Asianet Suvarna News Asianet Suvarna News

ನಿಖಿಲ್‌ಗೆ ರಾಜಕೀಯ ಸಹವಾಸ ಬೇಡ, ಸಿನಿಮಾ ಮಾಡೋಕೆ ಹೇಳಿದ್ದೇನೆ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ನಿಖಿಲ್‌ಗೆ ರಾಜಕೀಯ ಸಹವಾಸ ಬೇಡ. ನಿನಗೆ ಭಗವಂತ ಕೊಟ್ಟಿರುವ ಕಲೆಯಂತೆ ಸಿನಿಮಾ ಮಾಡು ಎಂಬುದಾಗಿ ಸಲಹೆ ಕೊಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Nikhil Kumaraswamy will not contest in the Lok Sabha elections former CM HD Kumaraswamy info sat
Author
First Published Aug 28, 2023, 1:06 PM IST

ಮಂಡ್ಯ (ಆ.28): ರಾಜ್ಯದಲ್ಲಿ ಲೋಸಕಣೆ ಅಥವಾ ವಿಧಾನಸಭೆ ಸೇರಿದಂತೆ ಮುಂದಿನ 5 ವರ್ಷಗಳ ಕಾಲ ನಿಖಿಲ್‌ ಕುಮಾರಸ್ವಾಮಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನಿನಗೆ ರಾಜಕೀಯ ಸಹವಾಸ ಬೇಡ. ನಿನಗೆ ಭಗವಂತ ಕೊಟ್ಟಿರುವ ಕಲೆಯಂತೆ ಸಿನಿಮಾ ಮಾಡು ಎಂಬುದಾಗಿ ಸಲಹೆ ಕೊಟ್ಟಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿಖಿಲ್‌ಗೆ ಸಲಹೆ ನೀಡಿದ್ದೇನೆ ರಾಜಕೀಯದ ಸಹವಾಸ ಹೋಗಬೇಡ. ನಿನಗೆ ಭಗವಂತ ಕೊಟ್ಟಿರೋ ಕಲೆ ಸಿನಿಮಾ ಮಾಡು. ಮುಂದಿನ ಐದು ವರ್ಷ ನಿಖಿಲ್ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ದಯವಿಟ್ಟು ರಾಜಕೀಯ ಜಂಗುಳಿ ಬಿಟ್ಟು ಕಲಾವಿದನಾಗಿ ಬದುಕು ರೂಪಿಸಿಕೊಳ್ಳಲು ಹೇಳಿದ್ದೇನೆ. ನಿಖಿಲ್ ಚುನಾವಣೆಗೆ ನಿಲ್ಲುವ ಪ್ರಶ್ನೆ ಇಲ್ಲ. ಹೀಗಾಗಲೇ ಮೂರು ಚಿತ್ರಗಳನ್ನು ನಿರ್ಮಾಣ ಮಾಡಲು ಕೆಲವರು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸೇರುವ ಸುಳಿವು ನೀಡಿದ ಮುನೇನಕೊಪ್ಪ? ಬಿಜೆಪಿ ಇನ್ನೊಂದು ವಿಕೆಟ್‌ ಪತನ

ಮಂಡ್ಯ ಜಿಲ್ಲೆ ಶಾಸಕರ ಒತ್ತಡಕ್ಕೆ ನಿಖಿಲ್‌ ತಲೆದಂಡ ಕೊಟ್ಟಾಯ್ತು: ಸಿನಿಮಾ ಮಾಡಲು ನಿಖಿಲ್ ಮುಖ ಮಾಡಿದ್ದಾರೆ. ಹೀಗಾಗಲೇ ಎರಡು ಬಾರಿ‌ ನಿಖಿಲ್ ಸೋತಿದ್ದಾನೆ. ಮಂಡ್ಯ ಎಂಪಿಗೆ ನಿಲ್ಲೂವಾಗಲೂ ಬೇಡಾ ಅಂದಿದ್ದೆ. ನಿಖಿಲ್ ಮಂಡ್ಯದಲ್ಲಿ ನಿಲ್ಲಲು ತಯಾರು ಇರಲಿಲ್ಲ. ಶಾಸಕರು ಹಾಗೂ ಕಾರ್ಯಕರ್ತರ ಒತ್ತಡದಿಂದ ಚುನಾವಣೆಗೆ ತಲೆ ಕೊಟ್ಟ. ಸೋಲು ಗೆಲುವು ಇರುತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ದೇವೇಗೌಡರು, ನಾನು ಎಲ್ಲರೂ ಸೋತಿದ್ದೇವೆ. ಜನಾಭಿಪ್ರಾಯ ಏನು ಇದೆ ಅದಕ್ಕೆ ತಲೆಬಾಗಬೇಕು. ನಾನು ಒತ್ತಡಗಳ ಮೇಲೆ ಚುನಾವಣೆ ಮಾಡಲ್ಲ. ಸದ್ಯಕ್ಕೆ ನಿಖಿಲ್‌ಗೆ ರಾಜಕೀಯ ಬೇಡಾ ಅಂತಾ ಹೇಳಿದ್ದೇನೆ ಎಂದು ಭಾವುಕರಾಗಿ ನುಡಿದರು.

