ಕಾಂತಾರ ಬಗ್ಗೆ ವಿವಾದಾತ್ಮಕ ಹೇಳಿಕೆ: ನಟ ಚೇತನ್ 'ನಾಲಾಯಕ್': ಯತ್ನಾಳ್
Basangouda Patil Yatnal on Actor Chetan: ಮುಸ್ಲಿಮರು ಹಣ ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ ಎಂದು ನಟ ಚೇತನ್ ವಿರುದ್ದ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ (ಅ. 22): ನಟ ಚೇತನ (Actor Chetan) ಸಾಬ್ರ್(ಮುಸ್ಲಿಂ) ಏಜೆಂಟ್ ಆಗಿದ್ದಾರೆ, ಮುಸ್ಲಿಮರು ಹಣ ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ, ನಟ ಚೇತನ್ ನಾಲಾಯಕ್ (Basangouda Patil Yatnal) ಎಂದು ಶಾಸಕ ಯತ್ನಾಳ ವಾಗ್ದಾಳಿ ನಡೆಸಿದರು. ಕಾಂತಾರಾ (Kantara) ಸಿನಿಮಾ ವಿರುದ್ಧ ನಟ ಚೇತನ ಹೇಳಿಕೆ ವಿಚಾರಕ್ಕೆ ವಿಜಯಪುರದಲ್ಲಿ (Vijayapura) ಪ್ರತಿಕ್ರಿಯಿಸಿದ ಅವರು "ವಿಜಯಪುರಕ್ಕೂ ನಾಟಕ ಮಾಡಲು ಬಂದಿದ್ದ, ಹಿಂದುತ್ವ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ, ಹಿಂದೂ ವಿರೋಧಿ ಮಾತನಾಡಿದ್ರೇ ಶಬಾಷ್ ಎನ್ನುತ್ತಾರೆ ಎಂದು ಮಾತನಾಡ್ತಾರೆ" ಎಂದು ಹೇಳಿದರು.
ದೈವಾರಾಧನೆ ಸಂಸ್ಕೃತಿಯ ಭಾಗ ಆಗಿದೆ ಎಂದ ಅವರು "ದೈವದ ಬಗ್ಗೆ ಕೂಹಕ ಆಡಿದವರಿಗೆ ದೈವವೇ ನೋಡಿಕೊಳ್ಳುತ್ತೆ, ಹಿಂದೂ ವಿರೋಧಿ ಮಾತನಾಡಿದವರು ಏನೇನು ಆಗಿ ಹೋಗಿದ್ದಾರೆ, ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ" ಎಂದರು. ಕಾಂತಾರ ’ಚಿತ್ರದಲ್ಲಿ ತೋರಿಸಿರುವಂತೆ ಭೂತದ ಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ ಆಚರಣೆ ಅಲ್ಲ. ಅದು ಮೂಲ ನಿವಾಸಿಗಳಾದ ಆದಿವಾಸಿಗಳ ಹಬ್ಬ. ಅದನ್ನು ಹಿಂದೂ ಧರ್ಮದ ಜತೆ ಸೇರಿಸಿರುವುದು ತಪ್ಪು’ ಎಂದು ನಟ ಚೇತನ್ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಂಘನೆಗಳು, ದೈವ ನರ್ತರಕರು ಸೇರಿದಂತೆ ಅನೇಕರು ನಟ ಚೇತನ್ ಹೇಳಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಟ್ ಚೇತನ್ ವಿರುದ್ಧ ದೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರವು ದೇಶಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ನಟ ರಿಷಬ್ ಶೆಟ್ಟಿ ಭೂತ ಕೋಲ ದೈವರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದು ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಚೇತನ್ ತಮ್ಮದೇ ಶೈಲಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ದೈವಾರಾಧನೆ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದಿರುವ ನಟ ಚೇತನ್ ಅವರ ವಿವಾದಾತ್ಮಕ ಹೇಳಿಕೆಗೆ ಎಲ್ಲೆಡೆಯಿಂದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ನಟ ಚೇತನ್ ವಿರುದ್ಧ ಹುಬ್ಬಳ್ಳಿ ಹಾಗೂ ಕಾರ್ಕದಲ್ಲಿ ದೂರು ದಾಖಲಾಗಿದೆ.
ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತನಾಡಬಾರದು , ನಟ ಚೇತನ್‌ಗೆ ಸಚಿವ ಸುನೀಲ್ ಕುಮಾರ್ ಟಾಂಗ್
ಹಿಂದೂ ಜಾಗರಣ ವೇದಿಕೆ ದೂರು: ಹಿಂದೂ ಜಾಗರಣ ವೇದಿಕೆ ಕಾರ್ಕಳ ಘಟಕವು ಕರಾವಳಿಯ ಹಿಂದೂಗಳ ಮನೆ ಮನೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಮತ್ತು ನಡೆಸುವ ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೂ ಅಲ್ಲದೆ, ಹಿಂದೂ ಧರ್ಮೀಯರ ಭಾವನೆಗಳಿಗೆ ಪದೇ ಪದೇ ಧಕ್ಕೆ ತರುತ್ತಿರುವ ಕನ್ನಡ ನಟ ಚೇತನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಇನ್ನು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲೂ ದೂರು ದಾಖಲಾಗಿದೆ. ಹಿಂದೂ ಜಾಗರಣ ವೇದಿಕೆ ಮುಖಂಡ ಜಯತೀರ್ಥ ಮಳಗಿ ದೂರು ದಾಖಲಿಸಿದ್ದಾರೆ. ಚೇತನ್ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದೂರು ನೀಡಿದ್ದಾರೆ.