ತ್ಯಾಗ, ಬಲಿದಾನದ ಫಲವಾಗಿ ಭಾರತ ಬಲಿಷ್ಠವಾಗಿದೆ: ಡಾ.ಜಿ.ಪರಮೇಶ್ವರ್
ಅಖಂಡ ಭಾರತ ರಚನೆಗಾಗಿ ದೇಶದಲ್ಲಿ ಸಾವಿರಾರು ಮಂದಿ ತ್ಯಾಗ ಬಲಿದಾನ ಮಾಡಿದ್ದು ಅದರ ಫಲವಾಗಿ ಭಾರತವು ವಿಶ್ವದ ಮುಂದೆ ಬಲಿಷ್ಠ ದೇಶವಾಗಿ ನಿಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು. ಅವರು ಕೊರಟಗೆರೆ ಸ.ಪ.ಪೂ. ಕಾಲೇಜು ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಕೊರಟಗೆರೆ: ಅಖಂಡ ಭಾರತ ರಚನೆಗಾಗಿ ದೇಶದಲ್ಲಿ ಸಾವಿರಾರು ಮಂದಿ ತ್ಯಾಗ ಬಲಿದಾನ ಮಾಡಿದ್ದು ಅದರ ಫಲವಾಗಿ ಭಾರತವು ವಿಶ್ವದ ಮುಂದೆ ಬಲಿಷ್ಠ ದೇಶವಾಗಿ ನಿಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು. ಅವರು ಕೊರಟಗೆರೆ ಸ.ಪ.ಪೂ. ಕಾಲೇಜು ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನವು ಭದ್ರ ಬುನಾದಿಯಾಗಿದೆ, ವಿಶ್ವದಲ್ಲೆ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ, ಅತಿ ದೊಡ್ಡ ಎರಡನೇ ಜನಸಂಖ್ಯೆ ಹೊಂದಿರುವ ಭಾರತ ದೇಶವು ಒಂದು ಕಾಲದಲ್ಲಿ ಆಹಾರಕ್ಕೆ, ಔಷಧಿಗೆ ಹಾಗೂ ತಂತ್ರಜ್ಞಾನಗಳಿಗೆ ಬೇರೆ ದೇಶದ ಮುಂದೆ ಕೈಚಾಚುವ ಪರಿಸ್ಥಿತಿಯಲ್ಲಿದ್ದ ನಮ್ಮ ದೇಶವು ಇಂದು ಈ ಮೂರನ್ನು ಬೇರೆ ದೇಶಗಳಿಗೆ ನೀಡುತ್ತಿದೆ, ಆರ್ಥಿಕತೆಯಲ್ಲಿ ಸದೃಡವಾಗಿದೆ, ಇದಕ್ಕೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಹಾರ ಲಾಲ್ ನೆಹರು ನೀಡಿದ ಪಂಚವಾರ್ಷಿಕ ಯೋಜನೆಯೇ ಅಡಿಪಾಯವಾಗಿದೆ, ಭಾರತಕ್ಕೆ ಇಂದು ಬೇಕಾಗಿರುವುದು ಸೌಹಾರ್ಧಿತ ಮನೋಭಾವದ ವಾತಾವರಣ, ಜಾತ್ಯಾತೀತೆ, ಧರ್ಮ ಮತ್ತು ಜಾತಿಗಳ ಮಧ್ಯ ಉತ್ತಮ ಮನೋಭಾವ, ದೇಶದ ಐಕ್ಯತೆ, ಅಖಂಡ ತೆಯಾಗಿದ್ದು, ಭಾರತೀಯರಾದ ನಾವೆಲ್ಲರೂ ಅದನ್ನು ಪಾಲಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನರಸಿಂಹಮೂರ್ತಿ ದ್ವಜಾರೋಹಣ ಮಾಡಿ ಸಂದೇಶ ನೀಡಿದರು, ವಿವಿಧ ಶಾಲಾ ಮಕ್ಕಳು ಪೆರೇಡ್ ನಡೆಸಿ ಸಾಂಸ್ಕೃತಿ ಕಾರ್ಯಕ್ರಮ ನೀಡಿದರು,ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕರು ಲ್ಯಾಪ್‌ಟಾಪ್ ವಿತರಿಸಿದರು. ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷೆ ಕಾವ್ಯರಮೇಶ್, ಉಪಧ್ಯಕ್ಷೆ ಭಾರತಿಸಿದ್ದಮಲ್ಲಪ್ಪ, ತಾ.ಪಂ. ಇಓ ಡಾ.ದೊಡ್ಡಸಿದ್ದಯ್ಯ, ಕಾಸಾಪ ಅಧ್ಯಕ್ಷ ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಪ.ಪಂ.ಸದಸ್ಯ ಎ,ಡಿ.ಬಲರಾಮಯ್ಯ, ಕೆ,ಎನ್,ಲಕ್ಷ್ಮೀನಾರಾಯಣ್, ಸ್ಕೌಟ್ ಅಂಡ್ ಗೈಡ್‌್ಸ ಅಧ್ಯಕ್ಷ ಕೆ.ಆರ್.ಓಬಳರಾಜು ಸೇರಿದಂತೆ ಪ.ಪಂ.ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಇದ್ದರು
ಅಂಬೇಡ್ಕರ್ ಹೆಸರು ಸೂಚಿಸಿದ್ದು ಅಟಲ್
ಮೈಸೂರು (ಜ.08): ಒಬ್ಬರ ತುಷ್ಟೀಕರಣ ರಾಜನೀತಿಗೆ ವಿರುದ್ಧವಾದದ್ದು ಎಂದು ನಂಬಿದ್ದ ಅಂಬೇಡ್ಕರ್ ಅವರು ಏಕರೂಪ ನಾಗರೀಕ ಸಂಹಿತೆಯ ಪರವಾಗಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸಿಗರು ಬಿಜೆಪಿ ದಲಿತ ವಿರೋಧಿ, ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್ ವಿರೋಧಿ ಎಂದು ಬಿಂಬಿಸುತ್ತಾರೆ. ಆದರೆ ಸಂವಿಧಾನ ದಿನ ಆರಂಭಿಸಿದ್ದು ಪ್ರಧಾನಿ ಮೋದಿ. ಅಂಬೇಡ್ಕರ್ ಅವರು 1952ರಲ್ಲಿ ಸಂಸತ್ ಪ್ರವೇಶಿಸಲು ಜನಸಂಘ ಬೆಂಬಲ ನೀಡಿತ್ತು.