ರಾಮನಗರದಲ್ಲೂ ನಿಖಿಲ್‌ ಕುತಂತ್ರಕ್ಕೆ ಬಲಿಯಾದ: ಇನ್ನು ಮುಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನದ ಬಗ್ಗೆ ನೋಡೋಣಾ, ಅವನ ಹಣೆಯಲ್ಲಿ ಬರೆದಿದ್ದರೆ ನಾನು ತಪ್ಪಿಸೋಕೆ‌ ಆಗಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನ ಜೀವನವನ್ನು ನೀನು ರೂಪಿಸಿಕೋ ಎಂದು ನಿಖಿಲ್‌ಗೆ ಹೇಳಿದ್ದೇನೆ. ಭಗವಂತ ನಿಖಿಲ್‌ಗೆ ಒಂದು ಕಲೆ ಕೊಟ್ಟಿದ್ದಾನೆ. ಆ ಕಲೆಯಲ್ಲಿ‌ ಮುಂದುವರೆಯಪ್ಪಾ ಅಂತಾ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ 5 ವರ್ಷ ಚುನಾವಣೆಗೆ ತರಲ್ಲ. ನಿಖಿಲ್ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಇದೀಗ ಅದೇ ಜನ ಪಶ್ಚಾತ್ತಾಪ ಪಡುವಂತೆ ಆಗಿದೆ. ಇದೇ ರಾಮನಗರದ ಜನರು ಎಲ್ಲಾ ನೋಡ್ತಾ ಇದ್ದಾರೆ. ರಾಮನಗರವನ್ನು ಹೇಗೆ ಉದ್ಧಾರ ಮಾಡ್ತಾ ಇದಾರೆ ಅಂತಾ ನೋಡ್ತಾ ಇದೀನಿ ಎಂದು ತಿಳಿಸಿದರು.

ಮೈಸೂರಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಹೆಚ್ಚಿದ ಬೇಡಿಕೆ: ಯಾರಾಗ್ತಾರೆ 'ಕೈ' ಅಭ್ಯರ್ಥಿ..?

ಕೃಷಿ ಅಧಿಕಾರಿಗಳ ವರ್ಗಾವಣೆಗೆ ಕ್ಯಾಟಗರಿ ವೈಸ್‌ ದರ ನಿರ್ಧಾರ: ಕೃಷಿ ಸಚಿವರ ವಿರುದ್ಧ ಕೇಳಿ ಬಂದ ಪ್ರಕರಣದ ಹಿನ್ನೆಲೆಯ ಬಗ್ಗೆ ಮಾತನಾಡಿದ ಅವರು, ನನ್ನ ಮೇಲೆ ಯಾಕೆ ಇವರು ಬೆಟ್ಟು ತೋರಿಸುತ್ತಾರೆ? ರಾಜ್ಯಪಾಲರಿಗೆ ಪತ್ರ ಬರೆದವರು ಕೆಆರ್ ನಗರದ ಅಧಿಕಾರಗಳು. ಪತ್ರ ಅಸಲಿಯೋ, ನಕಲಿಯೋ ಚರ್ಚೆ ಆಗ್ತಿದೆ. ಆದರೆ ನನ್ನ ಮೇಲೆ ಆರೋಪ ಮಾಡ್ತಾರೆ. ಈ ಕ್ಷಣದವರೆಗೆ ಆ ವಿಷಯದ ಬಗ್ಗೆ ಚರ್ಚೆಯೇ ನಾನು ಮಾಡಿರಲಿಲ್ಲ. ಯಾಕೆ ಈ ಸಬ್ಜೆಕ್ಟ್ ಬಂತು, ಸಮ್ಮನೆ ಈ ವಿಷಯ ಬರುತ್ತಾ. ಎಡಿ, ಜೆಡಿಗಳ ಬಳಿ ಕ್ಯಾಟಗರಿ ವೈಸ್ ರೇಟ್ ಫಿಕ್ಸ್ ಆಗಿದೆ. ಯಾವ ಅಧಿಕಾರಗಳು ಧೈರ್ಯವಾಗಿ ಹೇಳಲು ಸಾಧ್ಯವಿಲ್ಲ.

ಕೃಷಿ ಅಧಿಕಾರಿಗಳ ಪತ್ರದ ವಿಚಾರ ನಕಲಿಯೋ, ಅಸಲಿಯೋ ತನಿಖೆ ಆಗಬೇಕು:  ಇನ್ನು ವರ್ಗಾವಣೆ ಡಿಮ್ಯಾಂಡ್ ಇದೆ, ದುಡ್ಡು ಕೊಟ್ಟಿದ್ದೀವಿ ಎಂದು ಯಾವ ಅಧಿಕಾರಿ ಹೇಳಲ್ಲ. ಅದ್ಯಾವುದೋ ನ್ಯೂಸ್ ಪೇಪರ್ ಹಿಡಿದು ಕುಮಾರಸ್ವಾಮಿ ಕಾಲದಲ್ಲಿ ರೇಟ್ ಫಿಕ್ಸ್ ಆಗಿತ್ತು ಅಂತಾರೆ. ನನಗೆ ಗಾಬರಿಯಾಯಿತು, ಆ ಪೇಪರ್ ಕಟಿಂಗ್ ನೋಡಿದ್ರೆ ಅದರಲ್ಲಿ ಈ ಮಹಾನುಭಾವರದ್ದೆ ಇದೆ. ಈಗ ಕೃಷಿ ಅಧಿಕಾರಗಳು ಬರೆದ ಪತ್ರ ವಿಚಾರ ತನಿಖೆ ಮಾಡಿದ್ದಾರೆ. ಇಬ್ಬರು ಕೃಷಿ ಅಧಿಕಾರಗಳನ್ನ ಅರೆಸ್ಟ್ ಮಾಡಿದ್ದಾರೆ. ಪತ್ರ ಅಸಲಿಯೋ, ನಕಲಿಯೋ ಒಂದು ಭಾಗ. ಅದಕ್ಕಿಂತ ಹೆಚ್ಚು ಪತ್ರದಲ್ಲಿರುವ ಸಾರಾಂಶ ಅಸಲಿಯೋ, ನಕಲಿಯೋ ತಿಳಿಯಬೇಕು. ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios