ಸದಾಶಿವನಗರದ ಪರಮೇಶ್ವರ್‌ ನಿವಾಸಕ್ಕೆ ಭೇಟಿ ನೀಡಿದ್ದ ಸುರ್ಜೆವಾಲಾ ಅವರು, ಪ್ರಜಾಧ್ವನಿಯಂಥ ಜಂಟಿ ಬಸ್ಸು ಯಾತ್ರೆಗೆ ಚಾಲನೆ ನೀಡುವಾಗ ಪ್ರಮುಖ ಘೋಷಣೆಯನ್ನು ಮಾಡಬೇಕಿತ್ತು. ಹೀಗಾಗಿ ಪಕ್ಷದ ತೀರ್ಮಾನದಂತೆ ನಿಮಗೆ ಮಾಹಿತಿ ನೀಡಿಯೇ ಘೋಷಣೆ ಮಾಡಲಾಗಿದೆ. ಇದು ಪ್ರಣಾಳಿಕೆ ರಚನಾ ಸಮಿತಿಯನ್ನು ಕಡೆಗಣಿಸಬೇಕೆಂಬ ಉದ್ದೇಶದಿಂದ ಮಾಡಿಲ್ಲ ಎಂದು ಮನವೊಲಿಕೆ ಪ್ರಯತ್ನ ಮಾಡಿದರು. 

ಬೆಂಗಳೂರು(ಫೆ.02):  ಕೆಪಿಸಿಸಿ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷರಾದ ತಮ್ಮನ್ನು ನಿರ್ಲಕ್ಷ್ಯಿಸಿ ಚುನಾವಣಾ ಘೋಷಣೆಗಳನ್ನು ಪ್ರಕಟಿಸುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ಡಾ.ಜಿ. ಪರಮೇಶ್ವರ್‌ ಅವರನ್ನು ಬುಧವಾರ ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ಮನವೊಲಿಕೆ ಪ್ರಯತ್ನ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದಾಶಿವನಗರದ ಪರಮೇಶ್ವರ್‌ ನಿವಾಸಕ್ಕೆ ಭೇಟಿ ನೀಡಿದ್ದ ಸುರ್ಜೆವಾಲಾ ಅವರು, ಪ್ರಜಾಧ್ವನಿಯಂಥ ಜಂಟಿ ಬಸ್ಸು ಯಾತ್ರೆಗೆ ಚಾಲನೆ ನೀಡುವಾಗ ಪ್ರಮುಖ ಘೋಷಣೆಯನ್ನು ಮಾಡಬೇಕಿತ್ತು. ಹೀಗಾಗಿ ಪಕ್ಷದ ತೀರ್ಮಾನದಂತೆ ನಿಮಗೆ ಮಾಹಿತಿ ನೀಡಿಯೇ ಘೋಷಣೆ ಮಾಡಲಾಗಿದೆ. ಇದು ಪ್ರಣಾಳಿಕೆ ರಚನಾ ಸಮಿತಿಯನ್ನು ಕಡೆಗಣಿಸಬೇಕೆಂಬ ಉದ್ದೇಶದಿಂದ ಮಾಡಿಲ್ಲ ಎಂದು ಮನವೊಲಿಕೆ ಪ್ರಯತ್ನ ಮಾಡಿದರು ಎಂದು ಮೂಲಗಳು ತಿಳಿಸಿವೆ.

ತ್ಯಾಗ, ಬಲಿದಾನದ ಫಲವಾಗಿ ಭಾರತ ಬಲಿಷ್ಠವಾಗಿದೆ: ಡಾ.ಜಿ.ಪರಮೇಶ್ವರ್‌

ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌, ಪ್ರತಿ ಮನೆಯೊಡತಿಗೆ ಮಾಸಿಕ .2 ಸಾವಿರ ಸಹಾಯಧನ ಸೇರಿ ಕಾಂಗ್ರೆಸ್‌ನ ಪ್ರಮುಖ ಘೋಷಣೆಗಳನ್ನು ಪಕ್ಷದ ನಾಯಕರೇ ಮಾಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿರಬೇಕಿದ್ದ ಅಂಶಗಳನ್ನು ಮೊದಲೇ ಘೋಷಿಸುವ ಮೂಲಕ ಪ್ರಣಾಳಿಕೆ ರಚನಾ ಸಮಿತಿಯ ಪ್ರಾಮುಖ್ಯತೆಯನ್ನು ಕಳೆಯುತ್ತಿದ್ದಾರೆ. ತನ್ಮೂಲಕ ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆಂದು ಪರಮೇಶ್ವರ್‌ ಹೈಕಮಾಂಡ್‌ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
ಈ ಸಂಬಂಧ ಪರಮೇಶ್ವರ್‌ ನಿವಾಸಕ್ಕೆ ಭೇಟಿ ನೀಡಿದ ಸುರ್ಜೆವಾಲಾ ಮನವೊಲಿಸುವ ಪ್ರಯತ್ನ ಮಾಡಿದರು. ಈ ವೇಳೆ ಪರಮೇಶ್ವರ್‌ ಅವರೂ ಪೂರಕವಾಗಿ ಸ್ಪಂದಿಸಿದ್ದಾರೆಂದು ಹೇಳಲಾಗಿದೆ.