ಹರ್ ಹರ್ ಮಹಾದೇವ್ ಮರಾಠಿ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಿದ ಹಾಗೂ ಚಿತ್ರಮಂದಿರದಲ್ಲಿ ದಾಂಧಲೆ ನಡೆಸಿದ ಆರೋಪದಡಿ ಎನ್‌ಸಿಪಿ ನಾಯಕ ಜಿತೇಂದ್ರ ಅವಹದ್‌ನನ್ನು ಬಂಧಿಸಲಾಗಿದೆ.
ಮುಂಬೈ(ನ.11): ಹರ್ ಹರ್ ಮಹಾದೇವ್ ಮರಾಠಿ ಚಿತ್ರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರಕ್ಕೆ ಯಾವುದೇ ಸಮುದಾಯದಿಂದ ವಿರೋಧ ವ್ಯಕ್ತವಾಗಿಲ್ಲ. ಆದರೆ ಎನ್‌ಸಿಪಿ ನಾಯಕ ಜೀತೇಂದ್ರ ಅಹವದ್ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಹರ್ ಹರ್ ಮಹಾದೇವ್ ಚಿತ್ರ ರಾಜಕೀಯ ಗಿಮಿಕ್ ಎಂದು ಆರೋಪಿಸಿರುವ ಜಿತೇಂದ್ರ ಅಹವದ್, ಚಿತ್ರ ಪ್ರದರ್ಶನ ನಡೆಯುತ್ತಿದ್ದ ಚಿತ್ರಮಂದಿರಕ್ಕೆ ತೆರಳಿ ಬೆಂಬಲಿಗರ ಜೊತೆ ದಾಂಧಲೆ ನಡೆಸಿದ್ದಾರೆ. ಎನ್‌ಸಿಪಿ ನಾಯಕನ ಅಬ್ಬರಕ್ಕೆ ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ. ಚಿತ್ರಮಂದಿರದ ಆಸನ ಸೇರಿದಂತೆ ಹಲವು ವಸ್ತುಗಳನ್ನು ಪುಡಿ ಮಾಡಲಾಗಿದೆ. ಈ ಕುರಿತು ಚಿತ್ರ ವೀಕ್ಷಕರು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂದ ಚಿತ್ರಮಂದಿರದ ಮಾಲೀಕರು ಎನ್‌ಸಿಪಿ ನಾಯಕನ ವಿರುದ್ಧ ದೂರು ನೀಡಿದ್ದರು. ಇದೀಗ ಜಿತೇಂದ್ರ ಅಹವದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಥಾಣೆಯ ವಿವಿಯನ್ ಮಾಲ್‌ನಲ್ಲಿ ಹರ್ ಹರ್ ಮಹಾದೇವ್ ಮರಾಠಿ ಚಿತ್ರ ಪ್ರದರ್ಶನ ನಡೆಯುತ್ತಿತ್ತು. ರಾತ್ರಿ ವೇಳೆ ತೆರಳಿದ ಜಿತೇಂಜ್ರ ಅಹವದ್, ದಾಂಧಲೆ ನಡೆಸಿದ್ದಾರೆ. ಚಿತ್ರದಲ್ಲಿ ಶಿವಾಜಿ ಮಹರಾಜರ ಅಸ್ಪಷ್ಟ ಇತಿಹಾಸ ಚಿತ್ರಿಸಲಾಗಿದೆ. ಇದು ರಾಜಕೀಯ ಗಿಮಿಕ್. ಮತಕ್ಕಾಗಿ ಹಿಂದೂ ಸಮುದಾಯವನ್ನು ಸೆಳೆಯಲು ಮಾಡಿದ ಗಿಮಿಕ್ ಎಂದು ಜಿತೇಂದ್ರ ಅಹವದ್ ಆರೋಪಿಸಿದ್ದಾರೆ.
ಕಾಂತಾರದ 'ಪಂಜುರ್ಲಿ' ದೈವದ ರೀಲ್ಸ್: ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಯುವತಿ ತಪ್ಪು ಕಾಣಿಕೆ..!
ಬೆಂಬಲಿಗರ ಜೊತೆ ಚಿತ್ರಮಂದಿರಕ್ಕೆ ತೆರಳಿದ ಜಿತೇಂದ್ರ ಅಹವದ್, ಚಿತ್ರಮಂದಿರದಲ್ಲಿ ದಾಂಧಲೆ ನಡೆಸಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ್ದಾರೆ. ಈ ವೇಳೆ ಪ್ರೇಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ಅಹವದ್ ಬೆಂಬಲಿಗರು ಹಲವು ಪ್ರಕ್ಷೇಕರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಿತ್ರ ಪ್ರದರ್ಶನ ಸ್ಥಗಿತಗೊಂಡ ಮಾಹಿತ ತಿಳಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸ್ಥಳಕ್ಕೆ ಆಗಮಿಸಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು.
ಈ ಘಟನೆಯನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಖಂಡಿಸಿದ್ದರು. ಚಿತ್ರಮಂದಿರಕ್ಕೆ ತೆರಳಿ ದಾಂಧಲೆ ನಡೆಸಿರುವುದು ತಪ್ಪು. ಇದನ್ನು ಸಹಿಸಲು ಸಾಧ್ಯವಿಲ್ಲ. ಹರ್ ಹರ್ ಮಹಾದೇವ್ ಚಿತ್ರದ ಕುರಿತು ಯಾವುದೇ ಅಕ್ಷೇಪವಿದ್ದರೆ ಅದನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ವ್ಯಕ್ತಪಡಿಸಲು, ದೂರು ದಾಖಲಿಸಲು ಅವಕಾಶವಿದೆ. ನಾನು ಈ ಚಿತ್ರ ನೋಡಿಲ್ಲ. ಇದರಲ್ಲಿ ಯಾವ ವಿಚಾರ ವಿವಾದಕ್ಕೆ ಕಾರಣವಾಗಿದೆ ಅನ್ನೋದು ತಿಳಿದಿಲ್ಲ. ಆದರೆ ಈ ರೀತಿಯ ಘಟನೆಗಳನ್ನುಸರ್ಕಾರ ಸಹಿಸುವುದಿಲ್ಲ ಎಂದು ಫಡ್ನವಿಸ್ ಹೇಳಿದ್ದರು. ಇದಾದ ಬಳಿಕ ಮಹಾರಾಷ್ಟ್ರ ಪೊಲೀಸರು ಜಿತೇಂದ್ರ ಅಹವದ್‌ನನ್ನ ಬಂಧಿಸಿದ್ದಾರೆ.
ಕಾಂತಾರ ಬಗ್ಗೆ ವಿವಾದಾತ್ಮಕ ಹೇಳಿಕೆ: ನಟ ಚೇತನ್ 'ನಾಲಾಯಕ್': ಯತ್ನಾಳ್
ಸೆಕ್ಷನ್ 323 ಹಾಗೂ ಸೆಕ್ಷನ್ 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಎನ್‌ಸಿಪಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಹರ್ ಹರ್ ಮಹಾದೇವ್ ಚಿತ್ರದಲ್ಲಿ ಬಿಜೆಪಿ ಪರವಾಗಿ ಕೆಲ ಅಂಶಗಳನ್ನು ತುರುಕಲಾಗಿದೆ ಎಂದು ಅಹವದ್ ಆರೋಪಿಸಿದ್ದಾರೆ. ಇತ್ತ ಸಿನಿಮಾ ವೀಕ್ಷಕರು ಯಾವುದೇ ವಿವಾದವಿಲ್ಲ, ಚಿತ್ರ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಮುಂಬೈನಲ್ಲಿ ಜಿತೇಂದ್ರ ಅಹವದ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
