳಿದರು. ಸಮಾವೇಶದಲ್ಲಿ ಶಿವಮೊಗ್ಗ ನಗರ ಅಭ್ಯರ್ಥಿ ಎಸ್‌.ಎನ್‌.ಚನ್ನಬಸಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ತು ಸದಸ್ಯ ಎಸ್‌.ರುದ್ರೇಗೌಡ, ಪಕ್ಷದ ಪ್ರಮುಖರಾದ ಭಾರತಿ ಶೆಟ್ಟಿ, ಆರ್‌.ಕೆ.ಸಿದ್ರಾಮಣ್ಣ , ಎಂ.ಬಿ.ಭಾನುಪ್ರಕಾಶ್‌, ಜಗದೀಶ್‌ ಮತ್ತಿತರರು ಇದ್ದರು.

ಪಿಎಫ್‌ಐ ಕೇಸ್‌ಗಳ ರದ್ದುಪಡಿ​ಸಿ​ದ ಕಾಂಗ್ರೆಸ್‌ ಬೇಕೇ?: ಕಳೆದ 9 ವರ್ಷಗಳಲ್ಲಿ ಒಬ್ಬ ಭಾರತೀಯನಿಗೂ ವಿದೇಶದಲ್ಲಿ ತೊಂದರೆಯಾಗಲು ಪ್ರಧಾನಿ ಮೋದಿ ಬಿಟ್ಟಲ್ಲ. ‘ಆಪರೇಶನ್‌ ಕಾವೇರಿ’ ಮೂಲಕ ಹಕ್ಕಿಪಿಕ್ಕಿ ಸಮುದಾಯದ ಎಲ್ಲರನ್ನೂ ವಾಪಸ್‌ ಕರೆ ತಂದಿದ್ದಾರೆ. ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದರು. ಆದರೆ ಮೋದಿಗೆ ಧನ್ಯವಾದ ಹೇಳಲಿಲ್ಲ ಎಂದು ಬಿ.ಎಲ್‌.ಸಂತೋಷ್‌ ಆರೋಪಿಸಿದರು. ಬಿಜೆಪಿ ಸರ್ಕಾರಕ್ಕೆ ಜನ ಪೂರ್ಣ ಬಹುಮತ ನೀಡಲಿಲ್ಲ. ಆದರೆ, ನೀಡಿದ ಮತಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದೇವೆ. 238 ಕೋಟಿ ಡೋಸ್‌ ಕೊರೋನಾ ವ್ಯಾಕ್ಸಿನ್‌ ನೀಡಿದ್ದೇವೆ. ಅದಕ್ಕಾಗಿ ಶೇ.90 ಜನ ದುಡ್ಡು ನೀಡಿಲ್ಲ. 

ಇಂದು ಕೊರೋನಾಗೆ 11 ಮಾದರಿಯ ವ್ಯಾಕ್ಸಿನ್‌ ಲಭ್ಯವಿವೆ. 303 ಸೀಟು ಬಂದ ನಂತರ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದೆವು. 50 ವರ್ಷದಿಂದ ನಮ್ಮ ಪ್ರಣಾಳಿಕೆಯಲ್ಲಿ ಮೊದಲ ಅಂಶ ಆರ್ಟಿಕಲ್‌ 370 ರದ್ದತಿ, ಎರಡನೆಯದು ಮಂದಿರ ನಿರ್ಮಾಣವಾಗಿತ್ತು. ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಬಂದ ಕಾರಣ ಇವೆರಡನ್ನೂ ಮಾಡಿದ್ದೇವೆ ಎಂದರು. ಆದರೆ, 2014ರಲ್ಲಿ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಶಾಂತಿ ಊರುಗಳಲ್ಲಿ ಗಲಭೆ ಮಾಡಿ, ಅಶಾಂತಿ ಮೂಡಿಸಿದ್ದ ಪಿಎಫ್‌ಐ ಸಂಘಟನೆಗೆ ಬೆಂಬಲ ಕೊಡುತ್ತ ಬಂತು. ಪಿಎಫ್‌ಐ ಸಂಘಟನೆ ಮೇಲಿದ್ದ ಎಲ್ಲ ಕೇಸುಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆದು ರಾಜ್ಯದಲ್ಲಿ ಮತ್ತೆ ಅಶಾಂತಿ ನೆಲೆಸುವಂತೆ ಮಾಡಿದೆ. ಇಂತಹ ಸರ್ಕಾರ ನಮಗೆ ಬೇಕಾ? ಎಂಬುದು ಜನ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.

