Asianet Suvarna News Asianet Suvarna News

ಆಪರೇಶನ್‌ ಕಮಲಕ್ಕೆ ಕಾಂಗ್ರೆಸ್‌ ಯಾವ ಶಾಸಕರೂ ಬಲಿಯಾಗಲ್ಲ: ಆಯನೂರು ಮಂಜುನಾಥ್‌

ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿ, ಅವರನ್ನೇ ಮೂಲೆಗುಂಪು ಮಾಡಿದ ಬಿಜೆಪಿಯ ಗುಂಪೊಂದು ಈಗ ಆಪರೇಷನ್‌ ಕಮಲಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಅವರಿಗೇ ಬೆಲೆ ಇಲ್ಲದ ಪಕ್ಷದಲ್ಲಿ ಯಾರನ್ನು ನಂಬಿ ಬಿಜೆಪಿಗೆ ಹೋಗುತ್ತಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಪ್ರಶ್ನಿಸಿದರು. 

No Congress MLA was a victim of Operation Kamala Says Ayanur Manjunath gvd
Author
First Published Oct 31, 2023, 4:45 AM IST

ಶಿವಮೊಗ್ಗ (ಅ.31): ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿ, ಅವರನ್ನೇ ಮೂಲೆಗುಂಪು ಮಾಡಿದ ಬಿಜೆಪಿಯ ಗುಂಪೊಂದು ಈಗ ಆಪರೇಷನ್‌ ಕಮಲಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಅವರಿಗೇ ಬೆಲೆ ಇಲ್ಲದ ಪಕ್ಷದಲ್ಲಿ ಯಾರನ್ನು ನಂಬಿ ಬಿಜೆಪಿಗೆ ಹೋಗುತ್ತಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಪ್ರಶ್ನಿಸಿದರು. 

ಪ್ರೆಸ್‌ ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಧಿಕಾರದಾಸೆಗೆ ಬಿಜೆಪಿಯವರ ಸರ್ಕಾರ ಬೀಳಿಸಲು ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ ₹50 ಕೋಟಿ ಆಫರ್‌ ಕೊಡುತ್ತಿದ್ದಾರೆ. ಕೆಲ ಬಿಜೆಪಿಯವರು ಇದನ್ನು ಒಪ್ಪಿಕೊಂಡಿದ್ದಾರೆ. ಆಪರೇಶನ್ ಕಮಲ ಮಾಡಿದರೆ ತಪ್ಪೇನು ಏನು ಮಾಜಿ ಸಚಿವರೊಬ್ಬರು ಹೇಳಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅವರನ್ನು ಅವಮಾನಿಸಿ, ತೊಂದರೆ ಕೊಟ್ಟ ಗುಂಪೊಂದು, ಈಗ ಕಾಂಗ್ರೆಸ್‌ ಶಾಸಕರಿಗೆ ಹಣದ ಆಮಿಷವೊಡ್ಡುತ್ತಿದೆ ಎಂದು ಲೇವಡಿ ಮಾಡಿದರು.

ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟ: ಸಚಿವ ಎಚ್.ಕೆ.ಪಾಟೀಲ್

₹50 ಕೋಟಿ ಆಫರ್‌- ಇಡಿ ತನಿಖೆಯಾಗಲಿ: ಅಧಿಕಾರದ ಆಸೆಗೆ ಬಿಜೆಪಿ ಆಪರೇಶನ್ ಕಮಲಕ್ಕೆ ಮುಂದಾಗಿರುವುದು ಅವರ ಅಧಿಕಾರ ದಾಹ ಮತ್ತು ಅಧಿಕಾರವಿಲ್ಲದೇ ಚಡಪಡಿಸುತ್ತಿರುವುದರ ದ್ಯೋತಕವಾಗಿದೆ. ಆಪರೇಶನ್‍ಗೆ ಕಾಂಗ್ರೆಸ್ ಶಾಸಕರಾರೂ ಬಲಿಯಾಗುವುದಿಲ್ಲ ಎಂದರು. ಬಿಜೆಪಿಯವರ ಶಾಸಕರಿಗೆ ₹50 ಕೋಟಿ ಹಣ ಕೊಡುವಷ್ಟು ಹಣ ಇದೆ ಎಂದರೆ ಎಷ್ಟು ಹಣ ಇದೆ, ಯಾರ ಬಳಿ ಇದೆ ಎಂದು ಬಹಿರಂಗವಾಗಬೇಕಾದರೆ, ಈ ಬಗ್ಗೆ ಇಡಿ ತನಿಖೆ ಮಾಡಬೇಕು. ಬಿಜೆಪಿ ಮುಖಂಡರು ಅಕ್ರಮ ಹಣ ವರ್ಗಾವಣೆ ನಡೆಸುತ್ತಿರುವುದರ ಬಗ್ಗೆ ದೂರು ದಾಖಲಿಸಿಕೊಂಡು, ಬಂದ ಮಾಹಿತಿ ಆಧಾರದಲ್ಲೇ ತನಿಖೆಗೆ ಮುಂದಾಗಬೇಕು. 

ಇಡಿ ಕಣ್ಮುಚ್ಚಿ ಕುಳಿತುಕೊಳ್ಳಬಾರದು. ಎಲ್ಲರಿಗೂ ಒಂದೇ ನ್ಯಾಯ ಎನ್ನುವುದನ್ನು ತೋರಿಸಿಕೊಡಬೇಕು ಎಂದು ಒತ್ತಾಯಿಸಿದರು. ನಾಯಕತ್ವವಿಲ್ಲದೆ ಸೊರಗಿರುವ ಅನಾಯಕತ್ವದ ಬಿಜೆಪಿ ಈಗ ಕುಸಿತವಾಗುತ್ತಿದೆ. ಮೊದಲು ಪ್ರತಿಪಕ್ಷ ನಾಯಕನ್ನು ನೇಮಿಸಿಕೊಳ್ಳಲಿ, ಆನಂತರ ದಕ್ಷ ರಾಜ್ಯಾಧ್ಯಕ್ಷನ ನೇಮಕ ಮಾಡಲಿ, ಬಳಿಕ ಆಪರೇಶ್ ಬಗ್ಗೆ ಮಾತನಾಡಲಿ. ಇವ್ಯಾವು ಇಲ್ಲದೆ ಆಪರೇಶನ್ ಕಮಲ ನಡೆಸುತ್ತೇವೆ ಎಂದರೆ ಅವರಿಂದಾಗದ ಕೆಲಸ ಎಂದು ಹೇಳಿದರು.

ಸರ್ಕಾರಗಳ ಎಡವಟ್ಟುಗಳಿಂದ ಕಾವೇರಿ ಸಮಸ್ಯೆ ಜೀವಂತ: ಎಚ್.ವಿಶ್ವನಾಥ್

ಮತದಾರರ ನೋಂದಣೀ ಆಗ್ತಿಲ್ಲ: ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ. ಇನ್ನೂ ಸಾಕಷ್ಟು ಪದವೀಧರರು ನೋಂದಾಯಿಸಿಕೊಂಡಿಲ್ಲ, ಬದಲಿಗೆ ನಿರಾಸೆ ತೋರಿಸುತ್ತಿದ್ದಾರೆ. ಇದನ್ನು ಬಿಟ್ಟು ಕೂಡಲೇ ಹೆಸರು ನೋಂದಾಯಿಸಿಕೊಳ್ಳಬೇಕು. ಖಾಸಗಿ, ಸರ್ಕಾರಿ ವೃತ್ತಿಯಲ್ಲಿ ಇರುವವರು ಮತದಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಸರ್ಕಾರ ತಮಗೆ ಸಿಗುವ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸುವ ಮುನ್ನ ತಮ್ಮ ಹಕ್ಕನ್ನೂ ಚಲಾಯಿಸಬೇಕು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಧೀರರಾಜ ಹೊನ್ನವಿಲೆ. ಐಡಿಯಲ್ ಗೋಪಿ, ಶಿ.ಜು.ಪಾಶ ಮತ್ತಿತರರು ಇದ್ದರು.

Follow Us:
Download App:
  • android
  • ios