ಜನತಾ ಪಕ್ಷ ದೇಶದಲ್ಲಿ ಅಧಿಕಾರದಲ್ಲಿದ್ದಾಗ ಅಂಬೇಡ್ಕರ್‌ಗೆ ಭಾರತರತ್ನ ನೀಡಬೇಕು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರು ಶಿಫಾರಸ್ಸು ಮಾಡಿದ್ದರು. ಅದು ಹೇಗೆ ಬಿಜೆಪಿ ದಲಿತ ವಿರೋಧಿಯಾದೀತು ಎಂದು ಅವರು ಪ್ರಶ್ನಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮುದಾಯದ ತುಷ್ಟೀಕರಣ ನೀತಿಯನ್ನು ಅವರು ವಿರೋಧಿಸಿದ್ದರು. ಏಕರೂಪ ನಾಗರೀಕ ಸಂಹಿತೆಯ ಪರವಾಗಿ ಅವರು ಅಭಿಪ್ರಾಯ ಹೊಂದಿದ್ದರು. ಸಂವಿಧಾನದ ಮೂಲಕ ಅವರು ನಮಗೆ ಸಮಾನತೆಯ ಅವಕಾಶ ನೀಡಿದ್ದಾರೆ. ಅವರನ್ನು ನಾವು ಸ್ಮರಿಸಬೇಕು ಎಂದರು.
ನಾಟಕ ಮಾಡುವ ವೇಳೆಯೆ ಹೃದಯಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!
ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್‌ನಿಂದ: ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್ ಪಕ್ಷದಿಂದ. ಆ ಪಕ್ಷದ ನಾಯಕರು ನಮಗೆ ನೀತಿ ಪಾಠ ಹೇಳುವ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸೌಧದಲ್ಲಿ ಸರ್ಕಾರಿ ಅಧಿಕಾರಿಯಿಂದ .10 ಲಕ್ಷ ವಶಪಡಿಸಿಕೊಂಡ ಮಾತ್ರಕ್ಕೆ ಕಾಂಗ್ರೆಸ್‌ನವರು ನಮ್ಮ ಪಕ್ಷದ ನಾಯಕರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಾನು ತನಿಖೆಗೆ ಮುಂಚೆ ಯಾರಿಗೂ ಕ್ಲಿನ್‌ಚಿಚ್ ಕೊಡಲ್ಲ. ಯಾರನ್ನು ದೂರುವುದಿಲ್ಲ ಎಂದರು.
ವಿಪಕ್ಷದವರು ಟೂಲ್‌ಕಿಟ್ ರಾಜಕಾರಣ ಮಾಡೋದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಚಿವರ ಆಪ್ತ ಸಹಾಯಕರ ಕಚೇರಿಯಲ್ಲಿ ಟಿಫನ್ ಕ್ಯಾರಿಯರ್‌ನಲ್ಲಿ ಹಣ ಸಿಕ್ಕಿತ್ತು. ಅದನ್ನು ಸಹ ಕಾಂಗ್ರೆಸ್ ನಾಯಕರು ನೆನಪಿಸಿಕೊಳ್ಳಲಿ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ವಿಧಾನಸೌಧದ ಗೋಡೆಗಳನ್ನು ಮುಟ್ಟಿದರೇ ಹಾಗೂ ರಾಜ್ಯದ ಸರ್ಕಾರಿ ಕಚೇರಿಗಳ ಗೋಡೆಗಳು ಸಹ ಕಾಸು, ಕಾಸು ಎನ್ನುತ್ತಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಮ್ಮ ಸರ್ಕಾರದಲ್ಲಿ ಆ ರೀತಿಯ ಭ್ರಷ್ಟಾಚಾರ ಇಲ್ಲ