ಚಾಮರಾಜನಗರ: ಪಾದಯಾತ್ರೆ ಕೈ ಬಿಟ್ಟು ಕಾರಿನಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆದ ನಿಖಿಲ್
ತಾಳಬೆಟ್ಟಕ್ಕೆ ತಡವಾಗಿ ಆಗಮಿಸಿದ್ದರಿಂದ ದೇವಾಸ್ಥಾನ ಬಾಗಿಲು ಮುಚ್ಚುವ ಹಿನ್ನಲೆಯಲ್ಲಿ ಕಾರಿನಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ.
ಚಾಮರಾಜನಗರ(ಫೆ.17): ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆ ಕೈ ಬಿಟ್ಟು ಕಾರಿನಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದ ವರೆಗೆ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ತೆರಳಬೇಕಿತ್ತು. ನಿಖಿಲ್ ಕುಮಾರಸ್ವಾಮಿ ಕೈಗೊಂಡಿದ್ದ 2ನೇ ವರ್ಷದ ಪಾದಯಾತ್ರೆ ಇದಾಗಿದೆ.
Karnataka Politics : 500ಕ್ಕೂ ಅಧಿಕ ಮಂದಿ ಬಿಜೆಪಿ ನಾಯಕರು ಜೆಡಿಎಸ್‌ಗೆ
ಹನೂರು ಕ್ಷೇತ್ರದ ಹಲವು ಗ್ರಾಮಗಳಲ್ಲಿ ನಿಖಿಲ್ ಕುಮಾರಸ್ವಾಮಿ ಸಂಚಾರ ನಡೆಸಿದ್ದಾರೆ. ಕಾರ್ಯಕರ್ತರ ಸಮಾವೇಶ ಮುಗಿಸಿ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಹೊರಟಿದ್ದರು. ಆದರೆ, ನಿಖಿಲ್ ಕುಮಾರಸ್ವಾಮಿ ತಾಳಬೆಟ್ಟಕ್ಕೆ ತಡವಾಗಿ ಆಗಮಿಸಿದ್ದರು. ದೇವಾಸ್ಥಾನ ಬಾಗಿಲು ಮುಚ್ಚುವ ಹಿನ್ನಲೆ, ಕಾರಿನಲ್ಲಿ ತೆರಳಿ ಮಾದಪ್ಪನ ದರ್ಶನ ಪಡೆದಿದ್ದಾರೆ. ಮಾದಪ್ಪನ ದರ್ಶನ ಪಡೆದ ಬಳಿಕ ನಿಖಿಲ್ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿಖಿಲ್ ಜೊತೆಗೆ ಫೋಟೋ ತೆಗೆಸಿಕೊಳ್ಳಲೂ ಜನರು ಮುಗಿಬಿದ್ದಿದ್ದರು.