ಕೆಂಪೇಗೌಡ ಜಯಂತಿ ಮಾಡಲು ಬಿಜೆಪಿ ಬರಬೇಕಾಯಿತು: ಕೆಂಪೇಗೌಡ, ಟಿಪ್ಪು ದೇವನಹಳ್ಳಿಯಲ್ಲಿಯೇ ಹುಟ್ಟಿದರೂ ಕಾಂಗ್ರೆಸ್‌ನವರು ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕೆ, ಓಟ್‌ ಬ್ಯಾಂಕ್‌ಗಾಗಿ ಟಿಪ್ಪು ಜಯಂತಿ ಮಾಡಿಕೊಂಡು ಬಂದರು. ನಮ್ಮ ನಾಡಿನಲ್ಲೇ ಹುಟ್ಟಿದ ಕೆಂಪೇಗೌಡ ಜಯಂತಿ ಮಾಡಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಕಾಂಗ್ರೆಸ್‌ನವರು ಒಂದು ಸಮುದಾಯದ ಓಲೈಕೆಗೆ ರಾಜಕೀಯ ಮಾಡಿದರೆ, ಬಿಜೆಪಿ ಎಲ್ಲ ಸಮಾಜ ಸೇರಿಸಿಕೊಂಡು ಮುಂದುವರಿಯುತ್ತಿದೆ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ವರದಿಯನ್ನು ಜನರ ಮುಂದೆ ಇಟ್ಟು ಮತ ಕೇಳುತ್ತೇವೆ. ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಬಿ.ಎಲ್‌.ಸಂತೋಷ್‌ ವಿಶ್ವಾಸ ವ್ಯಕ್ತಪಡಿಸಿದರು.

ತಮಿ​ಳರಂತೆ ಕನ್ನ​ಡಿ​ಗರು ಪ್ರಾದೇಶಿಕ ಪಕ್ಷವನ್ನು ಉಳಿಸಿ: ಎಚ್‌.ಡಿ.ದೇವೇಗೌಡ

ದಾಖಲೆ ಮತದಿಂದ ಚೆನ್ನಿ ಗೆಲ್ಲಿಸಿ: ರಾಜ್ಯದಲ್ಲಿ ಕಾಂಗ್ರೆಸ್‌ನವರು ಏನನ್ನು ಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲಿ ದೊಡ್ಡ ಲೀಡರ್‌ ಇದ್ದಾರೆ. ಬಿಜೆಪಿಯಲ್ಲಿ ಝೀರೋ ನಾಯಕತ್ವ ಇದೆ. ಇಲ್ಲಿ ಎಲ್ಲರೂ ಕಾರ್ಯರ್ತರೇ. ಬಿಜೆಪಿ ಮನೆಯಲ್ಲಿ ಅವಿಶ್ವಾಸ ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅವಿಶ್ವಾಸ ಇರೋದು ಹೊರಗಡೆ ಹೋಗುತ್ತಾರೆ. ಕಾಂಗ್ರೆಸ್‌ನಂಥ ಪಕ್ಷಗಳಿಗೆ ಮತ ಹಾಕುವುದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ. ಅವರಿಗೆ ಯಾರು ಮತ ಹಾಕದ ರೀತಿಯಲ್ಲಿ ನಾನು ನೋಡಿಕೊಳ್ಳುವಂತ ಸಂಕಲ್ಪ ಮಾಡಬೇಕು. ಶಿವಮೊಗ್ಗ ನಗರದಲ್ಲಿ ಕಳೆದ ಬಾರಿ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದರು. ಈ ಬಾರಿ ಚನ್ನಬಸಪ್ಪ ಅವರನ್ನು ಅದಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಇಲ್ಲದಿದ್ದರೆ ಅದು ಈಶ್ವರಪ್ಪ ಅವರಿಗೆ ಮಾಡಿದ ಅವಮಾನ ಆಗುತ್ತದೆ. ಹೀಗಾಗಿ ಈ ಬಾರಿ ದಾಖಲೆ ಮತದಿಂದ ಗೆಲ್ಲಿಸಬೇಕು ಎಂದು ಬಿ.ಎಲ್‌. ಸಂತೋಷ್‌ ಕಾರ್ಯಕರ್ತರಿಗೆ ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios