ಎಂಎಲ್‌ಎ ಆಗುವ ಕನಸು ಕಂಡಿರಲಿಲ್ಲ: ಶಾಸಕ ಪುಟ್ಟರಂಗಶೆಟ್ಟಿ

ಇತರ ಮುಂದುವರೆದ ಸಮಾಜದೊಂದಿಗೆ ಹೋಲಿಕೆ ಮಾಡಿಕೊಂಡರೆ ಉಪ್ಪಾರ ಸಮಾಜ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದಿದ್ದು ಮುಂದುವರೆದ ಜನಾಂಗದ ಸಾಲಿನಲ್ಲಿ ಜನಾಂಗ ನಿಲ್ಲಬೇಕಾದರೆ ಶಿಕ್ಷಣವೊಂದೆ ಪರಿಹಾರ ಎಂದು ಮಾಜಿ ಸಚಿವ, ಚಾ.ನಗರ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. 

Never dreamed of becoming an MLA Says MLA C Puttarangashetty gvd

ಕೊಳ್ಳೇಗಾಲ (ಜು.24): ಇತರ ಮುಂದುವರೆದ ಸಮಾಜದೊಂದಿಗೆ ಹೋಲಿಕೆ ಮಾಡಿಕೊಂಡರೆ ಉಪ್ಪಾರ ಸಮಾಜ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದಿದ್ದು ಮುಂದುವರೆದ ಜನಾಂಗದ ಸಾಲಿನಲ್ಲಿ ಜನಾಂಗ ನಿಲ್ಲಬೇಕಾದರೆ ಶಿಕ್ಷಣವೊಂದೆ ಪರಿಹಾರ ಎಂದು ಮಾಜಿ ಸಚಿವ, ಚಾ.ನಗರ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಅವರು ಕೊಳ್ಳೇಗಾಲ ಹಾಗೂ ಹನೂರು ತಾಲೂಕು ಉಪ್ಪಾರ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಪೋಷಕರು ನಮ್ಮ ಸಮಾಜ ಎಲ್ಲಾ ರಂಗಗಳಲ್ಲೂ ಮುನ್ನಡೆ ಸಾಧಿಸಬೇಕಾದರೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಶಪಥ ಮಾಡಬೇಕು.

ಸಮಾಜದ ಮಕ್ಕಳು ಅಭ್ಯುದಯ ಶಿಕ್ಷಣದಲ್ಲಿ ಅಡಗಿದೆ, ಶಿಕ್ಷಣಿಂದಲೇ ಸಮಾಜದ ಉನ್ನತಿ ಸಾಧ್ಯವಾಗಲಿದೆ ಎಂದರು. ಉಪ್ಪಾರ ಸಮಾಜದವರು ಪೊಲೀಸ್‌ ಹುದ್ದೆ, ಶಿಕ್ಷಕರು, ಉಪನ್ಯಾಸಕ ಇನ್ನಿತರೆ ಹುದ್ದೆ ಮಾತ್ರ ಅಲಂಕರಿಸಿದ್ದು ಅತ್ಯುನ್ನತ ಹುದ್ದೆಯಾದ ಐಎಎಸ್‌ ಹುದ್ದೆ ಅಲಂಕರಿಸಿಲ್ಲ, ಈ ನಿಟ್ಟಿನಲ್ಲಿ ಸಾಧಕ ವಿದ್ಯಾರ್ಥಿಗಳು ಪಣತೊಡಬೇಕು, ಐಎಎಸ್‌ ತೇರ್ಗಡೆ ಹೊಂದಿ ಸಾಧನೆ ಮಾಡಿದ ವಿದ್ಯಾರ್ಥಿಗೆ ಬಹುಮಾನದ ಜೊತೆ ಉತ್ತಮ ರೀತಿಯ ಸನ್ಮಾನದ ಗೌರವ ನೀಡುವೆ, ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆ ಅಲಂಕರಿಸಿ ಸಾಧಕರಾಗಿ ಎಂದರು.

