Asianet Suvarna News Asianet Suvarna News

Congressನಲ್ಲಿ ನನಗೆ ಅನ್ಯಾಯವಾಗಿಲ್ಲ: ಬಿ.ಕೆ.ಹರಿಪ್ರಸಾದ್‌

‘ನನಗೇನು ಕಾಂಗ್ರೆಸ್‌ ಪಕ್ಷದಲ್ಲಿ ಅನ್ಯಾಯ ಆಗಿಲ್ಲ’ ಎಂದು ಸ್ಪಷ್ಟಪಡಿಸಿರುವ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್, ‘ನನಗೆ ವರ್ಕಿಂಗ್‌ ಕಮಿಟಿ ಸದಸ್ಯನ ಸ್ಥಾನ ನೀಡಿದ್ದಾರೆ’. ಇದಕ್ಕಿಂತ ಬೇರೆ ಹುದ್ದೆ ಬೇಕಾ ಎಂದು ಪ್ರಶ್ನಿಸಿದ್ದಾರೆ.

No injustice to me in Congress Says BK Hariprasad At Kolar gvd
Author
First Published Oct 30, 2023, 2:30 AM IST

ಕೋಲಾರ (ಅ.30): ‘ನನಗೇನು ಕಾಂಗ್ರೆಸ್‌ ಪಕ್ಷದಲ್ಲಿ ಅನ್ಯಾಯ ಆಗಿಲ್ಲ’ ಎಂದು ಸ್ಪಷ್ಟಪಡಿಸಿರುವ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್, ‘ನನಗೆ ವರ್ಕಿಂಗ್‌ ಕಮಿಟಿ ಸದಸ್ಯನ ಸ್ಥಾನ ನೀಡಿದ್ದಾರೆ’. ಇದಕ್ಕಿಂತ ಬೇರೆ ಹುದ್ದೆ ಬೇಕಾ ಎಂದು ಪ್ರಶ್ನಿಸಿದ್ದಾರೆ. ನಗರದ ಸಾಯಿಧಾಮ ಹೋಟೆಲ್ ಸಭಾಂಗಣದಲ್ಲಿ ಅತಿ ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನನಗೆ ಕಾಂಗ್ರೆಸ್‌ನಲ್ಲಿ ಅನ್ಯಾಯ ಆಗಿದೆ ಎಂದು ಅನ್ನಿಸುತ್ತಿಲ್ಲ. ಕೆಲ ಹಳೆಯ ರಾಜಕೀಯ ಕತೆಗಳಿಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಆರ್‌ಎಸ್‌ಎಸ್‌ ಚಡ್ಡಿ ವಿಚಾರವಾಗಿ ತಮ್ಮ ಹೆಸರಿಟ್ಟು ಹರಿಪ್ರಸಾದ್‌ ಹೇಳಿಕೆ ನೀಡಿಲ್ಲ ಎಂದು ಸ್ವತ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಉತ್ತರ ಕೊಟ್ಟಿದ್ದಾರೆ. 

ಅಲ್ಲದೆ, ಸಿದ್ದರಾಮಯ್ಯ ಕೂಡ ಎಲ್ಲಿಯೂ ನನ್ನ ವಿರುದ್ಧ ಮಾತನಾಡಿಲ್ಲ. ಇವತ್ತಿನ ಸಭೆಯಲ್ಲಿ ಕೂಡ ನನಗೆ ಅನ್ಯಾಯವಾಗಿದೆ ಎಂದು ಯಾರೂ ಹೇಳಿಲ್ಲ. ನಾನು ಈಗಲೂ ರಾಷ್ಟ್ರ ರಾಜಕಾರಣದಲ್ಲಿ ಇರುವ ವ್ಯಕ್ತಿ. ಇಂದಿನ ಸಭೆಯನ್ನು ಪಕ್ಷಾತೀತವಾಗಿ ಕರೆಯಲಾಗಿದೆ. ನಾನೇನು ಪ್ರತ್ಯೇಕವಾಗಿ ಸಭೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ದೊರಕಿಸಲು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾನತೆ, ಸೌಲಭ್ಯಗಳನ್ನು ಕಲ್ಪಿಸಲು ಜಾತಿ ಮತ್ತು ಜನಗಣತಿ ಸಮೀಕ್ಷೆ ಅತ್ಯಾವಶ್ಯಕ ಎಂದು ಇದೇ ವೇಳೆ ಅವರು ಪ್ರತಿಪಾದಿಸಿದರು.

50 ಕೋಟಿ ಆಮಿಷ ಗೊತ್ತಿಲ್ಲ, ಆಪರೇಶನ್‌ ಕಮಲಕ್ಕೆ ಬಿಜೆಪಿಯವರು ಯತ್ನಿಸಿದ್ದಾರೆ: ಸಿದ್ದರಾಮಯ್ಯ

ರಾಜಕೀಯ ಉದ್ದೇಶಿತ ಸಭೆ ಅಲ್ಲ: ಪ್ರಜಾ ಪ್ರಭುತ್ವದ ಆಶಯಗಳನ್ನು ಬಲಗೊಳಿಸಲು ಮತ್ತು ಅತಿ ಹಿಂದುಳಿದ ಸಮುದಾಯಗಳನ್ನು ಸಂಘಟಿಸಲು ಈ ಸಭೆಯಲ್ಲಿ ಭಾಗವಹಿಸಿದ್ದೇನೆಯೇ ಹೊರತು ಇದು ಯಾವುದೇ ರಾಜಕೀಯಕ್ಕೆ ಸಂಬಂಧಿಸಿದಲ್ಲ ಎಂದು ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದರು. ನಗರದ ಸಾಯಿಧಾಮ ಹೋಟೆಲ್ ಸಭಾಂಗಣದಲ್ಲಿ ಅತಿ ಹಿಂದುಳಿದ ವರ್ಗಗಳ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಇದು ರಾಜಕೀಯ ಉದ್ದೇಶಿತ ಸಭೆಯಲ್ಲ ಹಾಗಾಗಿ ರಾಜಕೀಯವಾಗಿ ಏನೊಂದು ಪ್ರಶ್ನಿಸಬೇಡಿ ಎಂದರು.

ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ: ನಿಕ್ಲೆಗ್ ನಮಸ್ಕಾರ, ಎಂಚ ಉಲ್ಲರ್ ಎಂದ ಸಿದ್ಧರಾಮಯ್ಯ

ಕೆಲವೊಂದು ಸಭೆಗಳಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿರುವುದನ್ನು ಸರ್ಕಾರದ ಗಮನಕ್ಕೆ ತರುವುದು ತಪ್ಪಲ್ಲ, ಅದನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲ ಅದು ಸಾಮಾಜಿಕ ನ್ಯಾಯ ದೊರಕಿಸುವುದು ನಾಯಕನ ಜವಾಬ್ದಾರಿಯಾಗಿದೆ ಎಂದರು. ಕಳೆದ 2011ರಲ್ಲಿ ಜಾತಿಜನಗಣತಿ ಸಮೀಕ್ಷೆಗಳು ಮಾಡಲಾಗಿತ್ತು ಅದನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಅವಕಾಶ ನೀಡಲಿಲ್ಲ, ಈ ಹಿಂದಿನ ಕಾಂತರಾಜ ವರದಿಯಲ್ಲಿ ದೋಷ ಕಂಡು ಬಂದಿದ್ದರಿಂದ ಜಾರಿಗೆ ತರಲಿಲ್ಲ. ಜಯಪ್ರಕಾಶ್ ಹೆಗಡೆ ವರದಿಯ ಪ್ರಕಾರ ಜಾರಿಗೆ ತರಬೇಕಾಗಿದೆ, ಮೀಸಲಾತಿಗೂ ಜಾತಿಜನಗಣತಿಗೂ ಸಂಬಂಧವಿಲ್ಲ. ಸೌಲಭ್ಯಗಳು ಸಮರ್ಪಕವಾಗಿ ಹಂಚಿಕೆಯಾಗುವ ದೆಸೆಯಲ್ಲಿ ಜಾತಿ ಮತ್ತು ಜನಗಣತಿ ಅವಶ್ಯಕವಾಗಿದೆ ಎಂದು ಹೇಳಿದರು.

Follow Us:
Download App:
  • android
  • ios