ನವದೆಹಲಿ[ಡಿ.18]: ಕೇಂದ್ರದಲ್ಲಿನ ಅಧಿಕಾರೂರೂಢ ಬಿಜೆಪಿ, 2020ರ ಫೆಬ್ರುವರಿ ವೇಳೆಗೆ ನೂತನ ಅಧ್ಯಕ್ಷರನ್ನು ಹೊಂದುವ ಸಾಧ್ಯತೆ ಇದೆ. ಜೊತೆಗೆ ಇದಕ್ಕೂ ಮುನ್ನ ವಿವಿಧ ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನೂ ಆಯ್ಕೆ ಮಾಡುವ ಸಾಧ್ಯತೆ ಇದೆ.

4 ತಿಂಗಳಲ್ಲಿ ಭವ್ಯ ರಾಮ ಮಂದಿರ: ಅಮಿತ್ ಶಾ ಭರವಸೆಗೆ ಏನಂತೀರ?

ಜ.15ರಿಂದ ಉತ್ತರಾಯಣ ಕಾಲ ಆರಂಭವಾಗಲಿದ್ದು, ಬಳಿಕ ನೂತನ ಪದಾಧಿಕಾರಿಗಳ ಆಯ್ಕೆಗೆ ಪಕ್ಷ ಚಾಲನೆ ನೀಡಲಿದೆ. ಮೊದಲ ಹಂತದಲ್ಲಿ ವಿವಿಧ ರಾಜ್ಯಗಳಿಗೆ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗುವುದು. ಪಕ್ಷದಲ್ಲಿ ಪಾಲಿಸಿಕೊಂಡು ಬಂದಿರುವ ಸಂಪ್ರದಾಯದಂತೆ ಸಹಮತದ ಮೇರೆಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಆದರೆ ಇತ್ತೀಚೆಗೆ ಹೊಸ ಅಧ್ಯಕ್ಷರನ್ನು ಕಂಡ ಕರ್ನಾಟಕ, ಬಿಹಾರ, ರಾಜಸ್ಥಾನಗಳಂಥ ರಾಜ್ಯಗಳಲ್ಲಿ ಬದಲಾವಣೆ ಇರುವುದಿಲ್ಲ. ರಾಜ್ಯಾಧ್ಯಕ್ಷರ ಆಯ್ಕೆ ಬಳಿಕ ಪಕ್ಷಕ್ಕೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಪಕ್ಷದ ಸಂವಿಧಾನದಂತೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮುನ್ನ ಅರ್ಧಕ್ಕಿಂತಲೂ ಹೆಚ್ಚಿನ ರಾಜ್ಯಗಳಲ್ಲಿ ಸಂಘಟನಾತ್ಮಕ ಚುನಾವಣೆಗಳು ಮುಕ್ತಾಯ ಆಗಿರಬೇಕು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಭೆ ಫೆಬ್ರವರಿ ಕೊನೆಯ ಭಾಗದಲ್ಲಿ ನಡೆಯುವ ನಿರೀಕ್ಷೆ ಇದ್ದು, ಆ ವೇಳೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಅಥವಾ ನೂತನ ಅಧ್ಯಕ್ಷರ ಹೆಸರು ಅಂತಿಮಗೊಳಿಸಲಾಗುವುದು ಮೂಲಗಳು ತಿಳಿಸಿವೆ.ಬಹುಷಃ ಅದು ಫೆಬ್ರುವರಿ ವೇಳೆಗೆ ಸಾಧ್ಯವಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಗ ಬಿಜೆಪಿಯಲ್ಲೇ ಶುರುವಾಗಿದೆ ಭಾರೀ ಪೈಪೋಟಿ

ಬಿಜೆಪಿಯಲ್ಲಿ ಒಬ್ಬನಿಗೆ ಒಂದೇ ಹುದ್ದೆ ಎಂಬ ನೀತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೆ.ಪಿ. ನಡ್ಡಾ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಜೆಪಿಯ ಸಂಘಟನಾತ್ಮಕ ಚುನಾವಣೆಗಳು ಮುಕ್ತಾಯಗೊಂಡ ಬಳಿಕ ಅಮಿತ್‌ ಶಾ ಪಕ್ಷದ ಚುಕ್ಕಾಣಿಯನ್ನು ಜೆ.ಪಿ. ನಡ್ಡಾ ಅವರಿಗೆ ವಹಿಸಲಿದ್ದಾರೆ ಎಂದು ಭಾವಿಸಲಾಗಿದೆ.

ಡಿಸೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