ಮೋದಿ ಹೆಸರಿಲ್ಲದೇ ಬಿಹಾರ ಚುನಾವಣೆ ಎದುರಿಸೋದು ನಿತೀಶ್‌ಗೆ ಕಷ್ಟಸಾಧ್ಯ
ತೇಜಸ್ವಿ ಯಾದವ್ ಜೊತೆ ಕಿತ್ತಾಡಿ 70 ಟಿಕೆಟ್ ತೆಗೆದುಕೊಂಡಿರುವ ಕಾಂಗ್ರೆಸ್ ಎಷ್ಟುಗೆಲ್ಲುತ್ತದೆ ಎನ್ನುವುದು ಸರ್ಕಾರ ರಚನೆಗೆ ಬಹಳ ಮುಖ್ಯ. ಮಹಾಗಠಬಂಧನ ಸರ್ಕಾರ ಬರಬೇಕು ಅಂದರೆ ಕಾಂಗ್ರೆಸ್ ಕನಿಷ್ಠ 40 ಸೀಟು ಗೆಲ್ಲಬೇಕು.
ನವದೆಹಲಿ (ನ. 06): ಒಂದು ಕಾಲದಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆಲ್ಲಬೇಕೆಂದರೆ ಸಚಿನ್ ಸೆಂಚುರಿ ಹೊಡೆಯಬೇಕು ಎಂಬ ಸ್ಥಿತಿ ಇತ್ತು. ಈಗ ಬಿಜೆಪಿಯದೂ ಅದೇ ಸ್ಥಿತಿ. ಮೋದಿ ಹೆಸರು ಹೇಳದೆ, ಮೋದಿ ಬಂದು ಭಾಷಣ ಮಾಡದೆ ಯಾವುದೇ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಸ್ಥಿತಿಯಿದೆ.
ಬಿಹಾರದಲ್ಲಿ ಕೂಡ ನಿತೀಶ್ ಕುಮಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಅತೀವ ಆಕ್ರೋಶವಿದೆ. ಅದನ್ನು ಅಡಿಗೆ ಹಾಕಿ ಹೇಗಾದರೂ ಮಾಡಿ ಎನ್‌ಡಿಎಯನ್ನು ಗೆಲ್ಲಿಸಲು ಮೋದಿ ಸಾಕಷ್ಟುಓಡಾಡುತ್ತಿದ್ದಾರೆ. ಆದರೆ ಎರಡು ಹಂತದ ಮತದಾನ ಮುಗಿದ ನಂತರ ಬಿಜೆಪಿ ಕ್ಯಾಂಪ್‌ನಲ್ಲಿ ದೊಡ್ಡ ಮಟ್ಟದ ಉತ್ಸಾಹವೇನೂ ಕಾಣುತ್ತಿಲ್ಲ.
ಬಿಹಾರ ಚುನಾವಣೆ 2020 : ಜಾತಿ ಕಾರಣಗಳು ಏನೇನು?
ಮೊದಲು ಬಿಜೆಪಿ 80, ನಿತೀಶ್ 60 ಎನ್ನುತ್ತಿದ್ದ ದಿಲ್ಲಿ ಬಿಜೆಪಿ ನಾಯಕರು ಖಾಸಗಿಯಾಗಿ 110 ದಾಟಿದರೆ ದಮ್ಮಯ್ಯ ಎನ್ನುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಯು ಮತಗಳು ಪರಸ್ಪರ ವರ್ಗಾವಣೆ ಆಗುವ ಬಗ್ಗೆ ಯಾರಲ್ಲೂ ವಿಶ್ವಾಸ ಕಾಣುತ್ತಿಲ್ಲ. 2015ರಂತೆ ಈಗ ಮತ್ತೊಮ್ಮೆ ಬಿಹಾರದಲ್ಲಿ ಬಿಜೆಪಿಯ ಹಡಗು ಗಂಗೆಯ ನಟ್ಟನಡುವೆ ಬಂದು ಸಿಕ್ಕಿ ಹಾಕಿಕೊಂಡಂತೆ ಕಾಣುತ್ತಿದೆ. ಜೊತೆಗೆ ಈ ಬಾರಿ ನಿತೀಶರ ಭಾರವೂ ಜೊತೆಗಿದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