ಮೊರಾರ್ಜಿ ಶಾಲೆಗೆ ಶಾಸಕ ಗಣೇಶ್‌ಪ್ರಸಾದ್‌ ಭೇಟಿ: ವಿದ್ಯಾರ್ಥಿಗಳಿಂದ ದೂರಿನ ಸುರಿಮಳೆ

ಯುವಕರು ವಿದ್ಯೆಗೆ ಹೆಚ್ಚಿನ ಆದ್ಯತೆ ನೀಡಿ: ನಾನು ಶಾಸಕನಾಗಬೇಕು ಎಂದು ಎಂದು ಕನಸ್ಸು ಕಂಡವನಲ್ಲ, ಸರ್ಕಾರಿ ಹುದ್ದೆ ಪಡೆಯಬೇಕು ಎಂಬ ಕನಸ್ಸು ನನಸಾಗಿತ್ತು, ಆದರೆ ನಾನು ಶಾಸಕನಾದೆ, ಪ್ರಾರಂಭದಲ್ಲಿ ಮಂಡಲ ಪಂಚಾಯಿತಿ ಉಪಾಧ್ಯಕ್ಷ ಸ್ಥಾನದಿಂದ ಜಿಪಂ ಉಪಾಧ್ಯಕ್ಷಸ್ಥಾನ, ನಂತರ ಶಾಸಕ, ಸಚಿವ ಬೀಹೆ ನಾನು ಹುದ್ದೆ ಅಲಂಕರಿಸಿದೆ. ಇದೆಲ್ಲಾ ಆದದ್ದು ನಾನು ಅಕ್ಷರ ಜ್ಞಾನ ಪಡೆದಿದ್ದರಿಂದ, ಹಾಗಾಗಿ, ಯುವಕರು ವಿದ್ಯೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉನ್ನತ ಸ್ಥಾನ, ಮಾನಗಳಿಸುವಂತವರಾಗಿ ಎಂದರು.

ಸೆಪ್ಟೆಂಬರ್‌ ತಿಂಗಳಲ್ಲಿ ಜಿಪಂ ಚುನಾವಣೆ: ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ಹಿನ್ನೆಲೆ ಉಪ್ಪಾರ ಸಮಾಜ ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜಕೀಯ ಸ್ಥಾನಮಾನ ಸಂಪಾದಿಸಿಕೊಳ್ಳಬೇಕು, ಉಪ್ಪಾರ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಘಟನೆ ಕುಂಠಿತವಾಗುತ್ತಿದ್ದು, ಇದರಲ್ಲಿ ನನ್ನ ಲೋಪವಿದೆಯೋ ಅಥವಾ ಸಮಾಜ ಸಂಘಟಿಸುವಲ್ಲಿ ವಿಫಲರಾಗುತ್ತಿದ್ದೆವೋ ಎಂಬ ಚಿಂತೆ ಕಾಡುತ್ತಿದೆ, ಸಮಾಜದಲ್ಲಿ ಬಿಗಿ ಹಿಡಿತ ತಪ್ಪುತ್ತಿದೆ. ಗಡಿ, ಮನೆ, ಕಟ್ಟೆಮನೆಯಲ್ಲಿನ ನ್ಯಾಯ ಪಂಚಾಯಿತಿಗಳಲ್ಲಿ ಕೈಗೊಂಡ ತೀರ್ಮಾನ ಸಹಾ ಇಂದು ಕಾನೂನು ಪ್ರಕ್ರಿಯೆಯಿಂದಾಗಿ ಜಾರಿಯಾಗುತ್ತಿಲ್ಲ, ಬದಲಿಗೆ ಕ್ಷೀಣಿಸುತ್ತಿದೆ. ಇದನ್ನೆಲ್ಲ ಅರಿತು ಸಮಾಜ ಹೆಚ್ಚು ಒಗ್ಗಟ್ಟು ಪ್ರದರ್ಶಿಸುವ ಜೊತೆಗೆ ಸಂಘಟಿತರಾಗಬೇಕಿದೆ ಎಂದರು.

ಶಾಸಕ ಎ.ಆರ್‌ ಕೃಷ್ಣಮೂರ್ತಿ, ಮೈಸೂರು ವೃತ್ತ ನಿರೀಕ್ಷಕ ಮಹದೇವಸ್ವಾಮಿ. ಕೆನರಾ ಬ್ಯಾಂಕ್‌ ಶಾಖೆಯ ಹಿರಿಯ ವ್ಯವಸ್ಥಾಪಕ ನಂಜುಂಡಸ್ವಾಮಿ, ಉಪ್ಪಾರ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪ್ರಿಯಾ ಶಂಕರ್‌, ಕಾರ್ಯದರ್ಶಿ ಮಾದೇಶ, ಗೌರವಾಧ್ಯಕ್ಷ, ಗೋವಿದರಾಜು, ರಾಜು, ಯಳಂದೂರು ಉಪ್ಪಾರ ನೌಕರ ರ ಸಂಘದ ಅಧ್ಯಕ್ಷ ರೇಚಣ್ಣ, ತಾಲೂಕು ಸಂಘಟನೆಗಳ ಅಧ್ಯಕ್ಷ ಸಿದ್ದಶೆಟ್ಟಿ, ಪುಟ್ಟರಸಶೆಟ್ಟಿ, ಡಯಟ್‌ ಉಪನ್ಯಾಸಕ ಅರಸಶೆಟ್ಟಿ, ಟಿಎಪಿಸಿಎಂಎಸ್‌ ಸದಸ್ಯ ಜಗದೀಶ್‌, ಎಎಸೈ ಶಂಕರರಾಜು, ಮಹದೇವಸ್ವಾಮಿ, ಬಂಗಾರು, ರಾಜು, ಪತ್ತಿನ ಸಂಘದ ಅದ್ಯಕ್ಷ ರವಿ, ರಮೇಶ್‌, ಚಿಕ್ಕತಾಂಡ ಶೆಟ್ಟಿಇದ್ದರು.

ಔಟ್ ಆಫ್‌ ದಿ ವೇ ಯಾರೂ ಹೋಗಬೇಡಿ: ಅಧಿಕಾರಿಗಳಿಗೆ ಡಿಕೆಶಿ ಖಡಕ್‌ ವಾರ್ನಿಂಗ್‌!

ತಳ ಸಮುದಾಯಕ್ಕೆ ಈ ಹಿಂದೆ ಶಿಕ್ಷಣ ಕನಸ್ಸಾಗಿತ್ತು, ಅಂಬೇಡ್ಕರ್‌ ಅವರ ಹೋರಾಟದ ಫಲವಾಗಿ ಇಂದು ಹಿಂದುಳಿದ ವರ್ಗ ಸಹ ಸಂಕಲ್ಪ ಪಡೆಯುವಂತಾಯಿತು. ಇಂದು ನಾವೆಲ್ಲರೂ ಅಂಬೇಡ್ಕರ್‌ ಅವರನ್ನು ಸ್ಮರಿಸಬೇಕಿದೆ. ಶಿಕ್ಷಕರ ಪರಿಶ್ರಮದಿಂದಾಗಿ ಚಾಮರಾಜನಗರ ಗಡಿಜಿಲ್ಲೆ ಎಸ್ಸೆಸ್ಸೆಲ್ಸಿ ಯಲ್ಲಿ ರಾಜ್ಯದಲ್ಲೆ 7ನೇ ಫಲಿತಾಂಶ ಗಳಿಸಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ಎನಿಸಿದೆ. ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡದರೆ ಅವರು ಸಾಧನೆಗೈಯಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಡೀಸಿ, ಎಸ್ಪಿಯಾಗುವ ಗುರಿ ತಲುಪಿ.
- ಎ. ಆರ್‌.ಕೃಷ್ಣಮೂರ್ತಿ, ಕೊಳ್ಳೇಗಾಲ ಶಾಸಕರು

Latest Videos
Follow Us:
Download App:
  • android
  • ios